ದಾವಣಗೆರೆ ಸರ್ಕಾರಿ ಶಾಲೆಗಳಿಗೆ ಮಕ್ಕಳ ಬರ!

7
3 ವರ್ಷಗಳ ಅಂತರದಲ್ಲಿ 18 ಸಾವಿರ ಮಕ್ಕಳ ದಾಖಲಾತಿ ಇಳಿಮುಖ

ದಾವಣಗೆರೆ ಸರ್ಕಾರಿ ಶಾಲೆಗಳಿಗೆ ಮಕ್ಕಳ ಬರ!

Published:
Updated:
Deccan Herald

ತುಮಕೂರು: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳು ಸಂಖ್ಯೆ ಇಳಿಮುಖವಾಗುತ್ತಿದೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳು ಯಾವುದೇ ರೀತಿಯಲ್ಲಿ ಜಾಗೃತಿ ಮೂಡಿಸಿದರೂ ಖಾಸಗಿ ಶಾಲೆಗಳತ್ತ ಪೋಷಕರ ವ್ಯಾಮೋಹಗೊಂಡಿರುವುದು ಎದ್ದು ಕಾಣುತ್ತಿದೆ.

ಕಳೆದ ಮೂರು ಶೈಕ್ಷಣಿಕ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹಂತ ಹಂತವಾಗಿ ಇಳಿಕೆಯಾಗುತ್ತಿದೆ. ಈ ಹಂತ ಹಂತದ ಇಳಿಕೆಯೇ ಭವಿಷ್ಯದಲ್ಲಿ ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚಿಸುವಲ್ಲಿ ಕಾರಣವಾಗುತ್ತಿದೆ. 

ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ 2016–17ರಲ್ಲಿ ಒಂದರಿಂದ 10ನೇ ತರಗತಿಯವರೆಗೆ 1,06,844 ವಿದ್ಯಾರ್ಥಿಗಳು ದಾಖಲಾಗಿದ್ದರು. 2017–18ರಲ್ಲಿ 1,01,828 ಹಾಗೂ ಪ್ರಸಕ್ತ 2018–19ನೇ ಶೈಕ್ಷಣಿಕ ವರ್ಷದಲ್ಲಿ 97,436 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕೇವಲ ಮೂರೇ ವರ್ಷದ ಅಂತರದಲ್ಲಿ ಹತ್ತು ಸಾವಿರ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆ ಆಗಿದೆ.

ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 2016–17ರಲ್ಲಿ ಒಂದರಿಂದ 10ನೇ ತರಗತಿಯವರೆಗೆ 83,668 ವಿದ್ಯಾರ್ಥಿಗಳು ದಾಖಲಾಗಿದ್ದರು. 2017–18ರಲ್ಲಿ 77,789 ಹಾಗೂ ಪ್ರಸಕ್ತ 2018–19ನೇ ಶೈಕ್ಷಣಿಕ ವರ್ಷದಲ್ಲಿ 75,737 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕೇವಲ ಮೂರೇ ವರ್ಷದ ಅಂತರದಲ್ಲಿ 8 ಸಾವಿರ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆ ಆಗಿದೆ. ಹೀಗೆ ವರ್ಷದಿಂದ ವರ್ಷಕ್ಕೆ ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗುವುದು ಕಡಿಮೆ ಆಗುತ್ತಿದೆ.

ನಡುವೆ ಶಾಲೆ ಬಿಡುವವರು ಹೆಚ್ಚಳ: ಇಡೀ ಜಿಲ್ಲೆಯ ಶೈಕ್ಷಣಿಕ ಅಂಕಿ ಅಂಶಗಳನ್ನು ಗಮನಿಸಿದಾಗ ಸರ್ಕಾರಿ ಶಾಲೆಗಳಿಗೆ ನಡುವೆಯೇ ‘ಕೈ’ ಕೊಡುವವರ ಸಂಖ್ಯೆ ಹೆಚ್ಚಿದೆ. ಒಂದನೇ ತರಗತಿಗೆ ದಾಖಲಾಗಿ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳ ಸಂಖ್ಯೆ ಅತಿ ವಿರಳ. ಹಂತ ಹಂತವಾಗಿ ಮಕ್ಕಳು ಶಾಲೆ ಬಿಡುತ್ತಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಇನ್ನೂ ಕುತ್ತು ತರುವ ಬೆಳವಣಿಗೆ ಅಂದರೆ ‌‌‌ಎರಡೂ ಶೈಕ್ಷಣಿಕ ಜಿಲ್ಲೆಗಳ 1854 ಶಾಲೆಗಳಲ್ಲಿ  30ರೊಳಗೆ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕೆಲವು ಶಾಲೆಗಳಲ್ಲಿ 5, 10 ಮಂದಿ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಈ ಶಾಲೆಗಳಿಗೆ ಭವಿಷ್ಯದಲ್ಲಿ ಬೀಗ ಬೀಳುವುದು ಖಚಿತ ಎನ್ನುವಂತಿದೆ.

‘ಎರಡು ಮೂರು ಕಿಲೋಮೀಟರ್‌ ವ್ಯಾಪ್ತಿಯಲ್ಲಿಯೇ ಖಾಸಗಿ, ಸರ್ಕಾರಿ ಶಾಲೆಗಳು ಹೇರಳವಾಗಿವೆ. ಸರ್ಕಾರಿ ಶಾಲೆ ಇದ್ದ ಸಮೀಪದಲ್ಲಿಯೇ ಸರ್ಕಾರ ಖಾಸಗಿ ಶಾಲೆಗೂ ಅನುಮತಿ ನೀಡುತ್ತದೆ. ಹೀಗಿದ್ದ ಮೇಲೆ ಸರ್ಕಾರಿ ಶಾಲೆಗೆ ಮಕ್ಕಳು ಹೇಗೆ ದಾಖಲಾಗುವರು’ ಎಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಪ್ರಶ್ನಿಸುವರು.

****

ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ

ತಾಲ್ಲೂಕು                    2016–17             2017–18            2018–19
ಚಿಕ್ಕನಾಯಕನಹಳ್ಳಿ         16,881                16,379               15,873
ಗುಬ್ಬಿ                          19,810                19,159               18,444
ಕುಣಿಗಲ್                     15,019                 13,751               12,961
ತಿಪಟೂರು                   13,681                 12,849               12,247
ತುಮಕೂರು                  31,826                 30,562               29,160
ತುರುವೇಕೆರೆ                 9,627                   9,128                  8,751

***

ಮಧುಗಿರಿ ಶೈಕ್ಷಣಿಕ ಜಿಲ್ಲೆ

ತಾಲ್ಲೂಕು             2016–17            2017–18            2018–19

ಕೊರಟಗೆರೆ           15,004                14,029               13,794
ಮಧುಗಿರಿ              21,489                20,029              16,603
ಪಾವಗಡ              18,614                16,742              16,064
ಶಿರಾ                    28,561               26,989               26,321

 

2018–19ನೇ ಸಾಲಿನಲ್ಲಿ ಒಂದರಿಂದ ಮೂವತ್ತರೊಳಗೆ ವಿದ್ಯಾರ್ಥಿಗಳು ದಾಖಲಾಗಿರುವ ಶಾಲೆಗಳ ಸಂಖ್ಯೆ

ಚಿಕ್ಕನಾಯಕನಹಳ್ಳಿ 160
ಗುಬ್ಬಿ 238
ಕುಣಿಗಲ್ 235
ತಿಪಟೂರು 167
ತುಮಕೂರು 252
ತುರುವೇಕೆರೆ 193
ಕೊರಟಗೆರೆ 195
ಮಧುಗಿರಿ 83
ಪಾವಗಡ 180
ಶಿರಾ 155

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !