ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವೈಕಲ್ಯ ಮೆಟ್ಟಿನಿಂತ ಕಿರಣ್

Last Updated 24 ಏಪ್ರಿಲ್ 2019, 19:46 IST
ಅಕ್ಷರ ಗಾತ್ರ

ಅಂಗವೈಕಲ್ಯಮೆಟ್ಟಿನಿಂತಕಿರಣ್
ತಾವೊಬ್ಬ ಅಂಗವಿಕಲ. ತನ್ನಂತೆ ಉಳಿದ ಅಂಗವಿ ಕಲರೂ ಎದುರಿಸುವ ಕಷ್ಟಕೋಟಲೆಗಳನ್ನು ಅರಿತು, ಅವರ ಕಲ್ಯಾಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆಕಿರಣ್‌ ನಾಯಕ್. ಬಾಲ್ಯದಿಂದ ಊರುಗೋಲಿನೊಂದಿಗೆ ಜೀವಿಸಿದಕಿರಣ್, ಮುಂದೆ ತ್ರಿಚಕ್ರವಾಹನಗಳಲ್ಲೇ ಅಡ್ಡಾಡುತ್ತಾ, ಅಂಗವಿಕಲರಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿರುವ ಅಪ್ರತಿಮ ಸಾಧಕ.

ಕಿರಣ್, ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆ ನರಸನಪೇಟೆ ಲಂಬಾಣಿ ಕುಟುಂಬದಲ್ಲಿ ಜ.1, 1986ರಲ್ಲಿ ಹುಟ್ಟಿದರು. ಸದ್ಯ ಚಿಕ್ಕಬಳ್ಳಾಪುರದಲ್ಲಿ ವಾಸವಿದ್ದಾರೆ. ಮೂರನೇ ವಯಸ್ಸಿನಲ್ಲೇ ಪೋಲಿಯೊ ಸಮಸ್ಯೆಯಿಂದ ಎರಡೂ ಕಾಲುಗಳ ಸ್ವಾಧೀನ ಕಳೆದು ಕೊಂಡರು. ಆಗಿನಿಂದ ಅವರು ಉರುಗೋಲು ಅಥವಾ ತ್ರಿಚಕ್ರ ವಾಹನವನ್ನೇ ಅವಲಂಬಿಸಿ, ಬದುಕು ಆರಂಭಿಸಿದರು.

ಶಿಕ್ಷಣ ಕೊಡಿಸಲುಪೋಷಕರು ಒಪ್ಪದಿದ್ದರೂಕಿರಣ್ಸ್ವಯಂ ಆಸಕ್ತಿ ಮತ್ತು ಇಚ್ಛಾಶಕ್ತಿ ತೋರಿ ಶಿಕ್ಷಕ ರೊಬ್ಬರ ನೆರವಿನಿಂದ ಶಿಕ್ಷಣ ಪಡೆದರು. ಕೌಟಂಬಿಕ ಮತ್ತು ಸಾಮಾಜಿಕ ವ್ಯವಸ್ಥೆಯಿಂದ ಬೇರೆ ಬೇರೆ ಸ್ವರೂಪದಲ್ಲಿ ಮಾನಸಿಕ ಮತ್ತು ದೈಹಿಕ ಶೋಷಣೆಗೆ ಒಳಗಾದರು. 9ನೇ ತರಗತಿ ಕಲಿಯುವಾಗಲೇ ಅಂಗವಿಕಲರ ಸಂಘ ಕಟ್ಟಲು ಅವರು ಪಣತೊಟ್ಟರು.

2007ರಲ್ಲಿ ‘ಪ್ರಜ್ವಲ ವಿಕಲಾಂಗ ಸಮಕ್ಷೇಮ ಸಂಘ’ ಕಟ್ಟಿದ ಅವರು ಅಂಗವಿಕಲರ ಹಕ್ಕು ಮತ್ತು ಮೀಸಲಾತಿಗಾಗಿ ಹೋರಾಟ ಆರಂಭಿಸಿದರು. ಅನಿವಾರ್ಯ ಕಾರಣಗಳಿಂದ ವಾರಂಗಲ್ ತೊರೆದ ಅವರು ಸಂಗಮ ಸಂಸ್ಥೆಯ ನೆರವಿನೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿದರು. ಕನ್ನಡ ಬರೆಯುವುದು–ಓದುವುದು ಕಲಿತರು. ಅಂಗವಿಕಲರ ಕ್ಷೇತ್ರದಲ್ಲಿ ಇನ್ನಷ್ಟು ಅಧ್ಯಯನ ಮಾಡಿದರು.

2012ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಕರ್ನಾಟಕ ವಿಕಲಚೇತನರ ಸಂಘಟನೆ ಕಟ್ಟಿದ ಅವರು ಜಿಲ್ಲಾ ವ್ಯಾಪ್ತಿಯಲ್ಲಿ ಅಂಗವಿಕಲರ ಸಮೀಕ್ಷೆ ಕಾರ್ಯ ಕೈಗೆತ್ತಿ ಕೊಂಡರು. ಜಿಲ್ಲೆಯಾದ್ಯಂತ ಸಂಚರಿಸಿ ಅಂಗವಿಕಲರಲ್ಲಿ ಹಕ್ಕುಗಳು ಮತ್ತು ಸರ್ಕಾರಿ ಯೋಜನೆಗಳ ಸದ್ಬಳಕೆ ಬಗ್ಗೆ ಜಾಗೃತಿ ಮೂಡಿಸಿದರು. ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕುರಿತು ಆಶಾಭಾವ ಮೂಡಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಘಟಕಗಳನ್ನು ಆರಂಭಿಸಿರುವ ಅವರ ಸಂಘವು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜತೆಗೆ, ರಾಜ್ಯವ್ಯಾಪಿ ವಿಸ್ತರಿಸಿದೆ. ವಿವಿಧೆಡೆಯ ಅಂಗವಿಕಲರನ್ನು ಸಂಘಕ್ಕೆ ಸದಸ್ಯರನ್ನಾಗಿಸಿಕೊಂಡು ಅವರಿಗೆ ಸರ್ಕಾರದದಿಂದ ಸೌಲಭ್ಯ ಕಲ್ಪಿಸಿ, ಆತ್ಮವಿಶ್ವಾಸ ಮೂಡಿಸಿ, ಸಾಧನೆಗೆ ಪ್ರೋತ್ಸಾಹಿಸುತ್ತಿದ್ದಾರೆ.

ಅಂಗವಿಕಲರ ಕ್ಷೇತ್ರದಲ್ಲಿನ ಅವರ ಸೇವೆ ಪರಿಗಣಿಸಿ 2016ರಲ್ಲಿ ರಾಜ್ಯ ಸರ್ಕಾರವು ಅತ್ಯುತ್ತಮ ಸೇವೆಗಾಗಿ ಪ್ರಶಸ್ತಿ ಪ್ರದಾನ ಮಾಡಿದೆ. ಅಪರೂಪದ ಸಾಧಕರಿಗೆ ಡಾ. ಬಾತ್ರಾಸ್‌ ಸಂಸ್ಥೆ ನೀಡುವ ‘ಪಾಸಿಟಿವ್ ಹೆಲ್ತ್ ಹೀರೊ’ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅನುಮಲಿಕ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತರೂ ಆಗಿರುವ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅಂಗವಿಕಲರಿಗೆ ಅಥವಾ ಲೈಂಗಿಕ ಅಲ್ಪಸಂಖ್ಯಾತರಿಗೆ ಅನ್ಯಾಯವಾ ದಲ್ಲಿ, ತಕ್ಷಣವೇ ಸ್ಪಂದಿಸುತ್ತಾರೆ.

‘ಅಂಗವಿಕಲ ಮಹಿಳೆಯರು ಹಲವು ಸ್ವರೂಪದ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಯಾರೂ ಸ್ಪಂದಿಸುವುದಿಲ್ಲ. ಅವರ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನ ಕೈಗೊಂಡಿದ್ದೇನೆ‘ ಎನ್ನುತ್ತಾರೆಕಿರಣ್‌. ಅವರ ಸಂಪರ್ಕ ಸಂಖ್ಯೆ: 99722 03841

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT