ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿವೇತನ ಕೈಪಿಡಿ

Last Updated 4 ಜೂನ್ 2019, 19:30 IST
ಅಕ್ಷರ ಗಾತ್ರ

ವರ್ಗ: ಅಂತರರಾಷ್ಟ್ರೀಯ ಮಟ್ಟ

ವಿದ್ಯಾರ್ಥಿವೇತನ: ತಾಂತ್ರಿಕ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಜಪಾನ್ ಸರ್ಕಾರ (MEXT)ನೀಡುವ ವಿದ್ಯಾರ್ಥಿವೇತನ- 2020

ವಿವರ: ಜಪಾನಿನ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ತಾಂತ್ರಿಕ ಕೋರ್ಸ್‌ಗಳ ವ್ಯಾಸಂಗ ಮಾಡುವ ಭಾರತೀಯ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಜಪಾನ್ ಸರ್ಕಾರ ಈ ವಿದ್ಯಾರ್ಥಿವೇತನ ನೀಡುತ್ತದೆ.

ಅರ್ಹತೆ: 12ನೇ ತರಗತಿಯಲ್ಲಿ ಪಾಸಾಗಿರುವ, 1995ರ ನಂತರ ಜನಿಸಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ವಿದ್ಯಾರ್ಥಿ ವೇತನ ಪಡೆಯಲು ಅಭ್ಯರ್ಥಿಗಳು ಜಪಾನಿನ ನೋಂದಾಯಿತ ಶಿಕ್ಷಣ ಸಂಸ್ಥೆಗಳಲ್ಲಿ ತಾಂತ್ರಿಕ ಕೋರ್ಸ್‌ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರಬೇಕು.

ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ₹75,187 (117,000 ಯೆನ್‌) ಹಾಗೂ ಪ್ರಾದೇಶಿಕ ಭತ್ಯೆಯಾಗಿ ₹ 1,928 (3,000 ಯೆನ್‌) ಆರ್ಥಿಕ ನೆರವು ದೊರೆಯಲಿದೆ. ಅದರ ಜತೆಗೆ ವಿಮಾನ ಸಾರಿಗೆ ವೆಚ್ಚವನ್ನೂ ಭರಿಸುತ್ತದೆ.

ಅರ್ಜಿ ಸಲ್ಲಿಕೆಗೆ ಕೊನೆ ದಿನ: 2019ರ ಜೂನ್ 14

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ

ಮಾಹಿತಿಗೆ: http://www.b4s.in/praja/JGS6

***

ವರ್ಗ: ಪ್ರತಿಭೆ ಮತ್ತು ಆದಾಯ ಆಧಾರಿತ

ವಿದ್ಯಾರ್ಥಿವೇತನ: ರಮಣ್ ಕಾಂತ್ ಮಂಜಲ್ ಪ್ರತಿಷ್ಠಾನದ ವಿದ್ಯಾರ್ಥಿವೇತನ- 2019

ವಿವರ: ರಮಣ್ ಕಾಂತ್ ಮಂಜಲ್ ಪ್ರತಿಷ್ಠಾನವು 12ನೇ ತರಗತಿ ಪಾಸಾಗಿರುವ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಕೋರ್ಸ್ ಮತ್ತು ಪದವಿ ಕೋರ್ಸ್‌ಗಳ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನ ನೀಡಲಿದೆ.

ಅರ್ಹತೆ: 19 ವರ್ಷದೊಳಗಿನ (2019ರ ಮೇ 31ಕ್ಕೆ) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂಪಾಯಿ ಮೀರಿರಬಾರದು. ಅಭ್ಯರ್ಥಿಗಳು 12ನೇ ತರಗತಿ ಉತ್ತೀರ್ಣರಾಗಿರಬೇಕು. ಪದವಿ ಕೋರ್ಸ್‌ ಪ್ರವೇಶಿಸಿರುವ ವಿದ್ಯಾರ್ಥಿಗಳು 10 ಮತ್ತು 12ನೇ ತರಗತಿಯಲ್ಲಿ ಶೇ 65ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಡಿಪ್ಲೊಮಾ ವಿದ್ಯಾರ್ಥಿಗಳು 10 ಮತ್ತು 12ನೇ ತರಗತಿಯಲ್ಲಿ ಶೇ 80ರಷ್ಟು ಅಂಕಗಳನ್ನು ಪಡೆದು ಪಾಸಾಗಿರಬೇಕು.

ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆಯಾಗುವ ಪದವಿ ವಿದ್ಯಾರ್ಥಿಗಳಿಗೆ ವಾರ್ಷಿಕ ₹ 2.70 ಲಕ್ಷ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ₹ 50 ಸಾವಿರ ಆರ್ಥಿಕ ನೆರವು ದೊರೆಯಲಿದೆ.

ಅರ್ಜಿ ಸಲ್ಲಿಕೆಗೆ ಕೊನೆ ದಿನ: 2019ರ ಜೂನ್ 15

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ

ಮಾಹಿತಿಗೆ: http://www.b4s.in/praja/RKM1

***

‌‌ವರ್ಗ: ಸಂಶೋಧನೆ
ವಿದ್ಯಾರ್ಥಿವೇತನ: ಎಸ್‌ಇಆರ್‌ಬಿಸಂಶೋಧನಾ ಅನುದಾನ- 2019
ವಿವರ:
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಮಂಡಳಿಯು (ಎಸ್‍ಇಆರ್‌ಬಿ) ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವ ಯುವ ವಿಜ್ಞಾನಿಗಳ ಹಾಗೂ ಕ್ರಿಯಾತ್ಮಕ ಸಂಶೋಧಕರ ಯೋಜನೆಗೆ ಮೂರು ವರ್ಷಗಳವರೆಗೆ ಅನುದಾನ ನೀಡಲಿದೆ.

ಅರ್ಹತೆ: ಭಾರತದಲ್ಲಿನ ನೋಂದಾಯಿತ ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಲ್ಲಿ (ಸರ್ಕಾರಿ ಅಥವಾ ಖಾಸಗಿ) ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಸಂಶೋಧಕರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ವಿಜ್ಞಾನ, ಗಣಿತ, ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಯಾವುದರಲ್ಲಾದರೂ ಪಿಎಚ್.ಡಿ. ಪಡೆದಿರಬೇಕು ಅಥವಾ ಎಂ.ಡಿ/ ಎಂ.ಎಸ್/ ಎಂ.ಡಿ.ಎಸ್/ ಎಂ.ವಿ.ಎಸ್‌ಸಿ ಪದವೀಧರರಾಗಿರಬೇಕು.

ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆಯಾಗುವ ಸಂಶೋಧಕ ಅಥವಾ ಸಂಶೋಧಕರ ತಂಡಕ್ಕೆ ಮೂರು ವರ್ಷಗಳವರೆಗೆ ಆರ್ಥಿಕ ನೆರವು ದೊರೆಯಲಿದೆ. ಅರ್ಜಿ ಸಲ್ಲಿಸಲು ಕೊನೆ ದಿನ: 2019ರ ಜೂನ್ 10 ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ

ಮಾಹಿತಿಗೆ: http://www.b4s.in/praja/SCRG30

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT