ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆದರ್ಲೆಂಡ್ಸ್‌ನಲ್ಲಿ ಶಿಷ್ಯವೇತನ

Last Updated 25 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಬೇಕು ಎಂಬ ಆಕಾಂಕ್ಷೆವುಳ್ಳವರಿಗೆ ನೆದರ್ಲೆಂಡ್ಸ್‌ನಲ್ಲಿ (ಡಚ್‌) ಉತ್ತಮ ಅವಕಾಶವಿದೆ. ಯೂರೋಪಿನ ಈ ಪುಟ್ಟ ದೇಶದಲ್ಲಿ ಶಿಕ್ಷಣಕ್ಕೂ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಉದ್ಯೋಗಾವಕಾಶಕ್ಕೂ ಹೇರಳ ಅವಕಾಶಗಳಿವೆ. ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ದೇಶಕ್ಕೆ ಬಂದು ಶಿಕ್ಷಣ ಪಡೆಯಲಿ ಎಂಬ ಮುಕ್ತ ಆಹ್ವಾನವನ್ನು ಆ ದೇಶ ನೀಡಿದೆ.

ಇಲ್ಲಿನ 19 ಪ್ರಮುಖ ವಿಶ್ವವಿದ್ಯಾಲಯಗಳು 55 ಶಿಷ್ಯವೇತನವನ್ನು ನೀಡುತ್ತವೆ. ‘ಆರೆಂಜ್‌ ಟ್ಯುಲಿಪ್‌ ಶಿಷ್ಯವೇತನ’ ಎಂದೇ ಖ್ಯಾತಿ ಪಡೆದಿದ್ದು, ಭಾರತೀಯ ವಿದ್ಯಾರ್ಥಿಗಳಿಗೆಂದೇ ₹3.65 ಕೋಟಿ ಶಿಷ್ಯವೇತನವನ್ನು ಮೀಸಲಿಟ್ಟಿದೆ.

ಬಹುತೇಕ ವಿಶ್ವವಿದ್ಯಾಲಯಗಳು ವಿವಿಧ ಕೋರ್ಸ್‌ಗಳಿಗೆ ಬೋಧನಾ ಶುಲ್ಕ ಮನ್ನಾ ಮಾಡಿವೆ. ಮ್ಯೂಸಿಯಾಲಜಿ, ವೈದ್ಯಕೀಯ, ಔಷಧ ಸಂಶೋಧನೆ ಮುಂತಾದ ಕೋರ್ಸ್‌ಗಳಿಗೆ ಶುಲ್ಕ ಮನ್ನಾ ಸೌಲಭ್ಯವಿದೆ. 2017ರಲ್ಲಿ 2,021 ಭಾರತೀಯ ವಿದ್ಯಾರ್ಥಿಗಳು ನೆದರ್ಲೆಂಡ್ಸ್‌ನಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ ಎಂದು ನೆದರ್ಲೆಂಡ್ಸ್‌ ರಾಯಭಾರಿ ಮಾರ್ಟಿನ್‌ ವ್ಯಾನ್‌ ಡೆನ್‌ ಬರ್ಗ್ ‘ಪ್ರಜಾವಾಣಿ’ಗೆ ತಿಳಿಸಿದರು.

ಎಂಜಿನಿಯರಿಂಗ್‌, ಅರ್ಥಶಾಸ್ತ್ರ, ವಿಜ್ಞಾನ, ಕೃಷಿ, ಪರಿಸರ, ಸಾಮಾಜಿಕ ಅಧ್ಯಯನ, ಕಲೆ ಮತ್ತು ಸಂಸ್ಕೃತಿ ವಿಷಯಗಳಲ್ಲಿ ಅಧ್ಯಯನಕ್ಕೆ ಆ ದೇಶದಲ್ಲಿ ಅವಕಾಶವಿದೆ. ಸೈಬರ್‌ ಭದ್ರತೆಗೆ ಸಂಬಂಧಿಸಿದಂತೆ ಡಚ್‌ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣ ನೀಡುತ್ತವೆ. ರಾಜ್ಯದ ಕೆಲವು ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮದ ನಡುವಿನ ಬಾಂಧವ್ಯ ಬಲಪಡಿಸಲು ‘ದಿ ಹೇಗ್‌ ಸೆಂಟರ್‌ ಫಾರ್‌ ಸ್ಟ್ರ್ಯಾಟಜಿಕ್‌ ಸ್ಟಡೀಸ್‌’ ಜೊತೆ ಸಹಭಾಗಿತ್ವವನ್ನು ಹೊಂದಿದೆ. ಭಾರತ‍–ಡಚ್‌ ಸಹಭಾಗಿತ್ವದ ಯೋಜನೆಯಡಿ ಬೆಂಗಳೂರು ಐಐಟಿಯ ಐವರು ವಿದ್ಯಾರ್ಥಿಗಳು ಸೈಬರ್‌ ಭದ್ರತೆ ಕುರಿತು ಉನ್ನತ ಅಧ್ಯಯನ ನಡೆಸಿದ್ದಾರೆ.

ಉದ್ಯೋಗಾವಕಾಶ

ನೆದರ್ಲೆಂಡ್ಸ್‌ನಲ್ಲಿ 35,000 ಎಂಜಿನಿಯರಿಂಗ್‌ ಉದ್ಯೋಗಗಳು ಖಾಲಿ ಇದ್ದು ಕರ್ನಾಟಕದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಡೆನ್‌ ಬರ್ಗ್ ಹೇಳಿದ್ದಾರೆ. ವಿವಿಧ ಬಗೆಯ ಹೈಟೆಕ್‌ ಕೈಗಾರಿಕೆಗಳೂ ಸೇರಿ ಹಲವು ಉದ್ಯಮಗಳಲ್ಲಿ ಎಂಜಿನಿಯರ್‌ಗಳ ಕೊರತೆ ಇದೆ. ಮುಖ್ಯವಾಗಿ, ರೋಬಾಟಿಕ್‌, ಟ್ರಕ್‌, ಸಣ್ಣ ಕಾರುಗಳ ತಯಾರಿಕೆ, ಎಲೆಕ್ಟ್ರಾನಿಕ್ಸ್‌ ಕ್ಷೇತ್ರದಲ್ಲಿ ಅವಕಾಶಗಳು ಲಭ್ಯ ಇದೆ. ಅಲ್ಲದೆ, ಕೃಷಿ ಮತ್ತು ಜಲನಿರ್ವಹಣೆ ಕ್ಷೇತ್ರಗಳಲ್ಲೂ ಉದ್ಯೋಗಾವಕಾಶ ಇದೆ. ಕರ್ನಾಟಕದ ಯುವ ಎಂಜಿನಿಯರ್‌ಗಳು ಈ ಕೊರತೆ ನೀಗಬಹುದು ಎಂಬುದು ಅವರ ಆಶಯ.

**

ವಿವರ ಮತ್ತು ಮಾಹಿತಿಗೆ ಸಂಪರ್ಕಿಸಿ:

* ಜಾಲತಾಣ: nuffic neso

* ಇಮೇಲ್:anweshamajumdar@nesoindia.org ಹಾಗೂsubrotochakravarti@nesoindia.org

**

‘ನಮ್ಮ ದೇಶದಲ್ಲಿ 19 ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶವಿದೆ. ಈ ವರ್ಷ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣದಲ್ಲಿ 55 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುವುದು. ಭಾರತೀಯ ವಿದ್ಯಾರ್ಥಿಗಳನ್ನು ಸೆಳೆಯಲು ಸುಮಾರು ₹ 3.65 ಕೋಟಿ ಮೊತ್ತವನ್ನು ಶಿಷ್ಯ ವೇತನಕ್ಕೆ ನಿಗದಿ ಮಾಡಲಾಗಿದೆ’

–ಮಾರ್ಟಿನ್‌ ವ್ಯಾನ್‌ ಡೆನ್‌ ಬರ್ಗ್,ರಾಯಭಾರಿ,ನೆದರ್‌ಲ್ಯಾಂಡ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT