ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ: ಗಣಿತದಲ್ಲಿ ಸಂಖ್ಯಾಪದ್ಧತಿ

Last Updated 1 ಜೂನ್ 2020, 3:06 IST
ಅಕ್ಷರ ಗಾತ್ರ
ADVERTISEMENT
""

2019- 20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ವಿನ್ಯಾಸದಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಸ್ವಲ್ಪ ಬದಲಾವಣೆಯನ್ನು ಮಾಡಿದೆ. ಈ ಹಿಂದೆ ಪ್ರಶ್ನೆಪತ್ರಿಕೆ ವಿನ್ಯಾಸದಲ್ಲಿ ಘಟಕವಾರು ಅಂಕಗಳನ್ನು ನೀಡಲಾಗಿತ್ತು. ಆದರೆ ಈ ಬಾರಿ ವಿಷಯಾಧಾರಿತವಾಗಿ ಅಂಕಗಳನ್ನು ಹಂಚಿಕೆ ಮಾಡಲಾಗಿದೆ.

ವಿಷಯಾಧಾರಿತ ಅಂಕಗಳ ಹಂಚಿಕೆ

1. ಸಂಖ್ಯಾ ಪದ್ಧತಿ (ನಂಬರ್‌ ಸಿಸ್ಟಂ): 4 ಅಂಕಗಳು– ಘಟಕ (ಯೂನಿಟ್‌) - ವಾಸ್ತವ ಸಂಖ್ಯೆಗಳು (ರಿಯಲ್‌ ನಂಬರ್‌)

2. ಬೀಜಗಣಿತ (ಆಲ್‌ಜಿಬ್ರಾ): 26 ಅಂಕಗಳು– a. ಎರಡು ಚರಾಕ್ಷರವುಳ್ಳ ಜೋಡಿ ರೇಖಾತ್ಮಕ ಸಮೀಕರಣಗಳು (ಪೇರ್‌ ಆಫ್‌ ಲೀನಿಯರ್‌ ಈಕ್ವೇಶನ್‌ ಇನ್‌ ಟೂ ವೇರಿಯೇಬಲ್ಸ್‌). b. ಸಮಾನಾಂತರ ಶ್ರೇಢಿಗಳು (ಅರ್ಥ್‌ಮೆಟಿಕ್‌ ಪ್ರೋಗ್ರೆರಶನ್‌). c. ಬಹುಪದೋಕ್ತಿಗಳು (ಪಾಲಿನಾಮಿಯಲ್ಸ್‌). d. ವರ್ಗಸಮೀಕರಣಗಳು (ಕ್ವಾಡ್ರಾಟಿಕ್‌ ಈಕ್ವೇಶನ್ಸ್‌).

3. ತ್ರಿಕೋನಮಿತಿ (ಟ್ರಿಗ್ನೋಮೆಟ್ರಿ): 9 ಅಂಕ– a. ತ್ರಿಕೋನಮಿತಿಯ ಪ್ರಸ್ತಾವನೆ b. ತ್ರಿಕೋನಮಿತಿಯ ಮೇಲಿನ ಅನ್ವಯಗಳು

4. ನಿರ್ದೇಶಾಂಕ ರೇಖಾಗಣಿತ (ಕೋಆರ್ಡಿನೇಟ್‌ ಜಾಮಿಟ್ರಿ): 5 ಅಂಕ

5. ಸಂಖ್ಯಾಶಾಸ್ತ್ರ ಮತ್ತು ಸಂಭವನೀಯತೆ (ಸ್ಟಾಟೆಸ್ಟಿಕ್ಸ್‌ ಆ್ಯಂಡ್‌ ಪ್ರಾಬೆಬಿಲಿಟಿ: 9 ಅಂಕ

6. ರೇಖಾ ಗಣಿತ: 17 ಅಂಕ– a. ತ್ರಿಭುಜಗಳು (ಟ್ರಯಾಂಗಲ್ಸ್‌) b. ವೃತ್ತಗಳು (ಸರ್ಕಲ್ಸ್‌) c. ರಚನೆಗಳು (ಕನ್‌ಸ್ಟ್ರಕ್ಷನ್ಸ್‌)

7. ಕ್ಷೇತ್ರ ಗಣಿತ (ಮೆನ್ಸುರೇಶನ್‌): 10 ಅಂಕ– a. ವೃತ್ತಗಳಿಗೆ ಸಂಬಂಧಿಸಿದ ವಿಸ್ತೀರ್ಣಗಳುb. ಘನಾಕೃತಿಗಳ ಮೇಲ್ಮೈ ವಿಸ್ತೀರ್ಣ (ಸರ್‌ಫೇಸ್‌ ಏರಿಯಾ ಆ್ಯಂಡ್‌ ವಾಲ್ಯೂಮ್‌) ಮತ್ತು ಘನಫಲ

ಸಂಖ್ಯಾಪದ್ಧತಿ ಘಟಕ: ವಾಸ್ತವ ಸಂಖ್ಯೆಗಳು

1. ಯೂಕ್ಲಿಡ್‌ನ ಭಾಗಾಕಾರ ಕ್ರಮವಿಧಿಯನ್ನು ಉಪಯೋಗಿಸಿ ಎರಡು ಸಂಖ್ಯೆಗಳ ಮ.ಸಾ.ಅ. (ಎಚ್‌ಸಿಎಫ್‌)ವನ್ನು ಕಂಡು ಹಿಡಿಯುವುದು.

ಪರಿಹಾರ ಹಂತ-1: ದೊಡ್ಡ ಸಂಖ್ಯೆಯನ್ನು ಚಿಕ್ಕ ಸಂಖ್ಯೆಯಿಂದ ಭಾಗಿಸಿ, ಭಾಗಲಬ್ಧ (ಕೋಶಂಟ್‌) ಮತ್ತು ಶೇಷ (ರಿಮೇಂಡರ್‌)ಗಳನ್ನು ಪಡೆಯುವುದು.

ಹಂತ-2: ಬಂದಿರುವ ಶೇಷದಿಂದ ಹಿಂದಿನ ಭಾಜಕವನ್ನು ಭಾಗಿಸಿ ಮತ್ತೊಂದು ಭಾಗಲಬ್ದ ಮತ್ತು ಶೇಷಗಳನ್ನು ಪಡೆಯುವುದು.

ಹಂತ-3: ಶೇಷವು ‘0’ ಬರುವವರೆಗೂ ಈ ಪ್ರಕ್ರಿಯೆ ಮುಂದುವರಿಸುವುದು.

ಹಂತ-4: ಈ ಪ್ರತಿ ಭಾಗಕಾರ ಪ್ರಕ್ರಿಯೆಯ ಭಾಜಕ, ಭಾಜ್ಯ, ಭಾಗಲಬ್ದ ಮತ್ತು ಶೇಷಗಳನ್ನು ಸೂಚಿಸುವಯೂಕ್ಲಿಡ್‌ನ ಭಾಗಾಕಾರ ಕ್ರಮವಿಧಿ a =bq+r ಸಂಬಂಧದಲ್ಲಿ ವ್ಯಕ್ತಪಡಿಸುವುದು.

ಹಂತ-5: ಅಂತಿಮ ಭಾಗಾಕಾರ ಕ್ರಿಯೆಯಲ್ಲಿನ ಭಾಜಕವೇ ಅಥವಾ ಅಂತಿಮ ಸಂಬಂಧದಲ್ಲಿನ b ಬೆಲೆಯೇ ದತ್ತ ಸಂಖ್ಯೆಗಳಿಗೆ ಮ.ಸಾ.ಅ.

2 ಕೊಟ್ಟಿರುವ ಸಂಖ್ಯೆಗಳನ್ನು ಅವಿಭಾಜ್ಯ ಅಪವರ್ತನಗಳಾಗಿ ವ್ಯಕ್ತಪಡಿಸಿ ಹಾಗೂ ಅವುಗಳ ಮ.ಸಾ.ಅ. ಮತ್ತು ಲ. ಸಾ. ಅ. (ಎಲ್‌ಸಿಎಂ)ಗಳನ್ನು ಕಂಡುಹಿಡಿಯುವುದು.

ಪರಿಹಾರ

ಹಂತ-1: ಕೊಟ್ಟಿರುವ ಸಂಖ್ಯೆಗಳನ್ನು ಅವಿಭಾಜ್ಯ ಅಪವರ್ತನ (ಪ್ರೈಂ ಫ್ಯಾಕ್ಟರ್‌)ಗಳಾಗಿ ವ್ಯಕ್ತಪಡಿಸಿ.

ಹಂತ-2: ಎರಡೂ ಗುಂಪುಗಳಲ್ಲಿ ಕಡಿಮೆ ಘಾತವನ್ನು ಹೊಂದಿರುವ ಸಾಮಾನ್ಯ ಅಪವರ್ತನಗಳ ಗುಣಲಬ್ಧದ (ಪ್ರಾಡಕ್ಟ್‌)ವೇ ದತ್ತ ಸಂಖ್ಯೆಗಳ ಮ.ಸಾ.ಅ.

ಹಂತ-3: ಎರಡು ಗುಂಪುಗಳಲ್ಲಿ ಇರುವ ಅಧಿಕ ಘಾತವನ್ನು ಹೊಂದಿರುವ ಅಪವರ್ತನಗಳ ಗುಣಲಬ್ಧವೇ ಕೊಟ್ಟಿರುವ ಸಂಖ್ಯೆಗಳ ಲ. ಸಾ. ಅ.

3: ದತ್ತ ಸಂಖ್ಯೆಯು ಅಭಾಗಲಬ್ಧ ಸಂಖ್ಯೆ ಎಂದು ಸಾಧಿಸಿ.

ಹಂತ- 1. ಕೊಟ್ಟಿರುವ ಸಂಖ್ಯೆಯನ್ನು ಭಾಗಲಬ್ಧ ಸಂಖ್ಯೆ ಎಂದು ಭಾವಿಸಿ

ಹಂತ-2. ಈ ಸಂಖ್ಯೆಯನ್ನು p/qಗೆ ಸಮ ಮಾಡಿಕೊಳ್ಳಿ.

ಹಂತ-3: ಎರಡು ಕಡೆ ವರ್ಗ ಮಾಡಿ p² ಗೆ ಬಿಡಿಸಿ ಹಾಗೂ ಭಾಗಲಬ್ಧ ಸಂಖ್ಯೆಯು pಯನ್ನು ಭಾಗಿಸುತ್ತದೆ ಎಂದು ನಿರೂಪಿಸಿ.

ಹಂತ 4: ಹಾಗೆಯೇ ಭಾಗಲಬ್ಧ ಸಂಖ್ಯೆಯು q ಅನ್ನು ಭಾಗಿಸುತ್ತದೆ ಎಂದು ನಿರೂಪಿಸಿ.

ಹಂತ 5: ಭಾಗಲಬ್ಧ ಸಂಖ್ಯೆಯು p ಮತ್ತು qಗಳೆರಡನ್ನೂ ಭಾಗಿಸುತ್ತದೆ ಎಂದು ನಿರೂಪಿಸಿ.

ಹಂತ-6: p ಮತ್ತು qಗಳೆರಡನ್ನೂ ಭಾಗಿಸುವ ಸಂಖ್ಯೆ ಇಲ್ಲ. ಇದು ನಮ್ಮ ಹೇಳಿಕೆಗೆ ವಿರುದ್ಧ ಉತ್ತರವನ್ನು ನೀಡುತ್ತದೆ. ಹೀಗಾಗಿ ನಮ್ಮ ಊಹೆ ತಪ್ಪು. ಕೊಟ್ಟಿರುವ ಸಂಖ್ಯೆಯು ಅಭಾಗಲಬ್ದ (ಇರ‍್ಯಾಷನಲ್‌ ನಂಬರ್‌) ಸಂಖ್ಯೆಯಾಗಿದೆ.

(ಲೇಖಕರು ಶಿಕ್ಷಕರು, ಜಿಜಿಎಚ್‌ಎಸ್‌, ದೇವನಹಳ್ಳಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT