ಸ್ಮಾರ್ಟ್ ತರಗತಿಗೆ ಸ್ಮಾರ್ಟ್ ಪೀಠೋಪಕರಣ

7
ಶಿಕ್ಷಣ ಕ್ರಾಂತಿಗೆ ಡವ್‌ಟೇಲ್‌ ನೆರವು...

ಸ್ಮಾರ್ಟ್ ತರಗತಿಗೆ ಸ್ಮಾರ್ಟ್ ಪೀಠೋಪಕರಣ

Published:
Updated:

ಮಗುವಿನ ಸಾಮಾಜೀಕರಣದ ಮಹತ್ವದ ಘಟ್ಟವೇ ಶಾಲೆ. ಶಿಕ್ಷಣ ಎಂದರೆ ನಾಲ್ಕು ಗೋಡೆಗಳ ಮಧ್ಯೆ ಎಂಬುದು ಎಷ್ಟು ನಿಜವೋ, ಅಲ್ಲಿರುವ ನಾಲ್ಕು ಗೋಡೆಗಳ ಮಧ್ಯದಲ್ಲಿ ಇರುವ ವಾತಾವರಣ ಹೇಗಿದೆ ಎಂಬುದೂ ಮುಖ್ಯ. ಈಗಂತೂ ಡಿಜಿಟಲ್ ಶಿಕ್ಷಣದ ಕ್ರಾಂತಿಯೇ ಆಗುತ್ತಿದೆ.  ತರಗತಿ ಕೋಣೆಗಳು ಸ್ಮಾರ್ಟ್ ಆಗುತ್ತಿವೆ. ಡಿಜಿಟಲ್ ಹಲಗೆಗಳು ಬಂದಿವೆ. ವಿದ್ಯಾರ್ಥಿಗಳ ಚೀಲಗಳಲ್ಲಿ ಲ್ಯಾಪ್‌ಟಾಪ್, ಮೊಬೈಲ್‌ಗಳು ಆವರಿಸಿವೆ. 

ಹಿಂದೆಲ್ಲಾ ಶಾಲಾ ಕೊಠಡಿಗಳಲ್ಲಿ ನೆಲದ ಮೇಲೆ ಕುಳಿತು ವಿದ್ಯಾರ್ಥಿಗಳು ಕಲಿಯುವ ಪರಿಸ್ಥಿತಿ ಇತ್ತು. ಕ್ರಮೇಣ ಮರದ ಹಲಗೆಗಳು ಬಂದವು. ವಿದ್ಯಾರ್ಥಿಗಳಿಗೆ ಖುಷಿಯೋ ಖುಷಿ. ಹಲಗೆಗಳ ಜಾಗವನ್ನು ಬೆಂಚ್‌ಗಳು ತುಂಬಿದವು. ಬಳಿಕ ಡೆಸ್ಕ್‌ಗಳ ಆಗಮನವಾಯಿತು. ಡೆಸ್ಕ್‌ ಮೇಲೆ ಕುಳಿತುಕೊಳ್ಳಲು ಹಾಗೂ ಬರೆಯಲು ಸಾಧ್ಯವಾಯಿತು. ಕಾಲಾನುಕ್ರಮದಲ್ಲಿ ಡೆಸ್ಕ್‌ನ ವಿನ್ಯಾಸ ಬದಲಾಗುತ್ತಾ ಹೋಯಿತು. ಈಗಲೂ ಆಗುತ್ತಲೇ ಇದೆ.

ಶಾಲೆ ಅಂದರೆ ಆಧುನಿಕ ಕಚೇರಿಗಳು
ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಇಲ್ಲ. ಕೊಠಡಿಗಳು ಕಿರಿದಾಗಿದ್ದು, ಮಕ್ಕಳು ಕಷ್ಟದಿಂದ ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಒಂದು ಬೆಂಚಿಗೆ ಮೂರರಿಂದ ನಾಲ್ಕು ವಿದ್ಯಾರ್ಥಿಗಳು ಕುಳಿತುಕೊಳ್ಳುತ್ತಾರೆ. ಇದು ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಿದರೂ, ಸಂವಹನ, ಗುಂಪು ಚರ್ಚೆಗಳಿಗೆ ಆಸ್ಪದ ನೀಡುವುದಿಲ್ಲ. ಇತ್ತೀಚೆಗೆ ತರಗತಿ ಕೊಠಡಿಗಳಲ್ಲಿ ಮೇಜು ಮತ್ತು ಕುರ್ಚಿಗಳನ್ನು ಪ್ರತ್ಯೇಕವಾಗಿ ಅಳವಡಿಸುವ ಹೊಸ ವಿನ್ಯಾಸಗಳನ್ನು ರೂಪಿಸಲಾಗಿದೆ. ಇದು ಆಧುನಿಕ ಕಚೇರಿಗಳ ಪರಿಕಲ್ಪನೆ. 

ವಿದ್ಯಾರ್ಥಿಗಳಿಗೆ ಕೇವಲ ಬೋಧಿಸುವುದು ಶಿಕ್ಷಣದ ಕೆಲಸವಲ್ಲ. ಅವರಲ್ಲಿ ಸೃಜನಾತ್ಮಕ ಕಲಿಕೆ ಉಂಟು ಮಾಡುವುದು ಮುಖ್ಯ. ವಿದ್ಯಾರ್ಥಿಗಳ ನಡುವಿನ ಸಹಯೋಗ, ತಂಡ ಆಧಾರಿತ ಕ್ರಿಯೆಗಳು ವಿದ್ಯಾರ್ಥಿಗಳಲ್ಲಿ ಹೊಸ ಹೊಳಹು ನೀಡುತ್ತವೆ. 

ತರಗತಿಯಲ್ಲಿ ಅಭ್ಯಾಸಕ್ಕೆ ಪೂರಕವಾದ ಮತ್ತು ಸಹಯೋಗಕ್ಕೆ ಅಗತ್ಯ ಎನಿಸುವ ರೀತಿಯಲ್ಲಿ ‘ಡವ್‌ಟೇಲ್ ಫರ್ನೀಚರ್’ ಎಂಬ ಸಂಸ್ಥೆಯು ವಿಶೇಷವಾದ ಪೀಠೋಪಕರಣಗಳನ್ನು ವಿನ್ಯಾಸಗೊಳಿಸಿದೆ. ಇವು ಸುಲಭವಾಗಿ ಜೋಡಿಸಬಹುದಾಗಿದ್ದು, ಸ್ಥಳಾಂತರ ಪ್ರಕ್ರಿಯೆಯೂ ಸರಳವಾಗಿದೆ.

ಪೀಠೋಪಕರಣಗಳ ವಿನ್ಯಾಸದ ಮಹತ್ವ
ಆಧುನಿಕ ಶಾಲಾ ಪೀಠೋಪಕರಣಗಳು ಈ ಹಿಂದಿನ ಪೀಠೋಪಕರಣಗಳಿಗಿಂತ ಭಿನ್ನ. ಡೆಸ್ಕ್‌ ಎಂದರೆ ಲೋಹದ ನಾಲ್ಕು ಕಾಲುಗಳು, ಮೇಲೊಂದು ಮರದ ಹಲಗೆ. ಬರವಣಿಗೆಗೆ ಮಾತ್ರ ಉಪಯೋಗವಾಗುವ ಈ ವಿನ್ಯಾಸವು ತೀರಾ ಹಳೆಯದು. ಬಣ್ಣವೂ ಪೇಲವ. ವರ್ಣರಂಜಿತವಾಗಿರ ಬೇಕಾದ ಶಾಲಾ ಕೊಠಡಿಗಳು ನೀರಸ ಎನಿಸುತ್ತಿವೆ. ಆದರೆ ಡವ್‌ಟೇಲ್ ಫರ್ನಿಚರ್ ವಿನ್ಯಾಸಗೊಳಿಸಿದ ಪೀಠೋಪಕರಣಗಳಲ್ಲಿ ಟೇಬಲ್‍ಗಳು ವಿದ್ಯಾರ್ಥಿಗಳಿಗೆ ಹೆಚ್ಚು ಜಾಗವನ್ನು ಒದಗಿಸುತ್ತವೆಯಲ್ಲವೇ, ಪುಸ್ತಕಗಳನ್ನು ಇಟ್ಟುಕೊಳ್ಳಲು ಸಾಕಷ್ಟು ಸ್ಥಳಾವಕಾಶಗಳನ್ನು ನೀಡುತ್ತವೆ. ಇದರ ಜೊತೆಗೆ ಶಾಲಾ ಬ್ಯಾಗ್ ಮತ್ತು ಕುಡಿಯುವ ನೀರಿನ ಬಾಟಲಿಯನ್ನು ಇಟ್ಟುಕೊಳ್ಳಲು ಅವಕಾಶವಿರುತ್ತದೆ. ಡೆಸ್ಕ್‌ನ ಮೂಲೆಗಳಲ್ಲಿ ವೃತ್ತಾಕಾರವಾದ ತಿರುವುಗಳಿವೆ. ಇವು ಆರಾಮದಾಯಕವೂ, ಸುರಕ್ಷಿತವೂ, ಗರಿಷ್ಠ ಸೌಲಭ್ಯವುಳ್ಳವೂ ಆಗಿವೆ. 

ಕ್ಷಮತೆ ಮೇಲೆ ಪ್ರಭಾವ
ಕೊಠಡಿಯ ಉತ್ತಮ ಪರಿಸರ ಹಾಗೂ ಪೀಠೋಪಕರಣಗಳ ಆರಾಮದಾಯಕತೆಯು ವಿದ್ಯಾರ್ಥಿಗಳ ಕಲಿಕೆ ಮತ್ತು ಕಾರ್ಯಕ್ಷಮತೆಯನ್ನು ಶೇ 25ರಷ್ಟು ಹೆಚ್ಚಿಸುತ್ತದೆ ಎಂದು ಮ್ಯಾಂಚೆಸ್ಟರ್‌ನ ಸಾಲ್ಫೋರ್ಡ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನ ದೃಢಪಡಿಸಿದೆ. ಸೂಕ್ತವಾದ ಆಸನ ವ್ಯವಸ್ಥೆಯು ವಿದ್ಯಾರ್ಥಿಗಳು ತಮ್ಮ ಕೆಲಸದ ಮೇಲೆ ಗಮನಹರಿಸಲು ನೆರವಾಗುತ್ತದೆ.

ಕಳಪೆ ಪೀಠೋಪಕರಗಳು ವಿದ್ಯಾರ್ಥಿಗಳ ಅವಧಾನವನ್ನು ಪರೀಕ್ಷಿಸುತ್ತವೆ. ಮಕ್ಕಳಲ್ಲಿ ಅಸ್ವಸ್ಥತೆ ಕಾಣಬಹುದು. ಬರವಣಿಗೆಯಲ್ಲಿ ತಪ್ಪುಗಳ ಪ್ರಮಾಣ ಹೆಚ್ಚುತ್ತದೆ. ದೀರ್ಘಾವಧಿಯಲ್ಲಿ ಮಕ್ಕಳು ತರಗತಿಗಳಿಗೆ ಹಾಜರಾಗದೇ ಇರುವ ಅಪಾಯವೂ ಇರುತ್ತದೆ ಎಂದು ಅಧ್ಯಯನ ವರದಿ ಅಭಿಪ್ರಾಯಪಟ್ಟಿದೆ. 

ಡವ್‌ಟೇಲ್ ಕಂಪನಿಯು ಮಕ್ಕಳ ವಯೋಮಾನ ಹಾಗೂ ದೇಹವನ್ನು ಗಮನದಲ್ಲಿರಿಸಿಕೊಂಡು ಪೀಠೋಪಕರಣಗಳನ್ನು ಅಭಿವೃದ್ಧಿಪಡಿಸಿದೆ ಎನ್ನುತ್ತಾರೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಂದರ್ ಸುಬ್ರಮಣ್ಯಂ.

‘ಯಾವುದೇ ಸಂಸ್ಥೆಯಾದರೂ ಅಲ್ಲಿ ಕಲಿಕೆ ಮತ್ತು ಸಹಯೋಗಕ್ಕೆ ಪ್ರೋತ್ಸಾಹ ಇರಬೇಕು. ಡಿಸೈನ್ ಮಾಡಿದ ಫರ್ನೀಚರ್‌ಗಳು ಮೂಲಭೂತ ಅಗತ್ಯತೆಗಳಲ್ಲಿ ಒಂದು. ಇವು ಹೆಚ್ಚು ಕಾಲ ಬಾಳಿಕೆ ಬರುವುದು ಮುಖ್ಯ.

ಡವ್‍ಟೇಲ್ ಕಳೆದ ಅನೇಕ ವರ್ಷಗಳಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಶಾಲೆಗಳು ಎದುರಿಸುವ ಮೂಲಭೂತ ಸೌಕರ್ಯದ ತೊಂದರೆಯನ್ನು ದೂರ ಮಾಡಿದೆ. ಹೊಸ ಹೊಸ ಮಾದರಿಗಳು ಹಾಗೂ ಅವುಗಳ ಗುಣಮಟ್ಟ, ತಯಾರಿಕಾ ವಿಧಾನ ಅತ್ಯುತ್ತಮವಾಗಿದೆ ಎನ್ನುತ್ತಾರೆ ಗೇರ್ ಫೌಂಡೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸರ್ವೇಶ್ ಶ್ರೀನಿವಾಸನ್.

ಡವ್‌ಟೇಲ್‌ ಬಗ್ಗೆ...
1985ರಲ್ಲಿ ಸ್ಥಾಪನೆಯಾದ ಡವ್‌ಟೇಲ್ ಕಂಪನಿಯು, ಶಾಲೆಗಳು, ಸಂಸ್ಥೆಗಳ ಪೀಠೋಪಕಣಗಳನ್ನು ವಿನ್ಯಾಸಗೊಳಿಸುತ್ತಿದೆ. ಮನೆಗಳ ಒಳಾಂಗಣ ವಿನ್ಯಾಸ, ಆಲಂಕಾರಿಕ ಪರಿಕರಗಳು, ನೆಲಹಾಸು, ಕಚೇರಿ ಸಲಕರಣೆಗಳನ್ನು ಪೂರೈಸುವ ಬೃಹತ್ ಸಂಘಟಿತ ಉದ್ಯಮಗಳಲ್ಲಿ ಒಂದಾಗಿದೆ.

ಶೈಕ್ಷಣಿಕ ವಿಚಾರಗಳಿಗೆ ಕಂಪನಿ ಆದ್ಯತೆ ನೀಡುತ್ತಾ ಬಂದಿದೆ. ವೈಜ್ಞಾನಿಕ ವಿಧಾನದಲ್ಲಿ ಶಾಲಾ ಉಪಕರಣಗಳನ್ನು ತಯಾರಿಸಿಕೊಡುತ್ತಿದೆ. ಡೆಸ್ಕ್‌ಗಳು ವಿವಿಧ ಬಣ್ಣಗಳಿಂದ ಆಕರ್ಷಿಸುತ್ತವೆ. ತರಗತಿ ಗೋಡೆಗಳಿಗೆ ಚಿತ್ತಾರ ಬಿಡಿಸಿ, ಮಕ್ಕಳ ಗಮನ ಸೆಳೆಯಲಾಗುತ್ತದೆ.

ಜಗತ್ತಿನಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಹಳ್ಳಿಗಾಡಿನ ಶಾಲೆಗಳಿಗೂ ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಶಾಲೆ ಮುಗಿದರೆ ಸಾಕು ಮಕ್ಕಳು ಮನೆಯತ್ತ ಓಡುತ್ತಾರೆ. ಆದರೆ ಮಕ್ಕಳು ಶಾಲೆಯತ್ತ ಉತ್ಸಾಹದಿಂದ ಓಡಿಬರುವಂತೆ ತರಗತಿಯ ವಾತಾವರಣ ಪುನರ್‌ರೂಪಿಸಬೇಕು ಎಂಬ ಆಶಯ ಕಂಪನಿಯದ್ದು. 

ತರಗತಿಯಷ್ಟೇ ಅಲ್ಲದೆ, ಆಡಳಿತ ಮಂಡಳಿ ಕಚೇರಿ, ಪ್ರಯೋಗಾಲಯ, ಗ್ರಂಥಾಲಯ, ಊಟದ ಹಾಲ್‌ಗಳ ವಿನ್ಯಾಸವನ್ನು ಶಾಲೆಯ ಬಜೆಟ್‌ಗೆ ಅನುಗುಣವಾಗಿ ರೂಪಿಸಿಕೊಡುವ ವಾಗ್ದಾನವನ್ನು ಸಂಸ್ಥೆ ನೀಡಿದೆ. ಶಾಲಾ ವಿನ್ಯಾಸದಲ್ಲಿ ಆಗುತ್ತಿರುವ ಸಂಶೋಧನೆಗಳು ದೇಶದಲ್ಲಿ ಗುಣಮಟ್ಟದ ಶಿಕ್ಷಣವನ್ನು ಸೂಚಿಸುತ್ತವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !