ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ

Last Updated 11 ಜೂನ್ 2019, 19:30 IST
ಅಕ್ಷರ ಗಾತ್ರ

ವರ್ಗ: ಮೆರಿಟ್ ಆಧಾರಿತ
ವಿದ್ಯಾರ್ಥಿ ವೇತನ: ಟೆಲ್ ಅವಿವ್ ವಿಶ್ವವಿದ್ಯಾಲಯದ ‘ಸಮ್ಮರ್ ಪ್ರೋಗ್ರಾಮ್’ ಸ್ಕಾಲರ್‌ಶಿಪ್‌- 2019, ಇಸ್ರೆಲ್
ವಿವರ: ‘ಸ್ಮಾರ್ಟ್‌ಸಿಟಿ’, ಆಹಾರ ಸುರಕ್ಷತೆ, ಭದ್ರತೆ ವಿಷಯಗಳಿಗೆ ಸಂಬಂಧಿಸಿದಂತೆ ಇಸ್ರೆಲ್‍ನ ಟೆಲ್ ಅವಿವ್ ವಿಶ್ವವಿದ್ಯಾಲಯ ‘ಸಮ್ಮರ್ ಪ್ರೊಗ್ರಾಮ್’ ಆರಂಭಿಸಿದೆ.
ಅರ್ಹತೆ: ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯು ಹಿಂದಿನ ಪರೀಕ್ಷೆಯಲ್ಲಿ ಕನಿಷ್ಠ ಶೇ 80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
ಸೌಲಭ್ಯ ಮತ್ತು ನೆರವು: ಬೋಧನಾ ಶುಲ್ಕದ ಶೇ 65ರವರೆಗೆ ವಿದ್ಯಾರ್ಥಿ ವೇತನ ಭರಿಸುತ್ತದೆ. ಜತೆಗೆ ವಸತಿ ಮತ್ತು ವೈದ್ಯಕೀಯ ವಿಮೆ ಸೌಲಭ್ಯವೂ ಇರುತ್ತದೆ.
ಅರ್ಜಿ ಸಲ್ಲಿಸಲು ಕೊನೆ ದಿನ: 2019ರ ಜೂನ್ 15
ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ ಮಾತ್ರ
ಮಾಹಿತಿಗೆ: http://www.b4s.in/praja/TAU7

***

ವರ್ಗ: ಆದಾಯ ಆಧಾರಿತ
ವಿದ್ಯಾರ್ಥಿ ವೇತನ: ಎಚ್‍ಡಿಎಫ್‍ಸಿ ಬ್ಯಾಂಕ್ ಎಜುಕೇಷನಲ್ ಕ್ರೈಸಿಸ್ ಸ್ಕಾಲರ್‌ಶಿಪ್‌ ಸಪೋರ್ಟ್- 2019
ವಿವರ: ಕೌಟುಂಬಿಕ ಆರ್ಥಿಕ ಸಮಸ್ಯೆಗಳಿಂದ ಶಿಕ್ಷಣ ಮುಂದುವರೆಸಲು ಕಷ್ಟವೆನಿಸುವ ವಿದ್ಯಾರ್ಥಿಗಳಿಗೆ ನೆರವು ನೀಡಲು ಎಚ್‍ಡಿಎಫ್‍ಸಿ ಬ್ಯಾಂಕ್ ಈ ವಿದ್ಯಾರ್ಥಿ ವೇತನ ಆರಂಭಿಸಿದೆ. ಆರ್ಥಿಕ ಸಮಸ್ಯೆ ಕಾರಣಕ್ಕೆ ವಿದ್ಯಾರ್ಥಿಗಳು ಓದನ್ನು ಮೊಟಕುಗೊಳಿಸಬಾರದು ಎಂಬ ಉದ್ದೇಶವನ್ನು ಈ ಸ್ಕಾಲರ್‌ಶಿಪ್‌ ಹೊಂದಿದೆ.
ಅರ್ಹತೆ: 6ರಿಂದ 12ನೇ ತರಗತಿ, ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳು, ಪೂರ್ಣ ಮತ್ತು ಅರೆ ಕಾಲಿಕ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವವರು, ಐಟಿಐ, ಡಿಪ್ಲೊಮಾ, ಪಾಲಿಟೆಕ್ನಿಕ್, ಪಿಎಚ್.ಡಿ. ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದು. ಆರ್ಥಿಕ ತೊಂದರೆಗೆ ಸಿಲುಕಿರುವ ಅಭ್ಯರ್ಥಿಗಳಿಗೆ (ಅನಾಥ, ದೀರ್ಘಕಾಲಿನ ಆರೋಗ್ಯ ಸಮಸ್ಯೆ/ ದುಡಿಯುವ ವ್ಯಕ್ತಿಯ ಮರಣ, ಅಂಗವಿಕಲ) ಆದ್ಯತೆ.
ಸೌಲಭ್ಯ ಮತ್ತು ನೆರವು: ಆಯ್ಕೆಯಾಗುವ ಶಾಲಾ ವಿದ್ಯಾರ್ಥಿಗಳಿಗೆ ₹ 10 ಸಾವಿರ, ವಿಶ್ವವಿದ್ಯಾಲಯ, ಐಟಿಐ, ಡಿಪ್ಲೊಮಾ, ಪಾಲಿಟೆಕ್ನಿಕ್‍ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ₹ 25,000 ನೆರವು ದೊರೆಯಲಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಜೂನ್ 15
ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ ಮಾತ್ರ
ಮಾಹಿತಿಗೆ: http://www.b4s.in/praja/HEC6

***

ವರ್ಗ: ಮೆರಿಟ್ ಮತ್ತು ಆದಾಯ ಆಧಾರಿತ
ವಿದ್ಯಾರ್ಥಿ ವೇತನ: ಉಜ್ವಲ್ ಭವಿಷ್ಯ ಸ್ಕಾಲರ್‌ಶಿಪ್‌ 2019-20
ವಿವರ: ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಕುಟುಂಬದಲ್ಲಿನ 10ನೇ ತರಗತಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕಾಗಿ 'ವಿ-ಮಾರ್ಟ್' ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಅರ್ಹತೆ: 2019ರಲ್ಲಿ 10ನೇ ತರಗತಿ (14ರಿಂದ 16 ವರ್ಷ) ಶೇ 75ಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಆ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ₹ 2 ಲಕ್ಷದೊಳಗಿರಬೇಕು.
ಸೌಲಭ್ಯ ಮತ್ತು ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ₹ 10 ಸಾವಿರ ನೆರವು ದೊರೆಯಲಿದೆ. ಅಲ್ಲದೆ ಆಯ್ಕೆಯಾಗುವ ಕೆಲ ವಿದ್ಯಾರ್ಥಿಗಳಿಗೆ ₹ 20 ಸಾವಿರ ಆರ್ಥಿಕ ನೆರವು ದೊರೆಯಲಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಜೂನ್ 30
ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ ಮಾತ್ರ
ಮಾಹಿತಿಗೆ: http://www.b4s.in/praja/UBS9

***

ಕೃಪೆ: www.buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT