ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ

Last Updated 14 ಮೇ 2019, 19:30 IST
ಅಕ್ಷರ ಗಾತ್ರ

ವರ್ಗ: ಆದಾಯ ಮತ್ತು ಮೆರಿಟ್ ಆಧಾರಿತ

ವಿದ್ಯಾರ್ಥಿ ವೇತನ: ವಿದ್ಯಾರ್ಥಿನಿಯರಿಗಾಗಿ ನೀಡುವ ವಿದ್ಯಾರ್ಥಿ ವೇತನ

ವಿವರ: ‘Buddy4Study’ ಇಂಡಿಯಾ ಪ್ರತಿಷ್ಠಾನವು 9ನೇ ತರಗತಿ ಮತ್ತು ನಂತರದ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗಾಗಿ ಈ ವಿದ್ಯಾರ್ಥಿ ವೇತನ ನೀಡುತ್ತದೆ. ಆರ್ಥಿಕವಾಗಿ ತೊಂದರೆ ಎದುರಿಸುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಯರ ಓದಿಗೆ ನೆರವಾಗಲು ಈ ವಿದ್ಯಾರ್ಥಿ ವೇತನ ಆರಂಭಿಸಲಾಗಿದೆ.

ಅರ್ಹತೆ: 9ನೇ ತರಗತಿಯಿಂದ ಸ್ನಾತಕೋತ್ತರ ಪದವಿ ಕೋರ್ಸ್ ಓದುತ್ತಿರುವ, ಐಟಿಐ, ಪಾಲಿಟೆಕ್ನಿಕ್, ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 4 ಲಕ್ಷ ಮೀರಿರಬಾರದು. ಅಭ್ಯರ್ಥಿಯು ಹಿಂದಿನ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ 60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು.

ಆರ್ಥಿಕ ನೆರವು ಮತ್ತು ಸೌಲಭ್ಯ: 9 ಮತ್ತು 10ನೇ ತರಗತಿ ವಿದ್ಯಾರ್ಥಿನಿಯರಿಗೆ ವಾರ್ಷಿಕ ₹ 6 ಸಾವಿರ, 11 ಮತ್ತು 12ನೇ ತರಗತಿ ವಿದ್ಯಾರ್ಥಿನಿಯರಿಗೆ ವಾರ್ಷಿಕ ₹ 12,000, ಪಾಲಿಟೆಕ್ನಿಕ್, ಐಟಿಐ, ಡಿಪ್ಲೊಮಾ, ಪದವಿ ಮತ್ತು ಇತರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ವಾರ್ಷಿಕ₹ 18,000 ನೆರವು ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆ ದಿನ: 2019ರ ಮೇ 31

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ

ಮಾಹಿತಿ: http://www.b4s.in/Praja/BKS1

***

ವರ್ಗ: ಮೆರಿಟ್ ಮತ್ತು ಆದಾಯ ಆಧಾರಿತ

ವಿದ್ಯಾರ್ಥಿ ವೇತನ: ಕಾನೂನು ವಿದ್ಯಾರ್ಥಿಗಳಿಗೆ ನೀಡುವ ಜಿಇವಿ ಮೆಮೋರಿಯಲ್ ಮೆರಿಟ್ ಸ್ಕಾಲರ್‌ಶಿಪ್‌– 2019

ವಿವರ: ಡಾ. ಗುಲಾಂ ಇ. ವಹನ್ವತಿ ವಿದ್ಯಾರ್ಥಿ ವೇತನ ನಿಧಿ ಈ ವಿದ್ಯಾರ್ಥಿ ವೇತನ ನೀಡುತ್ತದೆ. ದೇಶದ ಪ್ರತಿಷ್ಠಿತ ಕಾನೂನು ಕಾಲೇಜಿನಲ್ಲಿ ಪ್ರವೇಶ ಪಡೆದು ಕಾನೂನು ಪದವಿ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಅರ್ಹತೆ: ಎಲ್‍ಎಲ್‍ಬಿ/ಎಲ್‍ಎಲ್‍ಎಂ ಕೋರ್ಸ್‌ಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 2019ರ ಸಿಎಲ್‍ಎಟಿ, ಎಲ್‍ಎಸ್‍ಎಟಿ- ಇಂಡಿಯಾ, ಎಐಎಲ್‍ಇಟಿ ಅಥವಾ ಇತರೆ ಯಾವುದಾದರೂ ಕಾನೂನು ಕೋರ್ಸ್‌ನ ಪ್ರವೇಶ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅದರ ಜತೆಗೆ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹ 10 ಲಕ್ಷ ಮೀರಿರಬಾರದು. ಅಲ್ಲದೆ ಅರ್ಜಿದಾರರು 10 ಮತ್ತು 12ನೇ ತರಗತಿಗಳ ಮುಖ್ಯ ಪರೀಕ್ಷೆಗಳಲ್ಲಿ ತಲಾ ಶೇ 60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಖರ್ಚು, ವೆಚ್ಚ ಭರಿಸಲು ವಾರ್ಷಿಕ ₹ 50 ಸಾವಿರದಿಂದ ₹ 2 ಲಕ್ಷದವರೆಗೆ ವಿದ್ಯಾರ್ಥಿ ವೇತನ ದೊರೆಯಲಿದೆ. ಜತೆಗೆ ತರಬೇತಿ ಮತ್ತು ಮಾರ್ಗದರ್ಶನ ಸೌಲಭ್ಯವೂ ಸಿಗಲಿದೆ.

ಅರ್ಜಿ ಸಲ್ಲಿಸಲು ಕೊನೆ ದಿನ: 2019ರ ಮೇ 31

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ

ಮಾಹಿತಿ: http://www.b4s.in/Praja/GMM2

***

ವರ್ಗ: ಆದಾಯ ಆಧಾರಿತ

ವಿದ್ಯಾರ್ಥಿ ವೇತನ: ಎಚ್‍ಡಿಎಫ್‍ಸಿ ಬ್ಯಾಂಕ್ ಎಜುಕೇಷನಲ್ ಕ್ರೈಸಿಸ್ ಸ್ಕಾಲರ್‌ಶಿಪ್‌ ಸಪೋರ್ಟ್– 2019

ವಿವರ: ಎಚ್‍ಡಿಎಫ್‍ಸಿ ಬ್ಯಾಂಕ್ ಈ ವಿದ್ಯಾರ್ಥಿ ವೇತನ ನೀಡುತ್ತದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್‌ ದೊರೆಯಲಿದೆ. ಆರ್ಥಿಕ ಕಾರಣಗಳಿಂದ ವಿದ್ಯಾರ್ಥಿಗಳು ಓದಿನಿಂದ ವಂಚಿತರಾಗಬಾರದು ಎಂಬ ಉದ್ದೇಶವನ್ನು ಇದು ಹೊಂದಿದೆ.

ಅರ್ಹತೆ: 6ರಿಂದ 12ನೇ ತರಗತಿ ವಿದ್ಯಾರ್ಥಿಗಳು, ಪದವಿ, ಸ್ನಾತಕೋತ್ತರ ಪದವಿ, ಡಾಕ್ಟರಲ್ ವಿದ್ಯಾರ್ಥಿಗಳು, ಪೂರ್ಣಕಾಲಿಕ, ಅರೆಕಾಲಿಕ ಕೋರ್ಸ್‌ಗಳಲ್ಲಿ ಓದುತ್ತಿರುವವರು, ಐಟಿಐ, ಡಿಪ್ಲೊಮಾ, ಪಾಲಿಟೆಕ್ನಿಕ್, ಪಿಎಚ್.ಡಿ ವ್ಯಾಸಂಗ ಮಾಡುತ್ತಿರುವ ಅನಾಥರು, ಅನಾರೋಗ್ಯಕ್ಕೆ ತುತ್ತಾಗಿರುವವರು, ಅಂಗವಿಕಲರು ಅರ್ಜಿ ಸಲ್ಲಿಸಬಹುದು. ಅಲ್ಲದೆ ಕುಟುಂಬದ ಪ್ರಮುಖ ದುಡಿಯುವ ವ್ಯಕ್ತಿಯ ಮರಣದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವವರು ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆಯಾಗುವ ಶಾಲಾ ವಿದ್ಯಾರ್ಥಿಗಳಿಗೆ ₹ 10 ಸಾವಿರ, ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಪಿಎಚ್.ಡಿ ಪದವಿಗೆ ನೋಂದಾಯಿಸಿರುವವರು, ಐಟಿಐ, ಡಿಪ್ಲೊಮಾ ಮತ್ತು ಪಾಲಿಟೆಕ್ನಿಕ್ ಕೋರ್ಸ್‍ಗಳಲ್ಲಿ ಓದುತ್ತಿರುವವರಿಗೆ ₹ 25 ಸಾವಿರ ಆರ್ಥಿಕ ನೆರವು ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಜೂನ್ 15

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ

ಮಾಹಿತಿ: http://www/b4s.in/Praja/HEC6

***

ಕೃಪೆ: www.buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT