ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ

Last Updated 21 ಮೇ 2019, 19:30 IST
ಅಕ್ಷರ ಗಾತ್ರ

ವರ್ಗ: ಅಂತರರಾಷ್ಟ್ರೀಯ ಹಂತ

ವಿದ್ಯಾರ್ಥಿ ವೇತನ: ರೋಟರಿ ಪೀಸ್ ಫೆಲೋಶಿಪ್ 2020-21

ವಿವರ: ಅಮೆರಿಕದ ರೋಟರಿ ಫೌಂಡೇಷನ್ ಈ ಫೆಲೋಶಿಪ್ ನೀಡುತ್ತದೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಶಾಂತಿ ಮತ್ತು ಅಭಿವೃದ್ಧಿ ವಿಷಯದಲ್ಲಿ ಸ್ನಾತಕೋತ್ತರ ಕೋರ್ಸ್ ಹಾಗೂ ಸರ್ಟಿಫಿಕೆಟ್ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಈ ಫೆಲೋಶಿಪ್ ಪಡೆಯುವವರಿಗೆ ರೋಟರಿ ಶಾಂತಿ ಕೇಂದ್ರಗಳಲ್ಲಿ ತರಬೇತಿ ಪಡೆಯಲು ವ್ಯವಸ್ಥೆ ಮಾಡಲಾಗುತ್ತದೆ. ಅದರ ಖರ್ಚು, ವೆಚ್ಚಗಳನ್ನು ಈ ಫೆಲೋಶಿಪ್ ಭರಿಸುತ್ತದೆ.

ಅರ್ಹತೆ: ಸ್ನಾತಕೋತ್ತರ ಕೋರ್ಸ್‌ನ ಅಭ್ಯರ್ಥಿಗಳು ಮೂರು ವರ್ಷಗಳ ಪದವಿ ಕೋರ್ಸ್ ಪೂರ್ಣಗೊಳಿಸಿರಬೇಕು. ಸರ್ಟಿಫಿಕೆಟ್ ಕೋರ್ಸ್ ಕಾರ್ಯಕ್ರಮದಡಿ ಫೆಲೋಶಿಪ್‍ಗೆ ಅರ್ಜಿ ಸಲ್ಲಿಸುವವರು ಈ ಕ್ಷೇತ್ರದಲ್ಲಿ ಸ್ವಯಂ ಸೇವಕರಾಗಿ ಐದು ಅಥವಾ ಅದಕ್ಕೂ ಹೆಚ್ಚಿನ ವರ್ಷಗಳ ಅನುಭವ ಹೊಂದಿರಬೇಕು.

ಸೌಲಭ್ಯ ಮತ್ತು ನೆರವು: ಆಯ್ಕೆಯಾದವರಿಗೆ ಕೋರ್ಸ್‌ ಪೂರ್ಣ ಬೋಧನಾ ವೆಚ್ಚದ ವಿನಾಯಿತಿ ದೊರೆಯುತ್ತದೆ. ಅಲ್ಲದೆ ಕೋರ್ಸ್ ಅವಧಿಯಲ್ಲಿ ವಸತಿ ಸೌಲಭ್ಯ ಭತ್ಯೆ ದೊರೆಯುತ್ತದೆ. ಜತೆಗೆ ವಿಮಾನಯಾನ ಮತ್ತು ಸಂಶೋಧನಾ ಖರ್ಚು ವೆಚ್ಚಗಳನ್ನು ಇದು ಭರಿಸುತ್ತದೆ. ಅಲ್ಲದೆ ರೋಟರಿ ಶಾಂತಿ ಕೇಂದ್ರಗಳಲ್ಲಿ ತರಬೇತಿ ವಿಶೇಷ ತರಬೇತಿ ಸೌಲಭ್ಯವನ್ನೂ ಕಲ್ಪಿಸಲಾಗುತ್ತದೆ.

ಕೊನೆಯ ದಿನ: 2019ರ ಮೇ 31

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ

ಮಾಹಿತಿಗೆ: http://www.b4s.in/praja/RPF6

***

ವರ್ಗ: ಆದಾಯ ಆಧಾರಿತ

ವಿದ್ಯಾರ್ಥಿ ವೇತನ: ಉನ್ನತ ಶಿಕ್ಷಣಕ್ಕೆ ‘ಜಾಯ್ನಿಂಗ್‌ ಹ್ಯಾಂಡ್ಸ್’ ವಿದ್ಯಾರ್ಥಿವೇತನ ಕಾರ್ಯಕ್ರಮ 2019-20

ವಿವರ: ಸೌಲಭ್ಯಗಳಿಂದ ವಂಚಿತವಾಗಿರುವ ಸಮುದಾಯದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಲೆಂದು ಭಾರತದ ‘ಜಾಯ್ನಿಂಗ್‌ ಹ್ಯಾಂಡ್ಸ್’ ಎನ್‍ಜಿಒ ಈ ವಿದ್ಯಾರ್ಥಿ ವೇತನ ನೀಡುತ್ತಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಉದ್ದೇಶವನ್ನು ಈ ವಿದ್ಯಾರ್ಥಿ ವೇತನ ಹೊಂದಿದೆ.

ಅರ್ಹತೆ: 12ನೇ ತರಗತಿ ಓದುತ್ತಿರುವ ಅಥವಾ 12ನೇ ತರಗತಿಯನ್ನು ಶೇ 60ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಅಥವಾ ಪದವಿ ವ್ಯಾಸಂಗ ಮಾಡುತ್ತಿರುವ ಬೆಂಗಳೂರು, ದೆಹೆಲಿ, ಪುಣೆಯ ವಿದ್ಯಾರ್ಥಿಗಳು ಅಥವಾ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಅನುಮೋದಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದು. ಈ ವಿದ್ಯಾರ್ಥಿ ವೇತನವು ಕಡಿಮೆ ಆದಾಯ ಹೊಂದಿರುವ ಕುಟುಂಬದ ಮಕ್ಕಳಿಗೆ ಮಾತ್ರ ನೀಡುವ ಉದ್ದೇಶ ಹೊಂದಿದೆ.

ಸೌಲಭ್ಯ ಮತ್ತು ನೆರವು: ಬೋಧನಾ ವೆಚ್ಚ, ಪುಸ್ತಕ, ವಿದ್ಯಾರ್ಥಿ ನಿಲಯ ಸೇರಿದಂತೆ ವ್ಯಾಸಂಗಕ್ಕೆ ಅಗತ್ಯವಿರುವ ಇತರ ಖರ್ಚು ವೆಚ್ಚವನ್ನು ಈ ವಿದ್ಯಾರ್ಥಿ ವೇತನ ಭರಿಸುತ್ತದೆ.

ಅರ್ಜಿ ಸಲ್ಲಿಸಲು ಕೊನೆ ದಿನ: 2019ರ ಮೇ 30

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ

ಮಾಹಿತಿಗೆ: http://www.b4s.in/praja/JHH3

***

ವರ್ಗ: ಅಂತರರಾಷ್ಟ್ರೀಯ ಹಂತ

ವಿದ್ಯಾರ್ಥಿ ವೇತನ: ದುರ್ಹಮ್ ವಿಶ್ವವಿದ್ಯಾಲಯದ ಬಿಸಿನೆಸ್ ಸ್ಕೂಲ್ ಪ್ರೊಗ್ರೆಸ್ಸೆನ್ ಸ್ಕಾಲರ್‌ಶಿಪ್‌ 2019

ವಿವರ: ಬ್ರಿಟನ್‍ನ ದುರ್ಹಮ್ ವಿಶ್ವವಿದ್ಯಾಲಯದ ಬಿಸಿನೆಸ್ ಸ್ಕೂಲ್ ಈ ವಿದ್ಯಾರ್ಥಿ ವೇತನ ನೀಡಲಿದೆ. ಬ್ರಿಟನ್‍ನ ತನ್ನ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮೂಲಕ ವ್ಯಾಸಂಗ ಮುಂದುವರಿಸ ಬಯಸುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಿದೆ.

ಅರ್ಹತೆ: ದುರ್ಹಮ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿರಬೇಕು. ಈ ವಿದ್ಯಾರ್ಥಿಯು ಇದೇ ವಿಶ್ವವಿದ್ಯಾಲಯದ ಇತ್ತೀಚಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಪೂರ್ಣಗೊಳಿಸಿರಬೇಕು.

ಸೌಲಭ್ಯ ಮತ್ತು ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕೋರ್ಸ್ ಅವಧಿಯಲ್ಲಿ ಪ್ರತಿ ವರ್ಷ ಬೋಧನಾ ವೆಚ್ಚದ ಶೇ 25ರಷ್ಟು ವಿನಾಯಿತಿ ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆ ದಿನ: 2019ರ ಮೇ 31

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ ‌

ಮಾಹಿತಿಗೆ: http://www.b4s.in/praja/DUBP1

ಕೃಪೆ: www.buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT