ವಿದ್ಯಾರ್ಥಿ ವೇತನ ಕೈಪಿಡಿ

ಶುಕ್ರವಾರ, ಮೇ 24, 2019
28 °C

ವಿದ್ಯಾರ್ಥಿ ವೇತನ ಕೈಪಿಡಿ

Published:
Updated:

ವರ್ಗ: ಅಂತರರಾಷ್ಟ್ರೀಯ ಹಂತ

ವಿದ್ಯಾರ್ಥಿ ವೇತನ: ರಿಚರ್ಡ್‌ ಅಂಡ್‌ ಸುಸಾನ್‌ ಹೈಡೆನ್‌ ಅಕಾಡೆಮಿ ಫೆಲೋಶಿಪ್‌ 2019, ಯು.ಕೆ

ವಿವರ: ಯು.ಕೆ.ಯಲ್ಲಿನ ರಾಯಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಟರ್‌ನ್ಯಾಷನಲ್‌ ಅಫೈರ್ಸ್‌ ಈ ವಿದ್ಯಾರ್ಥಿ ವೇತನ ಒದಗಿಸುತ್ತದೆ. ಅಂತರರಾಷ್ಟ್ರೀಯ ಸಂಬಂಧಗಳ ಕ್ಷೇತ್ರದಲ್ಲಿನ ಯೋಜನೆಗೆ ಇದು ಫೆಲೋಶಿಪ್‌ ನೀಡುತ್ತದೆ. ಜತೆಗೆ ಆರ್ಥಿಕ ಮತ್ತು ವೃತ್ತಿಯಾಧಾರಿತ ಸೌಲಭ್ಯಗಳನ್ನು ಒದಗಿಸುತ್ತದೆ.

ಅರ್ಹತೆ: ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎನ್‌ಜಿಒ, ಅಕಾಡೆಮಿ, ಸರ್ಕಾರಿ ಇಲಾಖೆಗಳು ಅಥವಾ ನಾಗರಿಕ ಸಮಾಜದೊಂದಿಗೆ ಕೆಲಸ ಮಾಡಿದ ಅನುಭವ ಇರಬೇಕು. ಜತೆಗೆ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಸೌಲಭ್ಯ ಮತ್ತು ಆರ್ಥಿಕ ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 2295 ಗ್ರೇಟ್‌ ಬ್ರಿಟನ್‌ ಪೌಂಡ್‌ (ಜಿಬಿಪಿ) ಸ್ಟೈಫಂಡ್‌ ಆಗಿ ಸಿಗಲಿದೆ.

ಕೊನೆಯ ದಿನ: 2019ರ ಏಪ್ರಿಲ್‌ 29

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು

ಮಾಹಿತಿಗೆ: http://www.b4s.in/praja/RAS2

***

ವರ್ಗ: ಸಂಶೋಧನಾ ಆಧಾರಿತ

ವಿದ್ಯಾರ್ಥಿ ವೇತನ: ಸುಬಿರ್‌ ಚೌಧುರಿ ಪೋಸ್ಟ್‌ ಡಾಕ್ಟರಲ್‌ ಫೆಲೋಶಿಪ್‌ ಆನ್‌ ಕ್ವಾಲಿಟಿ ಅಂಡ್‌ ಎಕನಾಮಿಕ್ಸ್‌ 2019

ವಿವರ: ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಅಂಡ್‌ ಪೊಲಿಟಿಕಲ್‌ ಸೈನ್ಸ್‌ ಪಿಎಚ್‌.ಡಿ ಪದವೀಧರರಿಗೆ ಮೂರು ತಿಂಗಳವರೆಗೆ ಸಂಶೋಧನಾ ಆಧರಿತ ಚಟುವಟಿಕೆಗೆ ಅವಕಾಶ ಕಲ್ಪಿಸುತ್ತದೆ. ಅರ್ಥಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಇರುವವರು ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಬಹುದು.

ಅರ್ಹತೆ: ಪಿಎಚ್‌.ಡಿ ಪದವೀಧರರಾಗಿರಬೇಕು. ಜತೆಗೆ ಏಷ್ಯಾದ ದೇಶಗಳ ಅರ್ಥಶಾಸ್ತ್ರದ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನಾ ಅನುಭವ ಹೊಂದಿರಬೇಕು.

ಸೌಲಭ್ಯ ಮತ್ತು ಆರ್ಥಿಕ ನೆರವು: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 1,750 ಗ್ರೇಟ್‌ ಬ್ರಿಟನ್‌ ಪೌಂಡ್‌, ಸಾರಿಗೆ ಮತ್ತು ವಸತಿ ವೆಚ್ಚ ಫೆಲೋಶಿಪ್‌ ಮೂಲಕ ದೊರೆಯುತ್ತದೆ. ಅದರ ಜತೆಗೆ ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನ ಸೌಲಭ್ಯಗಳನ್ನು ಬಳಸಿಕೊಳ್ಳಲು ಅವಕಾಶ ದೊರೆಯುತ್ತದೆ.

ಕೊನೆಯ ದಿನ: 2019ರ ಏಪ್ರಿಲ್‌ 29

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು

ಮಾಹಿತಿಗೆ: http://www.b4s.in/praja/SCP2

***

ವರ್ಗ: ಸಂಶೋಧನಾ ಹಂತ

ವಿದ್ಯಾರ್ಥಿ ವೇತನ: ಬಯೋ ಎನರ್ಜಿ ಅವಾರ್ಡ್ಸ್‌ ಫಾರ್‌ ಕಟಿಂಗ್‌ ಎಡ್ಜ್‌ ರಿಸರ್ಚ್‌ (ಬಿ–ಎಸಿಇಆರ್‌)

ವಿವರ: ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಸಚಿವಾಲಯ, ಇಂಡೊ– ಯು.ಎಸ್‌ ವಿಜ್ಞಾನ ಮತ್ತು ತಂತ್ರಜ್ಞಾನ ವೇದಿಕೆ ಎ(ಐಯುಎಸ್‌ಎಸ್‌ಟಿಎಫ್‌) ಫೆಲೋಶಿಪ್‌ಗೆ ಅರ್ಜಿ ಆಹ್ವಾನಿಸಿವೆ. ಪರಿಸರ ಸಂರಕ್ಷಣೆ, ಇಂಧನ ಸಂರಕ್ಷಣೆ ಮತ್ತು ಪರಿಣಾಮಕಾರಿ ಇಂಧನ ಬಳಕೆಗೆ ಸಂಬಂಧಿಸಿದಂತೆ ಅಮೆರಿಕ ಪ್ರಯೋಗಾಲಯಗಳಲ್ಲಿ ಸಂಶೋಧನಾ ಕಾರ್ಯ ಕೈಗೊಳ್ಳುವವರಿಗೆ ಈ ಫೆಲೋಶಿಪ್‌ ದೊರೆಯಲಿದೆ.

ಅರ್ಹತೆ: ಜೈವಿಕ ತಂತ್ರಜ್ಞಾನ, ಜೀವ ವಿಜ್ಞಾನ, ಎಂಜಿನಿಯರಿಂಗ್‌/ ತಂತ್ರಜ್ಞಾನದಲ್ಲಿ ಪಿಎಚ್‌.ಡಿ ಪದವೀಧರರಾಗಿರಬೇಕು. ಸರ್ಕಾರಿ ಅನುದಾನಿತ ಸಂಶೋಧನಾ ಕೇಂದ್ರಗಳು ಅಥವಾ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳಲ್ಲಿ ಉದ್ಯೋಗಿಯಾಗಿರಬೇಕು. ಅಮೆರಿಕದ ಪ್ರಯೋಗಾಲಯ ಅಥವಾ ಸಂಸ್ಥೆಗಳಲ್ಲಿ ಸಂಶೋಧನಾ ಚಟುವಟಿಕೆ ಕೈಗೊಂಡಿರುವವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯ ವಯಸ್ಸು 2019ರ ಡಿಸೆಂಬರ್‌ 31ಕ್ಕೆ 45 ವರ್ಷಗಳನ್ನು ಮೀರಬಾರದು.

ಸೌಲಭ್ಯ ಮತ್ತು ಆರ್ಥಿಕ ನೆರವು: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸೂಕ್ತ ಸ್ಟೈಫಂಡ್‌ ನೀಡಲಾಗುತ್ತದೆ. ಜತೆಗೆ ವಿಮಾನಯಾನದ ಖರ್ಚು ವೆಚ್ಚಗಳನ್ನು ಭರಿಸುತ್ತದೆ. ಅಲ್ಲದೆ ಸಂಶೋಧನಾ ಚಟುವಟಿಕೆ ಸಂಬಂಧಿ ಖರ್ಚು ವೆಚ್ಚಕ್ಕಾಗಿ ‘ಕಂಟಿಂಜೆನ್ಸಿ ಫಂಡ್‌’ ಕೂಡ ನೀಡುತ್ತದೆ.

ಕೊನೆಯ ದಿನ: 2019ರ ಏಪ್ರಿಲ್‌ 30

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು

ಮಾಹಿತಿಗೆ: http://www.b4s.in/praja/BAF2

***

ಕೃಪೆ: wwww.buddy4study.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !