ಕೈಗಾರಿಕಾ ಕೌಶಲ ಕಲಿಕೆಗೆ ‘ಸುಸಂಧಿ’

ಶನಿವಾರ, ಏಪ್ರಿಲ್ 20, 2019
25 °C

ಕೈಗಾರಿಕಾ ಕೌಶಲ ಕಲಿಕೆಗೆ ‘ಸುಸಂಧಿ’

Published:
Updated:
Prajavani

ಗ್ರಾಮೀಣ ಭಾಗಗಳಲ್ಲಿ ಪಿಯುಸಿಯ ನಂತರದ ಶಿಕ್ಷಣ ಮುಂದುವರಿಸಲು ಬಹಳಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಿರುವುದಿಲ್ಲ. ಅದರಲ್ಲೂ ವಿಜ್ಞಾನ ವಿಷಯವನ್ನು ಓದಿದವರು ಮುಂದಿನ ಶಿಕ್ಷಣಕ್ಕೆ ಸಾಕಷ್ಟು ಹಣವನ್ನು ವೆಚ್ಚ ಮಾಡಬೇಕು. ಆದರೆ, ಪ್ರತಿಭೆ ಇದ್ದರೆ ಅದಕ್ಕೆ ಯಾವುದೇ ತಡೆ ಇರುವುದಿಲ್ಲ. ಅಂತಹ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ, ಉಚಿತವಾಗಿ ಶಿಕ್ಷಣ ನೀಡಿದ ನಂತರ ಉದ್ಯೋಗಾವಕಾಶವನ್ನೂ ಒದಗಿಸುವಲ್ಲಿ ನಿರತವಾಗಿದೆ ಏಕಲಕ್ಷ್ಯ ಇನ್ನೊವೇಟಿವ್‌ ಲ್ಯಾಬ್ಸ್‌ ಸಂಸ್ಥೆ. ಇದು ನೀಡುವ ‘ಅಬ್ದುಲ್ ಕಲಾಮ್ ಸುಸಂಧಿ ಫೆಲೊಶಿಪ್ ಪ್ರೋಗ್ರಾಂ’ ಬಡ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ.

ಕೈಗಾರಿಕೆಗಳಲ್ಲಿ ಉದ್ಯೋಗ ಗಿಟ್ಟಿಸಬೇಕಾದರೆ ಪದವಿಯೊಂದಷ್ಟೇ ಈಗ ಸಾಕಾಗುತ್ತಿಲ್ಲ. ಕೌಶಲಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇಂತಹ ಕೌಶಲವನ್ನು ವಿದ್ಯಾರ್ಥಿದೆಸೆಯಲ್ಲೇ ಅಂದರೆ, ಪದವಿ ಅಧ್ಯಯನದ ಸಮಯದಲ್ಲೇ ಪಡೆದುಕೊಂಡರೆ ಅಂತಹವರಿಗೆ ಹೆಚ್ಚಿನ ಆದ್ಯತೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲವನ್ನು ಒದಗಿಸುತ್ತಿದೆ ಈ ಸುಸಂಧಿ ಫೆಲೊಶಿಪ್‌.

ಹುಬ್ಬಳ್ಳಿಯ ಕೆ.ಎಲ್‌.ಇ. ಟೆಕ್ ವಿಶ್ವವಿದ್ಯಾಲಯದ ಆವರಣದೊಳಗಿರುವ ಏಕಲಕ್ಷ್ಯ ಇನ್ನೊವೇಟಿವ್‌ ಲ್ಯಾಬ್ಸ್‌ ಈ ಫೆಲೊಶಿಪ್‌ ಪ್ರೋಗ್ರಾಂ ಅನ್ನು ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿದೆ. 2007ರಲ್ಲಿ ಪ್ರಾರಂಭವಾದ ಏಕಲಕ್ಷ್ಯ, 2010ರಿಂದ ವಿಎಲ್‌ಎಸ್‌ಐ, ಎಂಬೆಡೆಡ್‌ ಸಿಸ್ಟಮ್ಸ್‌, ಐಒಟಿ ಮೂಲಕ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಪ್ರವೇಶ ಹೇಗೆ
ರಾಜ್ಯದ ಯಾವುದೇ ಭಾಗದಲ್ಲಿರುವ, ದ್ವಿತೀಯ ಪಿಯುಸಿಯನ್ನು  ಶೇ 70ರಷ್ಟು ಅಂಕಗಳೊಂದಿಗೆ ವಿಜ್ಞಾನದಲ್ಲಿ ಮುಗಿಸಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. https://eklakshya.com ವೆಬ್‌ಸೈಟ್‌ನಲ್ಲಿ ಎಲ್ಲ ರೀತಿಯ ಮಾಹಿತಿ ಪಡೆಯಬಹುದು. ಅರ್ಜಿ ಸಲ್ಲಿಸಿದ ನಂತರ ಪ್ರವೇಶ ಪರೀಕ್ಷೆ ಹಾಗೂ ಸಂದರ್ಶನದ ನಂತರ ವಿದ್ಯಾರ್ಥಿಗೆ ನೋಂದಣಿ ಸಿಗುತ್ತದೆ.

ಬಿ.ಎಸ್ಸಿ (ಕೈಗಾರಿಕೆ) ಕೋರ್ಸ್‌
ಫೆಲೊಶಿಪ್‌ ನಾಲ್ಕು ತಿಂಗಳ ಕೌಶಲ ತರಬೇತಿಯೊಂದಿಗೆ ಆರಂಭವಾಗುತ್ತದೆ. ನಂತರ ಎಂಟು ತಿಂಗಳು ತಾಂತ್ರಿಕ ತರಬೇತಿ ನೀಡಲಾಗುತ್ತದೆ. ತದನಂತರ ಒಂದು ವರ್ಷದ ಕೈಗಾರಿಕೆ ತರಬೇತಿ ಇರುತ್ತದೆ. ಇದಾದ ಮೇಲೆ ಮೂರು ವರ್ಷದ ಬಿ.ಎಸ್‌ಸಿ (ಕೈಗಾರಿಕೆ) ಪದವಿ ಕೋರ್ಸ್ ಇರುತ್ತದೆ. ಇದನ್ನು ಯಶಸ್ವಿಯಾಗಿ ಮುಗಿಸಿದ ಮೇಲೆ ಉದ್ಯೋಗಾವಕಾಶ ದೊರಕಿಸಿಕೊಡುವ ವೇದಿಕೆ ಕಲ್ಪಿಸಿಕೊಡಲಾಗುತ್ತದೆ.

ಕೌಶಲ ತರಬೇತಿ: ಆತ್ಮವಿಶ್ವಾಸ, ಸ್ಪೋಕನ್‌ ಇಂಗ್ಲಿಷ್‌, ರಿಟನ್‌ ಇಂಗ್ಲಿಷ್‌, ಪ್ರಸ್ತುತತೆ ಕೌಶಲ, ಟೀಮ್‌ವರ್ಕ್‌, ನಾಯಕತ್ವ, ಬೇಸಿಕ್‌ ಕಂಪ್ಯೂಟರ್‌ ಕೌಶಲ, ಹಣಕಾಸಿನ ಅರಿವು, ಸಾಮಾಜಿಕ ಜವಾಬ್ದಾರಿ, ವೈಯಕ್ತಿಕ ಬೆಳವಣಿಗೆಗೆ ತರಬೇತಿ.

ತಾಂತ್ರಿಕ ತರಬೇತಿ: ಬೇಸಿಕ್‌ ಮ್ಯಾಥಮೆಟಿಕ್ಸ್‌, ಬೇಸಿಕ್‌ ಫಿಸಿಕ್ಸ್‌, ಸಿ ಪ್ರೋಗ್ರಾಮಿಂಗ್‌, ಲಿನಕ್ಸ್‌ ಆಪರೇಟಿಂಗ್‌ ಸಿಸ್ಟಮ್‌, ಬೇಸಿಕ್‌ ಎಲೆಕ್ಟ್ರಾನಿಕ್ಸ್, ಡಿಜಿಟಲ್‌ ಎಲೆಕ್ಟ್ರಾನಿಕ್ಸ್. ಸಮಸ್ಯೆ ನಿವಾರಣೆ, ಸ್ವಯಂ ಕಲಿಕೆ, ವೃತ್ತಿಪರತೆ ಮತ್ತು ನೀತಿ, ಸಮಯ ನಿರ್ವಹಣೆ, ಉನ್ನತ ಪ್ರಸ್ತುತತೆ ಕೌಶಲ.

ಡೇಟಾ ಅನಾಲಿಟಿಕ್ಸ್‌, ಸೆಮಿಕಂಡಕ್ಟರ್‌ ಸರ್ವೀಸಸ್‌, ಸಾಫ್ಟ್‌ವೇರ್‌ ಸರ್ವೀಸಸ್, ಐಟಿ, ಇಂಡಸ್ಟ್ರಿಯಲ್‌ ಐಟಿ, ಐಒಟಿ ಟೆಕ್ನಾಲಜಿ.

ವಿವಿ ಮಾನ್ಯತೆ: ಡೇಟಾ ಸ್ಟ್ರಕ್ಚರ್ಸ್‌ ಅಂಡ್‌ ಆಲ್ಗೊರಿಥಮ್ಸ್, ಅಡ್ವಾನ್ಸಡ್‌ ಪ್ರೋಗ್ರಾಂ– ಪೈಥಾನ್‌, ಸಿಎಂಒಎಸ್ ವಿಎಲ್ಎಸ್‌ಐ ಡಿಸೈನ್‌, ಸ್ಟ್ಯಾಂಡರ್ಡ್‌ ಸೆಲ್‌ ಲೈಬ್ರರಿ ಡಿಸೈನ್, ಎಕ್ಸ್‌ಟೆನ್ಸಿವ್‌ ಲ್ಯಾಬ್‌ ಸೆಷನ್ಸ್, ಕೈಗಾರಿಕೆ ಮಾರ್ಗದರ್ಶನದಲ್ಲಿ ಪ್ರಾಜೆಕ್ಟ್‌.

‘ಏಕಲಕ್ಷ್ಯ ನೀಡುವ ಬಿ.ಎಸ್‌ಸಿ ಪದವಿಗೆ ಕೆ.ಎಲ್.ಇ. ವಿಶ್ವವಿದ್ಯಾಲಯದ ಮಾನ್ಯತೆ ಇದ್ದು, ಆ ವಿಶ್ವವಿದ್ಯಾಲಯದಲ್ಲಿರುವ ಶಿಕ್ಷಕರೇ ಈ ಫೆಲೊಶಿಪ್‌ ವಿದ್ಯಾರ್ಥಿಗಳಿಗೂ ಬೋಧಿಸುತ್ತಾರೆ. ಅಲ್ಲದೆ, ಕೈಗಾರಿಕಾ ತಜ್ಞರೊಂದಿಗೆ ತಂತ್ರಜ್ಞಾನದ ಬಳಕೆಯನ್ನು ವಾಸ್ತವ ನೆಲೆಗಟ್ಟಿನಲ್ಲಿ ಕಲಿಯಬಹುದಾಗಿದೆ’ ಎನ್ನುತ್ತಾರೆ ಏಕಲಕ್ಷ್ಯದ ಸಿಇಒ ಪೂರ್ಣಿಮಾ ಮೋಹನ್‌ಚಂದ್ರ.

ಮಾಹಿತಿಗೆ ಸಂಪರ್ಕಿಸಿ: https://eklakshya.com,
80500 50186, 80500 50183.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !