ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್ 68

Last Updated 23 ಏಪ್ರಿಲ್ 2019, 15:51 IST
ಅಕ್ಷರ ಗಾತ್ರ

1. ಇವುಗಳಲ್ಲಿ ಯಾವುದು ಕಾಮನ್‍ವೆಲ್ತ್ ದೇಶಗಳ ಪಟ್ಟಿಯಲ್ಲಿ ಇಲ್ಲ?

ಅ) ಭಾರತ ಆ) ಪಾಕಿಸ್ತಾನ ಇ) ನೇಪಾಳ ಈ) ಬಾಂಗ್ಲಾದೇಶ

2. ಜವಾಹರಲಾಲ್ ನೆಹರು ನಿಧನರಾದದ್ದು ಯಾವ ವರ್ಷದಲ್ಲಿ?

ಅ) 1965 ಆ) 1964 ಇ) 1963 ಈ) 1966

3. ‘ನೆಲ್ಯಾಡಿ ಬೀಡು’ ಎಂಬ ಸ್ಥಳನಾಮ ಯಾವ ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದೆ?‌

ಅ) ಉಡುಪಿ ಆ) ಕಟೀಲು ಇ) ಹೊರನಾಡು ಈ) ಧರ್ಮಸ್ಥಳ

4. ‘ಕೇಕ್ ವಾಕ್’ ಎಂಬ ಆಂಗ್ಲ ನುಡಿಗಟ್ಟಿನ ಅರ್ಥವೇನು?

ಅ) ಜಾರು ನಡಿಗೆ ಆ) ಸುಲಭವಾದ ಕೆಲಸ ಇ) ಕಷ್ಟದ ಕೆಲಸ ಈ) ಓಡುನಡಿಗೆ

5. ಗ್ಯಾಂಗ್ರಿನ್ ಎಂಬ ದೈಹಿಕ ಸಮಸ್ಯೆಗೆ ಪ್ರಮುಖ ಕಾರಣ ಯಾವುದು?

ಅ) ಅತಿಯಾದ ಮಧುಮೇಹ ಆ) ಹೃದಯಬೇನೆ
ಇ) ನರದೌರ್ಬಲ್ಯ ಈ) ರಕ್ತದ ಒತ್ತಡ

6. ‘ಟಿಂಗರಬುಡ್ಡಣ್ಣ’ ಯಾರು ಬರೆದ ಅಸಂಗತ ನಾಟಕ?

ಅ) ಚಂದ್ರಶೇಖರ ಕಂಬಾರ ಆ) ಚಂದ್ರಶೇಖರ ಪಾಟೀಲ
ಇ) ಸಿದ್ಧಲಿಂಗ ಪಟ್ಟಣಶೆಟ್ಟಿ ಈ) ಬಿ. ಸುರೇಶ್

7. ಚುನಾವಣೆ ಗುರುತಿನ ಚೀಟಿಗೆ ಸಂಬಂಧಿಸಿದಂತೆ ‘ಎಪಿಕ್’ ಎಂಬುದರ ವಿಸ್ತೃತರೂಪವೇನು?

ಅ) ಎಲೆಕ್ಟ್ರಾನಿಕ್ ಪಿಕ್ಚರ್ ಐಡೆಂಟಿಟಿ ಕಾರ್ಡ್
ಆ) ಎಲೆಕ್ಟ್ರಾನಿಕ್ ಫೋಟೊ ಐಡೆಂಟಿಟಿ ಕಾರ್ಡ್
ಇ) ಎಲೆಕ್ಷನ್ ಫೋಟೊ ಐಡೆಂಟಿಟಿ ಕಾರ್ಡ್
ಈ) ಎಲೆಕ್ಟರ್ಸ್ ಫೋಟೊ ಐಡೆಂಟಿಟಿ ಕಾರ್ಡ್

8. ಕ್ಲಾಡಿಯಸ್, ಗಟ್ರ್ರೂಡ್, ಒಫೀಲಿಯಾ ಮುಂತಾದವು ಶೇಕ್‍ಸ್ಪಿಯರ್‌ನ ಯಾವ ನಾಟಕದ ಪಾತ್ರಗಳು?

ಅ) ಕಿಂಗ್ ಲಿಯರ್ ಆ) ಹ್ಯಾಮ್ಲೆಟ್ ಇ) ಟೆಂಪೆಸ್ಟ್ ಈ) ಸಿಂಬಲೈನ್

9. ‘ಸಿ-14 ಕಾರ್ಬನ್ ಡೇಟಿಂಗ್’ ಪರೀಕ್ಷೆಯನ್ನು ಏಕೆ ನಡೆಸಲಾಗುತ್ತದೆ?

ಅ) ಪುರಾತನ ವಸ್ತುಗಳ ಕಾಲನಿರ್ಣಯಕ್ಕಾಗಿ
ಆ) ರಾಸಾಯನಿಕ ವಸ್ತುಗಳ ಉತ್ಪಾದನೆಗಾಗಿ
ಇ) ಮಣ್ಣಿನ ಫಲವತ್ತತೆ ಪರೀಕ್ಷೆಗಾಗಿ
ಈ) ನೀರಿನ ಶುದ್ಧತೆಯನ್ನು ಪರೀಕ್ಷಿಸಲು

10. ಕ್ರಿಕೆಟ್ ಆಟದಲ್ಲಿ ‘ಥರ್ಡ್ ಅಂಪೈರ್’ ಪದ್ಧತಿ ಜಾರಿಗೆ ಬಂದದ್ದು ಯಾವ ವರ್ಷದಲ್ಲಿ?

ಅ) 1992 ಆ) 1994 ಇ) 1996 ಈ) 1998

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಕೆಳದಿ 2. ಎಸ್.ವಿ.ರಂಗಣ್ಣ 3. ಬುಲೀಮಿಯಾ 4. ಕ್ಯಾಡಿ 5. ಮೈಲಾರ

6. ಇತಿಹಾಸ 7. ಇಂಗ್ಲೆಂಡ್ 8. ಜಾನ್ 9. ಗೋಧಿ 10 ಆಕ್ಟೊಪಸಿ

ಎಸ್‌. ಎಲ್‌. ಶ್ರೀನಿವಾಸ ಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT