ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದತ್ತ ಮೇಷ್ಟ್ರು’ ಪ್ರಯತ್ನಕ್ಕೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಅಭಿನಂದನೆ

ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್ ನಾಯಕ ವೈ.ಎಸ್‌.ವಿ.ದತ್ತ ಅವರು ಈಚೆಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ವಿಚಾರವನ್ನು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಪತ್ರ ಬರೆದು ಶ್ಲಾಘಿಸಿದ್ದಾರೆ.

ಪತ್ರವನ್ನು ವೈ.ಎಸ್‌.ವಿ.ದತ್ತ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ರಾಜ್ಯದ ಹಲವು ವಿದ್ಯಾರ್ಥಿಗಳು ‘ಕನ್ನಡದಲ್ಲೇ ಪಾಠ ಮಾಡಿ, ಕನ್ನಡದಲ್ಲೂ ಪಾಠ ಮಾಡುತ್ತಿರುವುದರಿಂದ ನಮಗೆ ಅನುಕೂಲವಾಗಿದೆ. ಹೆಚ್ಚು ಕನ್ನಡ ಪದಗಳನ್ನೇ ಬಳಸಿ’ ಎಂದು ಹೇಳುತ್ತಿದ್ದಾರೆ. ಇದು ಕನ್ನಡ ಮಾಧ್ಯಮದ ಅನಿವಾರ್ಯತೆ ಹಾಗೂ ಅಗತ್ಯತೆ ಕಡೆಗೆ ಚಿಂತಿಸುವಂತೆ ಮಾಡಿದೆ’ ಎಂದು ದತ್ತ ಹೇಳಿದ್ದಾರೆ.

‘ಶಿಕ್ಷಣದ ಕುರಿತು ಅಪಾರ ಅಭಿಮಾನ–ಕಾಳಜಿ ಹೊಂದಿರುವ ತಾವು ಈ ಕ್ಷೇತ್ರಕ್ಕೆ ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡಬೇಕೆಂದು ಹಾಗೂ ಮಕ್ಕಳಿಗೆ ಸಾಧ್ಯವಾದಷ್ಟು ವಿಷಯಗಳನ್ನು ತಿಳಿಸಿ ಅರಿವು ಹೆಚ್ಚಿಸಬೇಕೆಂಬ ನಿಮ್ಮ ಕಾಳಜಿ ಮೆಚ್ಚುವಂಥದ್ದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT