ಶುಕ್ರವಾರ, ಜೂನ್ 18, 2021
27 °C

ವಿದ್ಯಾರ್ಥಿ ವೇತನ ಕೈಪಿಡಿ: ಎಂಬಿಎ ವಿದ್ಯಾರ್ಥಿ ವೇತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ಗ: ಮೆರಿಟ್ ಮತ್ತು ಆದಾಯ ಆಧಾರಿತ

ವಿದ್ಯಾರ್ಥಿ ವೇತನ: ಲೋರಿಯಲ್‌ ಇಂಡಿಯಾ ಸಂಸ್ಥೆಯು ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ಕೈಗೊಳ್ಳುವ ವಿದ್ಯಾರ್ಥಿನಿಯರಿಗಾಗಿ ನೀಡುವ ವಿದ್ಯಾರ್ಥಿ ವೇತನ- 2019

ವಿವರ: ಭಾರತದಲ್ಲಿ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ಕೈಗೊಳ್ಳುವ ವಿದ್ಯಾರ್ಥಿನಿಯರಿಗೆ ಲೋರಿಯಲ್ ಇಂಡಿಯಾ ಸಂಸ್ಥೆ ವಿದ್ಯಾರ್ಥಿ ವೇತನ ನೀಡುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿನಿಯರು ಶಿಕ್ಷಣದ ಜತೆಗೆ ತಮ್ಮ ಕರಿಯರ್‌ ಕಂಡುಕೊಳ್ಳಲು ನೆರವಾಗುವುದು ಹಾಗೂ ಆ ಮೂಲಕ ವಿದ್ಯಾರ್ಥಿನಿಯರ ಸಬಲೀಕರಣಕ್ಕೆ ಪ್ರೋತ್ಸಾಹಿಸುವ ಉದ್ದೇಶವನ್ನು ಈ ವಿದ್ಯಾರ್ಥಿ ವೇತನ ಹೊಂದಿದೆ.

ಅರ್ಹತೆ: 2018-19ನೇ ಶೈಕ್ಷಣಿಕ ಸಾಲಿನಲ್ಲಿ 12ನೇ ತರಗತಿಯನ್ನು ಪಿಸಿಬಿ/ಪಿಸಿಎಂ/ಪಿಸಿಎಂಬಿಯಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ₹ 4 ಲಕ್ಷಕ್ಕಿಂತ ಕಡಿಮೆ ಇರಬೇಕು. ಅಲ್ಲದೆ ಅಭ್ಯರ್ಥಿಗಳು 19 ವರ್ಷದೊಳಗಿನವರಾಗಿರಬೇಕು.

ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆಯಾಗುವ ವಿದ್ಯಾರ್ಥಿನಿಯರಿಗೆ ಅವರ ಪದವಿ ವ್ಯಾಸಂಗಕ್ಕೆ ಬೋಧನಾ ಶುಲ್ಕ ಸೇರಿದಂತೆ ಇತರೆ ಖರ್ಚು ವೆಚ್ಚಗಳನ್ನು ಭರಿಸಲು ₹ 2.50 ಲಕ್ಷ ವಿದ್ಯಾರ್ಥಿ ವೇತನ ದೊರೆಯುತ್ತದೆ.

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮತ್ತು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ವಿಳಾಸ: ಲೋರಿಯಲ್‌ ಇಂಡಿಯಾ, ದಿ ಸ್ಕಾಲರ್‌ಶಿಪ್‌ ಸೆಲ್‌, C/O Buddy4Study, ಸ್ಟೆಲ್ಲರ್‌ ಐಟಿ ಪಾರ್ಕ್‌, ಸಿ–25, ಆಫೀಸ್‌ ನಂ. 8,9,10. ಟವರ್‌–ಎ, ಗ್ರೌಂಡ್‌ ಫ್ಲೋರ್‌, ಸೆಕ್ಟರ್‌ 62, ನೊಯ್ಡಾ, ಉತ್ತರ ಪ್ರದೇಶ–201301 ಇಂಡಿಯಾ.

ಕೊನೆಯ ದಿನ: 2019ರ ಜುಲೈ 1

ಮಾಹಿತಿಗೆ: http://www.b4s.in/praja/LIF9

***

ವರ್ಗ: ಅಗತ್ಯ ಆಧಾರಿತ

ವಿದ್ಯಾರ್ಥಿ ವೇತನ: ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಎಂಬಿಎ ವಿದ್ಯಾರ್ಥಿ ವೇತನ 2019-21

ವಿವರ: ದೇಶದ 150 ಕಾಲೇಜುಗಳಲ್ಲಿ ಮೊದಲ ವರ್ಷದ ಪೂರ್ಣಾವಧಿ ಎಂಬಿಎ ಕೋರ್ಸ್‌ಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಈ ವಿದ್ಯಾರ್ಥಿ ವೇತನ ನೀಡಲಿದೆ. ಹಣಕಾಸಿನ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಭರಿಸುವ ಉದ್ದೇಶವನ್ನು ಇದು ಹೊಂದಿದೆ.

ಅರ್ಹತೆ: ದೇಶದ ಆಯ್ದ 150 ಕಾಲೇಜುಗಳಲ್ಲಿ ಯಾವುದರಲ್ಲಾದರೂ ಮೊದಲ ವರ್ಷದ ಎಂಬಿಎ ಕೋರ್ಸ್‌ಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ₹ 6 ಲಕ್ಷಕ್ಕಿಂತ ಕಡಿಮೆಯಿರಬೇಕು.

ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆಯಾಗುವ ವಿದ್ಯಾಥಿಗಳಿಗೆ ವರ್ಷಕ್ಕೆ
₹ 1 ಲಕ್ಷದಂತೆ ಎರಡು ವರ್ಷಗಳವರೆಗೆ ಆರ್ಥಿಕ ನೆರವು ದೊರೆಯಲಿದೆ.

ಅರ್ಜಿ ಸಲ್ಲಿಕೆಗೆ ವಿಧಾನ: ಆನ್‍ಲೈನ್ ಮೂಲಕ (Buddy4Study)

ಕೊನೆಯ ದಿನ: 2019ರ ಜುಲೈ 31

ಮಾಹಿತಿಗೆ: http://www.b4s.in/praja/IFBMS1

***

ವರ್ಗ: ಮೆರಿಟ್ ಮತ್ತು ಆದಾಯ ಆಧಾರಿತ

ವಿದ್ಯಾರ್ಥಿ ವೇತನ: ಕಾನೂನು ವಿಷಯದ ವಿದ್ಯಾರ್ಥಿಗಳಿಗಾಗಿ ಜಿಇವಿ ಮೆಮೋರಿಯಲ್ ಮೆರಿಟ್ ವಿದ್ಯಾರ್ಥಿ ವೇತನ 2019

ವಿವರ: ಡಾ ಗೂಲಂ ಇ.ವಾಹನ್ವತಿ ವಿದ್ಯಾರ್ಥಿವೇತನ ನಿಧಿಯು ದೇಶದ ಪ್ರತಿಷ್ಠಿತ ಕಾನೂನು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಿದೆ.

ಅರ್ಹತೆ: ದೇಶದ ಪ್ರತಿಷ್ಠಿತ ಕಾನೂನು ಕಾಲೇಜುಗಳಲ್ಲಿ ಎಲ್‍ಎಲ್‍ಬಿ ಅಥವಾ ಎಲ್‍ಎಲ್‍ಎಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಬಹುದು. 2019ರಲ್ಲಿ ಸಿಎಲ್‍ಎಟಿ, ಎಲ್‍ಎಸ್‍ಎಟಿ- ಇಂಡಿಯಾ, ಎಐಎಲ್‍ಇಟಿ ಅಥವಾ ಇತರ ಕಾನೂನು ಕೋರ್ಸ್‌ಗಳ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ₹ 10 ಲಕ್ಷ ಮೀರಿರಬಾರದು. ಅಲ್ಲದೆ ಅಭ್ಯರ್ಥಿಗಳು 10 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಕನಿಷ್ಠ ಶೇ 60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಖರ್ಚುಗಳನ್ನು ಭರಿಸಲು ವಾರ್ಷಿಕ ₹ 50 ಸಾವಿರದಿಂದ ₹ 2 ಲಕ್ಷದವರೆಗೂ ನೆರವು ದೊರೆಯಲಿದೆ. ಜತೆಗೆ ತರಬೇತಿ ಮತ್ತು ಮೆಂಟರ್‌ಶಿಪ್‌ ಕೂಡ ಸಿಗಲಿದೆ.

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ

ಕೊನೆಯ ದಿನ: 2019ರ ಜೂನ್ 30

ಮಾಹಿತಿಗೆ: http://www.b4s.in/praja/GMM2

***

ಕೃಪೆ: www.buddy4study.com

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು