ಮಂಗಳವಾರ, ಮೇ 18, 2021
23 °C

ಶಿಕ್ಷಕರ ವರ್ಗಾವಣೆ: ಟಿಡಿಎಸ್‌ ಭರ್ತಿಗೆ 25ರವರೆಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಾಫ್ಟ್‌ವೇರ್‌ ಸಮಸ್ಯೆ ದೊಡ್ಡ ವಿಷಯವಾಗಿದ್ದು, ಶಿಕ್ಷಕರ ಸೇವಾ ಮಾಹಿತಿ (ಟಿಡಿಎಸ್‌) ಭರ್ತಿ ಮಾಡುವುದಕ್ಕೆ ಜೂನ್‌ 25ರವರೆಗೆ ಅವಕಾಶ ನೀಡಲಾಗಿದೆ.

ಅರ್ಜಿಗಳ ಪರಿಶೀಲನೆ, ತಿದ್ದುಪಡಿಯಂತಹ ಪ್ರಕ್ರಿಯೆಗಳೂ ಜತೆಜತೆಯಾಗಿಯೇ ನಡೆಯುತ್ತಿದ್ದು, ಸಾಧ್ಯವಾದಷ್ಟು ಬೇಗ ಪ್ರಕ್ರಿಯೆ ಕೊನೆಗೊಳ್ಳಬೇಕೆಂಬುದು ಇಲಾಖೆ ಉದ್ದೇಶ. ತೊಂದರೆ ಆಗದಿರಲಿ ಎಂಬ ಕಾರಣಕ್ಕೆ ಟಿಡಿಎಸ್‌ ಸಲ್ಲಿಕೆಗೆ ಕೊನೆ ದಿನ ವಿಸ್ತರಿಸಲಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು