ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿವೇತನ ಕೈಪಿಡಿ

Last Updated 25 ಜೂನ್ 2019, 19:30 IST
ಅಕ್ಷರ ಗಾತ್ರ

ವರ್ಗ: ಅಂತರರಾಷ್ಟ್ರೀಯ ಹಂತ

ವಿದ್ಯಾರ್ಥಿವೇತನ:ಡೆರೆಕ್‌ ಒ ಕಾನರ್‌ ಸ್ಕಾಲರ್‌ಶಿಪ್‌ 2019

ವಿವರ: ಯುಸಿಡಿ ಮೈಕೇಲ್‌ ಸ್ಮರ್‌ಫಿಟ್‌ ಗ್ರ್ಯಾಜುಯೇಟ್‌ ಬ್ಯುಸಿನೆಸ್‌ ಸ್ಕೂಲ್‌, ಭಾರತೀಯ ವಿದ್ಯಾರ್ಥಿಗಳಿಗೆ ಯುರೋಪಿನಲ್ಲಿ ವ್ಯವಹಾರ ವಿಶ್ಲೇಷಣಾ ಅಧ್ಯಯನಕ್ಕೆ ಪ್ರೋತ್ಸಾಹಿಸಲು ಈ ವಿದ್ಯಾರ್ಥಿವೇತನ ನೀಡುತ್ತಿದೆ. ಇದು ಕೋರ್ಸ್‌ನ ಬೋಧನಾ ಶುಲ್ಕ ಭರಿಸುತ್ತದೆ. ದತ್ತಾಂಶ ವಿಜ್ಞಾನದ ಅಧ್ಯಯನ ಪ್ರೋತ್ಸಾಹಿಸುವ ಮತ್ತು ಜಾಗತಿಕ ವ್ಯಾಪಾರದಲ್ಲಿ ಅದರ ಮಹತ್ವ ಸಾರುವ ಉದ್ದೇಶವನ್ನು ಈ ವಿದ್ಯಾರ್ಥಿವೇತನ ಒಳಗೊಂಡಿದೆ.

ಅರ್ಹತೆ: ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಭಾರತೀಯ ವಿದ್ಯಾರ್ಥಿಗಳುಯುಸಿಡಿ ಮೈಕೇಲ್‌ ಸ್ಮರ್‌ಫಿಟ್‌ ಗ್ರ್ಯಾಜುಯೇಟ್‌ ಬ್ಯುಸಿನೆಸ್‌ ಸ್ಕೂಲ್‌ ವ್ಯವಹಾರ ವಿಶ್ಲೇಷಣಾ ವಿಷಯದಲ್ಲಿ ಎಂ.ಎಸ್‌ಸಿ. ಕೋರ್ಸ್ ಪ್ರವೇಶ ಪಡೆದು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.‌ಅಭ್ಯರ್ಥಿಗಳIELTSಅಂಕ 7.0 ಅಥವಾ ಅದಕ್ಕಿಂತ ಹೆಚ್ಚಿರಬೇಕು. ಇಲ್ಲವೆTOEFLಅಂಕ 100/120 ಅಥವಾ ಅದಕ್ಕಿಂತ ಹೆಚ್ಚಿರಬೇಕು.

ಆರ್ಥಿಕ ನೆರವು ಮತ್ತು ಪ್ರೋತ್ಸಾಹ: ಕೋರ್ಸ್ ಅವಧಿಯಲ್ಲಿ ಪೂರ್ಣ ಬೋಧನಾ ಶುಲ್ಕವಾಗಿ ₹ 11.09 ಲಕ್ಷ (13,995 ಯುರೊ) ದೊರೆಯಲಿದೆ.

ಕೊನೆಯ ದಿನ: 2019ರ ಜೂನ್ 28

ಅರ್ಜಿ ಸಲ್ಲಿಕೆ ವಿಧಾನ: ಇಮೇಲ್ ಮೂಲಕ ಆನ್‍ಲೈನ್‌ನಲ್ಲಿ

ಮಾಹಿತಿ: http://www.b4s.in/praja/DCS3

***

ವರ್ಗ: ಪ್ರತಿಭೆ ಆಧಾರಿತ

ವಿದ್ಯಾರ್ಥಿವೇತನ: ಡೀಲ್ಸ್‌ ಷಟರ್‌ ಸ್ಕಾಲರ್‌ಶಿಪ್‌- 2019

ವಿವರಣೆ: ಡೀಲ್ಸ್‌ ಷಟರ್‌ ಸಂಸ್ಥೆಯು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಖರ್ಚು ವೆಚ್ಚಗಳನ್ನು ಭರಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಪ್ರಬಂಧ ಸ್ಪರ್ಧೆ ಆಯೋಜಿಸಿ, ಆಯ್ಕೆಯಾದವರಿಗೆ ವಿದ್ಯಾರ್ಥಿ ವೇತನ ನೀಡಲಿದೆ. ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯು ಅವರ ವ್ಯಾಸಂಗದ ಬೋಧನಾ ಶುಲ್ಕ ಪಾವತಿಗೆ ನೆರವು ನೀಡಲಿದೆ.

ಅರ್ಹತೆ: ದೇಶದ ಯಾವುದೇ ವಿಶ್ವವಿದ್ಯಾಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಆರ್ಥಿಕ ನೆರವು ಮತ್ತು ಪ್ರೋತ್ಸಾಹ: ಸ್ಪರ್ಧೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ₹ 34,790 (500 ಅಮೆರಿಕನ್ ಡಾಲರ್) ಬಹುಮಾನವಾಗಿ ದೊರೆಯಲಿದೆ. ಅದನ್ನು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಿಕ್ಷಣ ಸಂಸ್ಥೆಗೆ ವಿದ್ಯಾರ್ಥಿಯ ಬೋಧನಾ ಶುಲ್ಕವೆಂದು ನೇರವಾಗಿ ಜಮೆ ಮಾಡಲಾಗುತ್ತದೆ.

ಕೊನೆಯ ದಿನ: 2019ರ ಜೂನ್ 30

ಅರ್ಜಿ ಸಲ್ಲಿಕೆ ವಿಧಾನ: ಇಮೇಲ್ ಮೂಲಕ ಆನ್‍ಲೈನ್‍ನಲ್ಲಿ

ಮಾಹಿತಿ: http://www.b4s.in/praja/DSS9

***

ವರ್ಗ: ಅಂತರರಾಷ್ಟ್ರೀಯ ಹಂತ

ವಿದ್ಯಾರ್ಥಿ ವೇತನ: ಫಿನ್‌ಕ್ಯಾಡ್ಸ್‌ ವಿಮೆನ್‌ ಇನ್‌ ಫೈನಾನ್ಸ್‌ ಸ್ಕಾಲರ್‌ಶಿಪ್‌- 2019

ವಿವರಣೆ: ಹಣಕಾಸು ಮತ್ತು ಅದಕ್ಕೆ ಸಂಬಂಧಿಸಿದ ಇತರ ವಿಷಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಕೈಗೊಳ್ಳುವ ವಿದ್ಯಾರ್ಥಿನಿಯರಿಗೆ ಹಣಕಾಸು ನೆರವು ನೀಡಲು FINCAD ಸಂಸ್ಥೆ ಈ ವಿದ್ಯಾರ್ಥಿವೇತನ ನೀಡುತ್ತಿದೆ.

ಅರ್ಹತೆ: ಹಣಕಾಸು ಮತ್ತು ಹಣಕಾಸು ಆಸ್ತಿ ನಿರ್ವಹಣೆಗೆ ಸಂಬಂಧಿಸಿದಂತೆ ಸ್ನಾತಕೋತ್ತರ ಕೋರ್ಸ್ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು ಮತ್ತು ಪ್ರೋತ್ಸಾಹ: ಆಯ್ಕೆಯಾಗುವ ವಿದ್ಯಾರ್ಥಿನಿಯರಿಗೆ ಅವರ ಶಿಕ್ಷಣದ ಬೋಧನಾ ವೆಚ್ಚ ಮತ್ತು ಶೈಕ್ಷಣಿಕ ವೆಚ್ಚ ಭರಿಸಲು ₹ 13.91 ಲಕ್ಷ (20,000 ಅಮೆರಿಕನ್ ಡಾಲರ್) ಮೊತ್ತವನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ.

ಕೊನೆಯ ದಿನ: 2019ರ ಜೂನ್ 30

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್

ಮಾಹಿತಿ: http://www.b4s.in.praja/FIN22

***

ಕೃಪೆ: www.buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT