ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್ ೯೯

Last Updated 26 ನವೆಂಬರ್ 2019, 19:30 IST
ಅಕ್ಷರ ಗಾತ್ರ

1. ಯಾವ ಬಗೆಯ ಪ್ರಾಣಿಗಳಲ್ಲಿ ಸಣ್ಣಕರುಳು ಉದ್ದವಾಗಿರುತ್ತದೆ?

ಅ) ಸಸ್ಯಾಹಾರಿಗಳುಆ) ಮಾಂಸಾಹಾರಿಗಳುಇ) ಕೀಟಗಳು ಈ) ಸೂಕ್ಷ್ಮ ಜೀವಿಗಳು

2. ‘ಗುಹೇಶ್ವರ’ ಎಂಬುದು ಯಾವ ವಚನಕಾರನ ಅಂಕಿತ?

ಅ) ಚೆನ್ನ ಬಸವಣ್ಣ ಆ) ನುಲಿಯ ಚಂದಯ್ಯಇ) ಅಲ್ಲಮಪ್ರಭು ಈ) ಮೋಳಿಗೆ ಮಾರಯ್ಯ

3. ಇವುಗಳಲ್ಲಿ ಬೆಳಕನ್ನು ವಿಕೇಂದ್ರೀಕರಿಸುವ ವಸ್ತು ಯಾವುದು?

ಅ) ಗಾಜು ಆ) ಪೀನ ದರ್ಪಣಇ) ನಿಮ್ನ ದರ್ಪಣ ಈ) ಕನ್ನಡಿ

4. ‘ಸಾಮಗಾನ’ ಯಾರು ರಚಿಸಿದ ಕವಿತೆಗಳ ಸಂಕಲನ?

ಅ) ವಿ.ಕೃ.ಗೋಕಾಕ್ ಆ) ಜಿ.ಎಸ್. ಶಿವರುದ್ರಪ್ಪಇ) ಗೋಪಾಲ ಕೃಷ್ಣ ಅಡಿಗಈ) ಚೆನ್ನವೀರ ಕಣವಿ

5. ಕೌಟಿಲ್ಯನ ಅರ್ಥಶಾಸ್ತ್ರವನ್ನು ಸಂಪಾದಿಸಿ ಪ್ರಕಟಿಸಿದವರು ಯಾರು?

ಅ) ಕೆ. ಬಿ.ಪಾಠಕ್ ಆ) ಆರ್. ನರಸಿಂಹಾಚಾರ್ಯ ಇ) ಆರ್. ಶ್ಯಾಮಶಾಸ್ತ್ರಿ ಈ) ಬಿ.ಎಲ್. ರೈಸ್

6. ಇಂಗ್ಲೆಂಡ್‌ನ ಪ್ರಧಾನ ಮಂತ್ರಿಯ ಅಧಿಕೃತ ನಿವಾಸದ ವಿಳಾಸವೇನು?

ಅ) ನಂ. 10, ಬೇಕರ್ ಸ್ಟ್ರೀಟ್ಆ) ನಂ. 10, ರಾಯಲ್ ಸ್ಟ್ರೀಟ್ಇ) ನಂ. 10, ವಿಕ್ಟೋರಿಯಾಈ) ನಂ. 10, ಡೌನಿಂಗ್ ಸ್ಟ್ರೀಟ್

7. ಬಂಗಾಲವನ್ನು ಬ್ರಿಟಿಷರು ಎರಡು ಪ್ರಾಂತ್ಯಗಳಾಗಿ ವಿಂಗಡಿಸಿದ್ದು ಯಾವ ವರ್ಷ?

ಅ) 1905 ಆ) 1805ಇ) 1915 ಈ) 1925

8. ಪ್ರಪಂಚದ ಅತಿ ಚಿಕ್ಕ ದೇಶ ಯಾವುದು?

ಅ) ಮೆಕ್ಸಿಕೊ ಆ) ಚಿಲಿಇ) ವ್ಯಾಟಿಕನ್‌ ಈ) ಟಿಬೆಟ್

9. ಲೇಡಿ ಟಾಟಾ ಸ್ಮಾರಕ ಪ್ರಶಸ್ತಿಯನ್ನು ಯಾವ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ?

ಅ) ವೈದ್ಯಕೀಯ ಆ) ಕೃಷಿಇ) ರಂಗಭೂಮಿ ಈ) ಕಲೆ

10. ವಿಶ್ವ ಏಡ್ಸ್ ದಿನವನ್ನು ಪ್ರತಿವರ್ಷ ಎಂದು ಆಚರಿಸಲಾಗುತ್ತದೆ?

ಅ) 1ನೇ ಡಿಸೆಂಬರ್ ಆ) 10ನೇ ಡಿಸೆಂಬರ್ಇ) 20 ನೇ ಡಿಸೆಂಬರ್ ಈ) 25ನೇ ಡಿಸೆಂಬರ್

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಎಂಟು 2. ಎಸ್. ಎ. ಬೊಬಡೆ 3. ಪಾಲ್ಕಿವಾಲ 4. ತಾಳಗುಂದ 5. ಶಿವ 6. ಕುದುರೆ ಓಟ 7. ಗೋವಿಂದ ಭಟ್ಟ 8. ಮೈಸೂರು 9 . ಚದುರಂಗ 10. ಬಿಧುರತೆ

ಎಸ್‌. ಎಲ್‌. ಶ್ರೀನಿವಾಸ ಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT