ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್

ಅಕ್ಷರ ಗಾತ್ರ

1. ಸಚಿವರು ಕೈಗೊಳ್ಳುವ ಪ್ರಮಾಣವಚನದಲ್ಲಿ ಯಾವ ಎರಡು ಅಂಶಗಳಿರುತ್ತವೆ?
ಅ) ಅಧಿಕಾರ ಮತ್ತು ಆರ್ಥಿಕತೆ

ಆ) ಗೋಪ್ಯತೆ ಮತ್ತು ಆರ್ಥಿಕತೆ

ಇ) ಅಧಿಕಾರ ಮತ್ತು ಗೋಪ್ಯತೆ

ಈ) ಗೋಪ್ಯತೆ ಮತ್ತು ವಿಶ್ವಾಸಾರ್ಹತೆ

2. ‘ಸಾಹಿತ್ಯದ ವಿರಾಟ್ ಸ್ವರೂಪ’ ಯಾರು ಬರೆದ ವಿಮರ್ಶಾ ಕೃತಿ?
ಅ) ಬೇಂದ್ರೆ
ಆ) ಕುವೆಂಪು

ಇ) ಮಾಸ್ತಿ
ಈ) ಕಾರಂತ

3) ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವಾಗಲು ಯಾವುದೇ ಪಕ್ಷ ಒಟ್ಟು ಸೀಟುಗಳಲ್ಲಿ ಕನಿಷ್ಠ ಶೇಕಡಾ ಎಷ್ಟು ಸೀಟುಗಳನ್ನು ಗಳಿಸಿರಬೇಕು?
ಅ) ಇಪ್ಪತ್ತು ಆ) ಹದಿನೈದು
ಇ) ಹತ್ತು ಈ) ಹನ್ನೆರಡು

4. ‘ಭಾರತೀಯ ಕಾಂಗ್ರೆಸ್ ಸೇವಾದಳ’ವನ್ನು ಸ್ಥಾಪಿಸಿದವರು ಯಾರು?
ಅ) ಗಂಗಾಧರ ರಾವ್ ದೇಶಪಾಂಡೆ
ಆ) ನಾ.ಸು. ಹರ್ಡೀಕರ್
ಇ) ಆಲೂರು ವೆಂಕಟರಾವ್
ಈ) ರಾ. ಹ. ದೇಶಪಾಂಡೆ

5. ‘ಪೀತ ಪತ್ರಿಕೋದ್ಯಮ’ ಎಂಬ ಪದದ ಅರ್ಥವೇನು?
ಅ) ಪಕ್ಷಾಧಾರಿತ ಪತ್ರಿಕೋದ್ಯಮ
ಆ) ಉದಾತ್ತ ಚಿಂತನೆಯ ಪತ್ರಿಕೋದ್ಯಮ
ಇ) ಅತಿರಂಜಿತ ಸುದ್ದಿ ಪತ್ರಿಕೋದ್ಯಮ
ಈ) ಕಲಾ ವಿಷಯಗಳ ಪತ್ರಿಕೋದ್ಯಮ

6. ಅತಿ ವೇಗದ ರೈಲುಗಳನ್ನು ಮೊದಲು ಬಳಸಿದ್ದು ಯಾವ ದೇಶ?
ಅ) ಅಮೆರಿಕಾ ಆ) ಜಪಾನ್
ಇ) ಚೀನಾ ಈ) ರಷ್ಯಾ

7. ‘ಆಧುನಿಕ ರಸಾಯನಶಾಸ್ತ್ರದ ಪಿತಾಮಹ’ ಎಂದು ಯಾವ ವಿಜ್ಞಾನಿಯನ್ನು ಕರೆಯಲಾಗುತ್ತದೆ?
ಅ) ಲೆವಾಸಿಯೆ ಆ) ಮೆಂಡಲೀವ್‍
ಇ) ಲೂಯಿ ಪಾಶ್ಚರ್ ಈ) ಯಾರೂ ಅಲ್ಲ

8. ಇನ್ಫೋಸಿಸ್ ಸಂಸ್ಥೆ ಮೊದಲು ಆರಂಭವಾದದ್ದು ಯಾವ ನಗರದಲ್ಲಿ?
ಅ) ಮೈಸೂರು ಆ) ಬೆಂಗಳೂರು
ಇ) ದೆಹಲಿ ಈ) ಪುಣೆ

9. ಪುರಾಣಗಳ ಪ್ರಕಾರ ದೇವತೆಗಳ ಸೇನಾಪತಿ ಯಾರು?
ಅ) ಶಿವ ಆ) ಕಾರ್ತಿಕೇಯ
ಇ) ಇಂದ್ರ ಈ) ದುರ್ಗೆ

10. ಕೆಳಗಿನ ಯಾವ ಪಾರಿಭಾಷಿಕ ಶಬ್ದ ಫುಟ್ಬಾಲ್ ಆಟಕ್ಕೆ ಸಂಬಂಧಿಸಿಲ್ಲ?
ಅ) ಪೆನಾಲ್ಟಿ ಸ್ಟ್ರೋಕ್ ಆ) ಫ್ರೀ ಕಿಕ್
ಇ) ಪೆನಾಲ್ಟಿ ಕಿಕ್ ಈ) ಆಫ್ ಸೈಡ್

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಅಶೋಕ ಚಕ್ರ
2. ವಿಗಡ ವಿಕ್ರಮ ರಾಯ
3. ಜಾನ್ ಟೇಲರ್ ಅಂಡ್ ಸನ್ಸ್
4. ಅಬ್ರಹಾಂ ಲಿಂಕನ್
5. ಚೀನಾ
6. ಅಜಿತ್ ದೋವಲ್
7. ಐದು 8. ಭೇದಿ
9. ಗಣಿತ
10. ಮೋಹನ ವೀಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT