ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ

Last Updated 1 ಅಕ್ಟೋಬರ್ 2019, 13:32 IST
ಅಕ್ಷರ ಗಾತ್ರ

ವರ್ಗ: ಪ್ರತಿಭೆ ಆಧಾರಿತ

ವಿದ್ಯಾರ್ಥಿವೇತನ: ಸಸೆಕ್ಸ್ ವಿಶ್ವವಿದ್ಯಾಲಯದ ಕ್ರೀಡಾ ವಿದ್ಯಾರ್ಥಿವೇತನ ಯೋಜನೆ– 2019

ವಿವರ: ವಿದೇಶದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡ ಬಯಸುವ ಭಾರತೀಯ ಕ್ರೀಡಾಪಟುಗಳಿಗೆ ಬ್ರಿಟನ್‌ನ ಸಸೆಕ್ಸ್ ವಿಶ್ವವಿದ್ಯಾಲಯವು ವಿದ್ಯಾರ್ಥಿವೇತನ ಸೌಲಭ್ಯ ಮತ್ತು ಇತರ ಶೈಕ್ಷಣಿಕ ಪ್ರೋತ್ಸಾಹಗಳೊಂದಿಗೆ ಪದವಿ ಕೋರ್ಸ್‌ಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ್ದು, ಅರ್ಜಿ ಆಹ್ವಾನಿಸಿದೆ. ಈ ವಿದ್ಯಾರ್ಥಿವೇತನ ಕಾರ್ಯಕ್ರಮವು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ವಿದ್ಯಾರ್ಥಿಗಳ ಕ್ರೀಡಾ ಉತ್ಕೃಷ್ಟತೆಯನ್ನು ಬೆಂಬಲಿಸುವ ಗುರಿ ಹೊಂದಿದೆ.

ಅರ್ಹತೆ: ಭಾರತದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ಸ್‌ನ ದಾಖಲೆ ಹೊಂದಿರುವ ಮತ್ತು ಸಸೆಕ್ಸ್ ವಿಶ್ವವಿದ್ಯಾಲಯದಲ್ಲಿ ಪದವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರು.

ಆರ್ಥಿಕ ನೆರವು : ಆಯ್ದ ಕ್ರೀಡಾಪಟುಗಳು ತಮ್ಮ ಪದವಿ ಕಾರ್ಯಕ್ರಮದ ಅವಧಿಗೆ ವಾರ್ಷಿಕ ₹ 43,400ರಿಂದ ₹ 1.08 ಲಕ್ಷದವರೆಗೆ ವಿದ್ಯಾರ್ಥಿವೇತನ ಪಡೆಯುತ್ತಾರೆ.

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 2019ರ ಅಕ್ಟೋಬರ್‌ 11

ಮಾಹಿತಿಗೆ: http://www.b4s.in/praja/SSS2

***

ವರ್ಗ: ಮೆರಿಟ್ ಮತ್ತು ಆದಾಯ ಆಧಾರಿತ

ವಿದ್ಯಾರ್ಥಿ ವೇತನ: ಎಸ್‌.ಸಿ./ಎಸ್‌.ಟಿ. ಸಮುದಾಯದಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಎನ್‌ಜಿಸಿ ವಿದ್ಯಾರ್ಥಿವೇತನ 2019-20

ವಿವರ: ವಿದ್ಯಾರ್ಥಿ ವೇತನದ ನೆರವಿನೊಂದಿಗೆ ಉನ್ನತ ಶಿಕ್ಷಣ ವ್ಯಾಸಂಗ ಮಾಡಬಯಸುವ ಎಸ್‌.ಸಿ./ಎಸ್‌.ಟಿ. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಒಎನ್‌ಜಿಸಿ ಅರ್ಜಿ ಅಹ್ವಾನಿಸಿದೆ.

ಅರ್ಹತೆ: ಎಂಜಿನಿಯರಿಂಗ್‌, ಎಂ.ಬಿ.ಬಿ.ಎಸ್‌, ಭೂ ವಿಜ್ಞಾನ/ಜಿಯೋಫಿಸಿಕ್ಸ್‌ (ಸ್ನಾತಕೋತ್ತರ) ಅಥವಾ ಎಂ.ಬಿ.ಎ. ಕೋರ್ಸ್‌ನ ಪ್ರಥಮ ವರ್ಷಕ್ಕೆ ದಾಖಲಾಗಿರುವ ಎಸ್‌.ಸಿ./ಎಸ್‌.ಟಿ. ಸಮುದಾಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 12ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ಶೇ 60ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅರ್ಜಿದಾರರು 30 ವರ್ಷದೊಳಗಿನವರಾಗಿರಬೇಕು. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ಮಿತಿ ₹ 4.50 ಲಕ್ಷ.

ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ತಮ್ಮ ಪದವಿ / ಸ್ನಾತಕೋತ್ತರ ಕೋರ್ಸ್‌ ಪೂರ್ಣಗೊಳಿಸಲು ವರ್ಷಕ್ಕೆ ₹ 48,000 ಆರ್ಥಿಕ ನೆರವು ದೊರೆಯಲಿದೆ.

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 2019ರ ಅಕ್ಟೋಬರ್‌ 15

ಮಾಹಿತಿ: http://www.b4s.in/praja/OST2

***

ವರ್ಗ: ಅಗತ್ಯ ಆಧಾರಿತ

ವಿದ್ಯಾರ್ಥಿವೇತನ: ಅಂಗವಿಕಲ ವಿದ್ಯಾರ್ಥಿಗಳಿಗೆ ‘ಪ್ರಿ-ಮೆಟ್ರಿಕ್’ ವಿದ್ಯಾರ್ಥಿವೇತನ 2019-20

ವಿವರ: ಕೇಂದ್ರ ಸರ್ಕಾರದ ಅಂಗವಿಕಲರ ಸಬಲೀಕರಣ ಇಲಾಖೆಯು ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣ ಪೂರೈಸಲು ಈ ವಿದ್ಯಾರ್ಥಿ ವೇತನದ ಮೂಲಕ ನೆರವಾಗುತ್ತಿದೆ.

ಅರ್ಹತೆ: ಪ್ರಸ್ತುತ 9ನೇ ತರಗತಿ ಅಥವಾ 10ನೇ ತರಗತಿಯಲ್ಲಿ ಓದುತ್ತಿರುವ ಶೇ 40ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಮಿತಿ ₹ 2.50 ಲಕ್ಷ.

ಆರ್ಥಿಕ ನೆರವು: ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹ 800 ರವರೆಗೆ ನಿರ್ವಹಣೆ ಭತ್ಯೆ, ವರ್ಷಕ್ಕೆ ₹ 1,000 ಪುಸ್ತಕ ಖರೀದಿಗೆ ನೆರವು ಮತ್ತು ಅಂಗವೈಕಲ್ಯ ಭತ್ಯೆ ವರ್ಷಕ್ಕೆ ₹ 2,000 ದಿಂದ
₹ 4,000ದಷ್ಟು ಆರ್ಥಿಕ ನೆರವು ದೊರೆಯಲಿದೆ.

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಅರ್ಜಿ ಸಲ್ಲಿಕೆ ಕೊನೆ ದಿನ: 2019ರ ಅಕ್ಟೋಬರ್‌ 15

ಮಾಹಿತಿಗೆ: http://www.b4s.in/praja/PSF1

***

ಕೃಪೆ: www.buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT