ಶನಿವಾರ, ನವೆಂಬರ್ 16, 2019
21 °C

ಎಸ್‌ಎಸ್‌ಸಿ ಎಂಟಿಎಸ್‌ ಪರೀಕ್ಷೆ ಫಲಿತಾಂಶ ಪ್ರಕಟ

Published:
Updated:

ನವದೆಹಲಿ: ಕೇಂದ್ರದ ಸ್ಟಾಫ್‌ ಸೆಲೆಕ್ಷನ್ ಕಮಿಷನ್ ನಡೆಸುವ ಎಸ್‌ಎಸ್‌ಸಿ ಎಂಟಿಎಸ್‌ ಹುದ್ದೆಗಳ ನೇಮಕಾತಿಯ ಮೊದಲ ಹಂತದ (ಟಯರ್‌–1) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.

ಎಂಟಿಎಸ್‌ ಹುದ್ದೆಗಳ ನೇಮಕಾತಿಯ ಟಯರ್‌–1 ಪರೀಕ್ಷೆ ಕಳೆದ ಆಗಸ್ಟ್ ತಿಂಗಳಲ್ಲಿ ನಡೆದಿತ್ತು. ಸ್ಟಾಫ್‌ ಸೆಲೆಕ್ಷನ್ ಕಮಿಷನ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ನೋಡಬಹುದು.

ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಮುಂದಿನ ಹಂತದ ಪರೀಕ್ಷೆಯನ್ನು ಎದುರಿಸಬೇಕು ಎಂದು ಸ್ಟಾಫ್‌ ಸೆಲೆಕ್ಷನ್ ಕಮಿಷನ್‌ ತಿಳಿಸಿದೆ.

ಫಲಿತಾಂಶ ನೋಡಬಹುದಾದ ವೆಬ್‌ಸೈಟ್‌: https://ssc.nic.in/

ಫಲಿತಾಂಶದ ಪೇಜ್‌: https://bit.ly/2NIdAqE

ಪ್ರತಿಕ್ರಿಯಿಸಿ (+)