ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಇಲಾಖೆ | ಶಿಕ್ಷಕರ ಅರ್ಹತಾ ಪರೀಕ್ಷೆಗೆ(T.E.T) ಅರ್ಜಿ: ಫೆ. 25 ಕಡೆ ದಿನ

Last Updated 25 ಜನವರಿ 2020, 7:55 IST
ಅಕ್ಷರ ಗಾತ್ರ

ಬೆಂಗಳೂರು:ಶಿಕ್ಷಕರಾಗಿ ನೇಮಕಾತಿ ಹೊಂದಲು ಕನಿಷ್ಠ ಅರ್ಹತೆಯಾಗಿ ಪರಿಗಣಿಸುವ ಶಿಕ್ಷಕರ ಅರ್ಹತಾ ಪರೀಕ್ಷೆಗೆ(ಟಿಇಟಿ) ಸಾರ್ವಜನಿಕ ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆ ಲಿಂಕ್‌ ನೋಡಬಹುದು.

1 ರಿಂದ 5ನೇ ತರಗತಿಗೆ ಬೋಧಿಸುವ ಶಿಕ್ಷಕರು

ವಿದ್ಯಾರ್ಹತೆ:ದ್ವಿತೀಯ ಪಿ.ಯು.ಸಿಯಲ್ಲಿ ಕನಿಷ್ಠ ಶೇ 50 ಅಂಕ ಗಳಿಸಿ, ಡಿ.ಇಡಿ ಅಥವಾ ಬಿ.ಇಡಿ ಅಥವಾ ಡಿ.ಎಲ್‌.ಇಡಿ ಕೋರ್ಸ್‌ ಮುಗಿಸಿದವರು. ಅಥವಾ ಡಿ.ಇಡಿ ಅಥವಾ ಡಿ.ಎಲ್‌.ಇಡಿ ಕೋರ್ಸ್‌ನ ಅಂತಿಮ ವರ್ಷದ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವವರು. ಡಿಪ್ಲೊಮಾ ಇನ್‌ ಎಜುಕೇಷನ್‌(ವಿಶೇಷ ಶಿಕ್ಷಣ) ಕೋರ್ಸ್‌ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕ

*ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ:₹700

*ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1ರ ಅಭ್ಯರ್ಥಿಗಳಿಗೆ:₹350

6 ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರಿಗೆ

ವಿದ್ಯಾರ್ಹತೆ:ಪದವಿ ಪರಿಕ್ಷೆಯಲ್ಲಿ ಕನಿಷ್ಠ ಶೇ 50 ಅಂಕ ಗಳಿಕೆಯೊಂದಿಗೆ ಡಿ.ಡಿಎಲ್‌.ಇಡಿ ಅಥವಾ ಬಿ.ಇಡಿ, ದ್ವಿತೀಯ ಪಿ.ಯು.ಸಿಯಲ್ಲಿ ಕನಿಷ್ಠ ಶೇ 50 ಅಂಕ ಗಳಿಸಿಬಿ.ಇಎಲ್‌.ಇಡಿ ಕೋರ್ಸ್‌ ಮಾಡಿದವರು ಅಥವಾ ಈ ಕೋರ್ಸ್‌ಗಳ ಅಂತಿಮ ವರ್ಷದ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ

ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ:₹ 1000

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1ರ ಅಭ್ಯರ್ಥಿಗಳಿಗೆ:₹ 500

ಅಭ್ಯರ್ಥಿಗಳಿಗೆ ಸೂಚನೆಗಳು

* ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2019 ಕ್ಕೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ದಿನಾಂಕ25/02/2020ರ ಒಳಗಾಗಿ ಇಲಾಖಾ ವೆಬ್‍ಸೈಟ್ www.schooleducation.kar.nic.in ಮೂಲಕ ಅರ್ಜಿ ಸಲ್ಲಿಸುವುದು.

* ಅಭ್ಯರ್ಥಿಗಳು ಆನ್‍ಲೈನ್ ಅರ್ಜಿಯನ್ನು ಪೂರ್ಣ ವಿವರಗಳೊಂದಿಗೆ ಭರ್ತಿ ಮಾಡಿ, ಸ್ಕ್ಯಾನ್
ಮಾಡಲಾದ ತಮ್ಮ ಭಾವಚಿತ್ರ ಹಾಗೂ ಸಹಿಯನ್ನು ಜೆ.ಪಿ.ಇ.ಜಿ. (J.P.E.G. Format)
ನಮೂನೆಯಲ್ಲಿ ಅಪ್‍ಲೋಡ್ ಮಾಡುವುದು.

* ಆನ್‍ಲೈನ್ ಅರ್ಜಿಯಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಪೂರ್ಣವಾಗಿ ಭರ್ತಿ ಮಾಡಿದ
ನಂತರ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಹಾಗೂ ಪೂರ್ಣವಿವರಗಳನ್ನೊಳಗೊಂಡ
ಅರ್ಜಿಯ ಕಂಪ್ಯೂಟರ್ ಜನರೇಟೆಡ್ ಪ್ರತಿಯ Print out ಅನ್ನು ಪಡೆದುಕೊಳ್ಳುವುದು.

ಆನ್‍ಲೈನ್ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮ

1. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಇಲಾಖಾ ವೆಬ್‍ಸೈಟ್ www.schooleducation.kar.in ನಲ್ಲಿ ನೀಡಲಾಗಿರುವ ಸೂಚನೆಗಳನ್ನು ಓದಿ, ಅರ್ಥೈಸಿ ಕೊಳ್ಳುವುದು.

2.‘Registration’ ಮತ್ತು‘Login’ ನೊಂದಿಗೆ ಆನ್‍ಲೈನ್ ಅರ್ಜಿಯನ್ನು ಪೂರ್ಣ ವಿವರಗಳೊಂದಿಗೆ ಭರ್ತಿ ಮಾಡುವುದು.

3. ಸ್ಕಾನ್ ಮಾಡಿದ ಅಭ್ಯರ್ಥಿಯ ಭಾವಚಿತ್ರ (50KB ಕ್ಕಿಂತಲೂ ಕಡಿಮೆ) ಹಾಗೂ ಸಹಿಯನ್ನು
(40KB ಕ್ಕಿಂತಲೂ ಕಡಿಮೆ) ಅಪ್‍ಲೋಡ್ ಮಾಡುವುದು.

4. ಪರೀಕ್ಷಾ ಶುಲ್ಕವನ್ನುInternet Banking / Debit Card/Credit Card ಗಳ ಮೂಲಕ ಮಾತ್ರ
ಪಾವತಿ ಮಾಡಬಹುದು.

5. ಅಭ್ಯರ್ಥಿಗಳು ಒಮ್ಮೆ ಪಾವತಿಸಿರುವ ಪರೀಕ್ಷಾ ಶುಲ್ಕವನ್ನು ಯಾವುದೇ ಸಂದರ್ಭದಲ್ಲಿಯೂ
ಮರು ಪಾವತಿ ಮಾಡುವುದಿಲ್ಲ ಅಥವಾ ಮುಂದಿನ ಪರೀಕ್ಷೆಗಳಿಗೆ ಹೊಂದಾಣಿಕೆ ಮಾಡಲಾಗುವುದಿಲ್ಲ.

6. ಅಭ್ಯರ್ಥಿಗಳು ಡೌನ್‍ಲೋಡ್ ಮಾಡಲಾದ ತಮ್ಮ ಅನ್‍ಲೈನ್ ಅರ್ಜಿಯನ್ನು ಮುಂದಿನ ದಿನಗಳಲ್ಲಿ ಯಾವುದೇ ಕಚೇರಿಸಂಬಂಧಿತ ಆಡಳಿತ ಸಂಪರ್ಕಕ್ಕಾಗಿ ತಮ್ಮ ಬಳಿ ಕಡ್ಡಾಯವಾಗಿ ಇರಿಸಿಕೊಳ್ಳುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರುವರಿ 25, 2020

ಪರೀಕ್ಷೆ ನಡೆಯಲಿರುವ ದಿನ: ಮಾರ್ಚ್‌ 03, 2020

ಅಧಿಸೂಚನೆ:https://bit.ly/2voqftz

ವೆಬ್‍ಸೈಟ್:www.schooleducation.kar.nic.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT