ಪ್ರಜಾವಾಣಿ ಕ್ವಿಜ್

ಭಾನುವಾರ, ಜೂನ್ 16, 2019
29 °C

ಪ್ರಜಾವಾಣಿ ಕ್ವಿಜ್

Published:
Updated:

1. ಉಲ್ಲಾಳದ ಅಬ್ಬಕ್ಕ ರಾಣಿಯು ಯಾವ ವಿದೇಶೀಯರ ವಿರುದ್ಧ ಹೋರಾಡಿದಳು?

ಅ) ಇಂಗ್ಲಿಷರು ಆ) ಪೋರ್ಚುಗೀಸರು ಇ) ಡಚ್ಚರು ಈ) ಫ್ರೆಂಚರು

2. ಅಡುಗೆ ಅನಿಲವು ಮೂಲತಃ..

ಅ) ವಾಸನೆ ರಹಿತ ‌ಆ) ಸುವಾಸನೆ ಉಳ್ಳದ್ದು ‌ಇ) ಕೆಟ್ಟ ವಾಸನೆಯದು ಈ) ಯಾವುದೂ ಅಲ್ಲ

3. ಬಸವಣ್ಣನವರ ಕುರಿತ ಕಾದಂಬರಿ ಸರಣಿಯನ್ನು ರಚಿಸಿದ ಸಾಹಿತಿ ಯಾರು?

ಅ) ಅನಕೃ ಆ) ತರಾಸು ಇ) ಬಿ.ಪುಟ್ಟಸ್ವಾಮಯ್ಯ ಈ) ನಿರಂಜನ

4. ಇಸ್ಲಾಂ ಕ್ಯಾಲೆಂಡರ್‌ನ ಪ್ರಕಾರ ರಂಜಾನ್ ಎಷ್ಟನೇ ತಿಂಗಳು?

ಅ) ಒಂಬತ್ತು ಆ) ಆರು ಇ) ನಾಲ್ಕು ಈ) ಹನ್ನೆರಡು

5. ಘೋಟುಲ್ ಮಾದರಿಯ ವಿವಾಹ ಪದ್ಧತಿ ಯಾವ ಬುಡಕಟ್ಟು ಜನಾಂಗದಲ್ಲಿ ರೂಢಿಯಲ್ಲಿದೆ?

ಅ) ಗೊಂಡರು ಆ) ತೋಡರು ಇ) ಇರುಳರು ಈ) ಜರವಾಗಳು

6. ಪ್ರಧಾನಿ ರಾಜೀವ್ ಗಾಂಧಿಯವರ ಹಂತಕರು ಯಾವ ಸಂಘಟನೆಗೆ ಸೇರಿದವರಾಗಿದ್ದರು?

ಅ) ಉಲ್ಫಾ ಆ) ಎಲ್‌ಟಿಟಿಇ ಇ) ಅಲ್ ಖೈದಾ ಈ) ತಾಲಿಬಾನ್

7. ‘ಆಕ್ವಾ ರೀಜಿಯಾ’ವನ್ನು ಯಾವ ಲೋಹವನ್ನು ಕರಗಿಸಲು ಬಳಸಲಾಗುತ್ತದೆ?

ಅ) ತಾಮ್ರ ಆ) ಹಿತ್ತಾಳೆ ಇ) ಅಲ್ಯೂಮಿನಿಯಂ ಈ) ಚಿನ್ನ

8. ಭಾರತದಲ್ಲಿ ತುರ್ತು ಪರಿಸ್ಥಿತಿ ಇದ್ದದ್ದು ಯಾವ ಕಾಲಘಟ್ಟದಲ್ಲಿ?

ಅ) 1975-1977 ಆ) 1970-1972 ಇ) 1972-1974 ಈ) 1979-1981

9. ಅಮೆರಿಕದ ಅತಿ ಹೆಚ್ಚು ವಿಸ್ತಾರವಾದ ರಾಜ್ಯ ಯಾವುದು?

ಅ) ಅಲಾಸ್ಕ ಆ) ಟೆಕ್ಸಾಸ್ ಇ) ಫ್ಲೋರಿಡಾ ಈ) ಕ್ಯಾಲಿಫೋರ್ನಿಯಾ

10. ಡಾ. ರಾಜಕುಮಾರ್ ನಟಿಸಿದ ನೂರನೇ ಚಲನಚಿತ್ರ ಯಾವುದು?

ಅ) ಸನಾದಿ ಅಪ್ಪಣ್ಣ ಆ) ಭಾಗ್ಯದ ಬಾಗಿಲು ಇ) ಮೂರೂವರೆ ವಜ್ರಗಳು ಈ) ಭಕ್ತ ಕನಕದಾಸ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1.ರಾಷ್ಟ್ರಪತಿ 2. ಗೋಧಿ 3. ಮಗ 4. ಈಥರ್ 5. ಕರಡಿ- ಗೂಳಿ

6. ಮಹಾತ್ಮ ಗಾಂಧಿ 7. ಬಟಾಣಿ 8. ನಕ್ಕರೆ ಅದೇ ಸ್ವರ್ಗ 

9. ಋಜುವಾತು 10. ನಾಲ್ಕು

ಎಸ್‌. ಎಲ್‌. ಶ್ರೀನಿವಾಸ ಮೂರ್ತಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !