ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯೋಗದಿಂದ 49 ಕೆ.ಜಿ ಚಿನ್ನ ವಶ

Last Updated 4 ಮೇ 2018, 20:26 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ಆಯೋಗದ ಸ್ಟಾಟಿಕ್ ಸರ್ವೆಲೆನ್ಸ್‌ ತಂಡಗಳು ರಾಜ್ಯದ ವಿವಿಧೆಡೆ ಈವರೆಗೆ ₹ 39.46 ಕೋಟಿ ನಗದು ಮತ್ತು ₹ 15.26 ಕೋಟಿ ಮೌಲ್ಯದ ಚಿನ್ನವನ್ನು ವಶಕ್ಕೆ ತೆಗೆದುಕೊಂಡಿದೆ.

ವಿಧಾನಸಭಾ ಚುನಾವಣೆ ಕಾರಣ ವಿವಿಧ ಜಿಲ್ಲೆಗಳಲ್ಲಿ ಮತ್ತು ಗಡಿ ಭಾಗಗಳಲ್ಲಿ ಚುನಾವಣಾ ಆಯೋಗ ಹದ್ದಿನ ಕಣ್ಣಿರಿಸಿದೆ. ಚೆಕ್‌ಪೋಸ್ಟ್‌ಗಳಲ್ಲಿ, ಅನುಮಾನ ಬಂದ ಸ್ಥಳಗಳಲ್ಲಿ ದಾಳಿ ನಡೆಸಿ ನಗದು ಮತ್ತು ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದೆ.

ಸ್ಟಾಟಿಕ್‌ ಸರ್ವೆಲೆನ್ಸ್‌ ತಂಡಗಳು 99 ಅಲ್ಯುಮಿನಿಯಂ ಬಾರ್‌ಗಳು,  ₹ 39,46,67,167 ನಗದು, ₹15,26,80,000 ಮೌಲ್ಯದ 49 ಕೆ.ಜಿ 552 ಗ್ರಾಂ ಚಿನ್ನ, ₹ 15, 97,200 ಮೌಲ್ಯದ ಬೆಳ್ಳಿ, 600 ಕೆ.ಜಿ ತೂಕದ 268 ತಾಮ್ರದ ಬಿಂದಿಗೆಗಳು, ₹ 2,08, 40,343 ಮೌಲ್ಯದ ಮದ್ಯ ಮತ್ತು ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಚುನಾವಣಾ ಆಯೋಗ ವಶಪಡಿಸಿಕೊಂಡಿರುವ ಬಹುಪಾಲು ನಗದು, ಚಿನ್ನ ಮತ್ತು ಇತರ ವಸ್ತುಗಳು ಚುನಾವಣೆಗೆ ಸಂಬಂಧಿಸಿದೇ ಆಗಿವೆ ಎಂದು ಮುಖ್ಯಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT