ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ

Last Updated 12 ಮಾರ್ಚ್ 2019, 19:31 IST
ಅಕ್ಷರ ಗಾತ್ರ

ವರ್ಗ: ರಾಜ್ಯ ಮಟ್ಟ

ವಿದ್ಯಾರ್ಥಿ ವೇತನ: ಸಮಗ್ರ ಶಿಕ್ಷಣ ಕರ್ನಾಟಕ ಫೆಲೋಶಿಪ್– 2019–20

ವಿವರ: ರಾಜ್ಯದ ಸಾಕ್ಷರತಾ ಮಟ್ಟವನ್ನು ಹೆಚ್ಚಿಸಲು ಮತ್ತು ಕಾರ್ಯಕ್ರಮದ ನಿರ್ವಹಣೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಈ ಫೆಲೋಶಿಪ್‌ ನೀಡಲಿದೆ. ಸಮಾಜ ವಿಜ್ಞಾನ ಮತ್ತು ಸಾರ್ವಜನಿಕ ನೀತಿ ನಿರೂಪಣಾ ಕ್ಷೇತ್ರದಲ್ಲಿನ ಅನುಭವಿ ವೃತ್ತಿಪರರಿಗೆ ಮಾಸಿಕ ಸ್ಟೈಫಂಡ್‌ ಮತ್ತು ಇತರ ಸವಲತ್ತುಗಳನ್ನು ಸರ್ಕಾರ ನೀಡುತ್ತದೆ.

ಅರ್ಹತೆ: ಆಸಕ್ತರು ಸ್ನಾತಕೋತ್ತರ ಪದವೀಧರರು, ವೃತ್ತಿಪರರೂ ಆಗಿರಬೇಕು.ಸಮಾಜ ವಿಜ್ಞಾನ ವಿಷಯಗಳಲ್ಲಿ ಅಥವಾ ಸಾರ್ವಜನಿಕ ನೀತಿಗೆ ಸಂಬಂಧಿಸಿದ ವಿಷಯಗಳಲ್ಲಿ ಪದವಿ ಪಡೆದಿರಬೇಕು. 3ರಿಂದ 10 ವರ್ಷಗಳ ಅನುಭವ ಇರಬೇಕು. ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಪ್ರವೀಣರಾಗಿರಬೇಕು.

ಸೌಲಭ್ಯ ಮತ್ತು ಆರ್ಥಿಕ ನೆರವು: ಮಾಸಿಕ ₹ 70,000ಸ್ಟೈಫಂಡ್‌ ನೀಡಲಾಗುವುದು. ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ವಾರ್ಷಿಕ ಶೇ 10ರಷ್ಟು ಹೆಚ್ಚಳವೂ ಇರುತ್ತದೆ. ಫೆಲೋಶಿಪ್‌ನ ಅವಧಿ ಎರಡು ವರ್ಷಗಳು.

ಕೊನೆಯ ದಿನ: 2019ರ ಮಾರ್ಚ್‌ 18

ಅರ್ಜಿ ಸಲ್ಲಿಕೆ ವಿಧಾನ: ಇ–ಮೇಲ್‌ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಕೆ

ಮಾಹಿತಿಗೆ: http://www.b4s.in/praja/SSK1

***

ವರ್ಗ: ಮೆರಿಟ್‌ ಮತ್ತು ಆರ್ಥಿಕ ಆಧಾರಿತ

ವಿದ್ಯಾರ್ಥಿ ವೇತನ: ಸರಳಾ ದೇವಿ ವಿದ್ಯಾರ್ಥಿ ವೇತನ– 2019

ವಿವರಣೆ: ದೆಹಲಿ ಅಥವಾ ಎನ್‌ಸಿಆರ್‌ ಪ್ರದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ದೇಶದ ಯಾವುದೇ ಭಾಗದ ಸೌಲಭ್ಯ ವಂಚಿತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧರ್ಮಪಾಲ್‌ ಸತ್ಯಪಾಲ್‌ ಚಾರಿಟಬಲ್‌ ಟ್ರಸ್ಟ್ ಈ ವಿದ್ಯಾರ್ಥಿ ವೇತನ ನೀಡಲಿದೆ. ಈ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಲ್ಪಿಸುವ ಉದ್ದೇಶದಿಂದ ಟ್ರಸ್ಟ್ ಈ ಸ್ಕಾಲರ್‌ಶಿಪ್‌ ಆರಂಭಿಸಿದೆ.

ಅರ್ಹತೆ: 12ನೇ ತರಗತಿಯಲ್ಲಿ ಶೇ 75ರಷ್ಟು ಅಂಕಗಳನ್ನು ಪಡೆದು ಮೊದಲ ವರ್ಷದ ಎಂ.ಬಿ.ಬಿ.ಎಸ್‌, ಎಂಜಿನಿಯರಿಂಗ್‌, ನರ್ಸಿಂಗ್‌, ಎಲ್‌ಎಲ್‌ಬಿ ಅಥವಾ ಸಮೂಹ ಮಾಧ್ಯಮ ಕೋರ್ಸ್‌ಗಳನ್ನು ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದು. 12ನೇ ತರಗತಿಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಸಿ.ಎ, ಸಿ.ಎಸ್‌ ಓದುವ ಆಸಕ್ತಿ ಇರುವವರೂ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ವರಮಾನ 4.5 ಲಕ್ಷ.

ಸೌಲಭ್ಯ ಮತ್ತು ಆರ್ಥಿಕ ನೆರವು: ವಿಜ್ಞಾನ ಮತ್ತು ಎಂಜಿನಿಯರಿಂಗ್‌ ವಿಭಾಗದವರಿಗೆ ₹ 75,000; ಕಲಾ ವಿಭಾಗದವರಿಗೆ 20,000; ವಾಣಿಜ್ಯ ಮತ್ತು ಸಿ.ಎ, ಸಿ.ಎಸ್‌ ವಿಭಾಗದವರಿಗೆ ₹ 25,000; ವೃತ್ತಿಪರ ಕೋರ್ಸ್‌ಗಳವರಿಗೆ ₹ 15,000 ನೆರವು ನೀಡಲಾಗುತ್ತದೆ.

ಕೊನೆಯ ದಿನಾಂಕ: 2019ರ ಮಾರ್ಚ್‌ 31

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ ಮಾತ್ರ

ಮಾಹಿತಿಗೆ: http://www.b4s.in/praja/SDS5

***

ವರ್ಗ: ಮೆರಿಟ್‌ ಮತ್ತು ಆರ್ಥಿಕ ಆಧಾರಿತ

ವಿದ್ಯಾರ್ಥಿ ವೇತನ: ಆಗಾಖಾನ್‌ ಫೌಂಡೇಷನ್‌ ಇಂಟರ್‌ನ್ಯಾಷನಲ್‌ ಸ್ಕಾಲರ್‌ಶಿಪ್‌ 2019–20

ವಿವರ: ಉನ್ನತ ಶಿಕ್ಷಣ ವ್ಯಾಸಂಗ ಮಾಡಬಯಸುವ ಪ್ರತಿಭಾವಂತ ಮತ್ತು ಬಡ ಅಭ್ಯರ್ಥಿಗಳಿಗೆ ಆಗಾಖಾನ್‌ ಫೌಂಡೇಷನ್‌ ಈ ವಿದ್ಯಾರ್ಥಿ ವೇತನದ ಮೂಲಕ ಆರ್ಥಿಕ ನೆರವು ನೀಡಲಿದೆ. ಆಯ್ಕೆಯಾದವರ ಬೋಧನಾ ಶುಲ್ಕದ ಬಹುತೇಕ ಭಾಗ ಹಾಗೂ ವಸತಿ ಖರ್ಚು ವೆಚ್ಚಗಳನ್ನು ಈ ವಿದ್ಯಾರ್ಥಿ ವೇತನ ಭರಿಸಲಿದೆ.

ಅರ್ಹತೆ: ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಯಸುವ ಪದವೀಧರರು ಅರ್ಜಿ ಸಲ್ಲಿಸಬಹುದು. ಅವರ ಶೈಕ್ಷಣಿಕ ಸಾಧನೆ ಉತ್ತಮವಾಗಿರಬೇಕು ಹಾಗೂ ಹಣಕಾಸಿನ ಅಗತ್ಯ ಇರಬೇಕು. ಡಾಕ್ಟರಲ್‌ ಸ್ಟಡೀಸ್‌ ಮಾಡಬಯಸುವ ಸ್ನಾತಕೋತ್ತರ ಪದವೀಧರರೂ ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆಯಾದವರ ಶೈಕ್ಷಣಿಕ ಅರ್ಹತೆ ಹಾಗೂ ಆರ್ಥಿಕ ಸ್ಥಿತಿಗತಿಯನ್ನು ಆಧರಿಸಿ ಬೋಧನಾ ಶುಲ್ಕದ ಗರಿಷ್ಠ ಹಾಗೂ ವಸತಿ ವೆಚ್ಚವನ್ನು ಈ ವಿದ್ಯಾರ್ಥಿ ವೇತನ ಭರಿಸುತ್ತದೆ.

ಕೊನೆಯ ದಿನ: 2019ರ ಮಾರ್ಚ್ 20

ಅರ್ಜಿ ಸಲ್ಲಿಕೆ ವಿಧಾನ: ಆಫ್‌ಲೈನ್‌ ಮೂಲಕ ಮಾತ್ರ

ಮಾಹಿತಿಗೆ: http://www.b4s.in/praja/AKF5

***

ಕೃಪೆ: www.buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT