ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಯನಕ್ಕೆ, ಉದ್ಯಮಕ್ಕೆ ಟೂಲ್ ಮತ್ತು ಡೈ ಡಿಪ್ಲೊಮಾ

Last Updated 3 ಜುಲೈ 2018, 14:31 IST
ಅಕ್ಷರ ಗಾತ್ರ

ಎಸ್‌ಎಸ್‌ಎಲ್‌ಸಿ ನಂತರ ಕೈಗೊಳ್ಳುವ ವೃತ್ತಿಶಿಕ್ಷಣದಿಂದ ಮುಂದೆ ಹೆಚ್ಚಿನ ವ್ಯಾಸಂಗಕ್ಕೆ ಅನುಕೂಲಕರವಾಗಿ, ನೌಕರಿಗೂ ನೆರವಾಗಿ ಮತ್ತು ಸ್ವಂತ ಉದ್ಯೋಗಕ್ಕೂ ಆಶ್ರಯವಾಗುವ ಟೂಲ್ ಮತ್ತು ಡೈ ಡಿಪ್ಲೊಮಾ ಕೋರ್ಸ್‌ ಅನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು.

ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಇದಾಗಿದ್ದು, ಅತ್ಯಂತ ಆಸಕ್ತಿದಾಯಕ ಕುಸುರಿ ಕೆಲಸವಾಗಿದೆ. ಯಂತ್ರಗಳನ್ನು ಬಳಸಿ, ಯಂತ್ರಗಳಿಗಾಗಿ ಅಥವಾ ಇನ್ಯಾವುದೇ ಉಪಕರಣಗಳಿಗೆ ಸೂಕ್ಷ್ಮ ಸಾಧನಗಳನ್ನು ಸಿದ್ಧಪಡಿಸುವ ಅತ್ಯಂತ ಆಸಕ್ತಿದಾಯಕ ಕೋರ್ಸ್‌ ಇದು. ಇದಕ್ಕೆ ಇಂಥದ್ದೇ ವಿಭಾಗ ಎಂಬ ಗಡಿರೇಖೆಗಳಿಲ್ಲ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್‌, ಆಟೊಮೊಬೈಲ್ ಹೀಗೆ ಎಲ್ಲಾ ಎಂಜಿನಿಯರಿಂಗ್ ವಿಭಾಗಕ್ಕೂ ಬೇಕಾಗುವ ಸಲಕರಣೆ ಹಾಗೂ ಉಪಕರಣಗಳನ್ನು ಸಿದ್ಧಪಡಿಸುವ ಕೋರ್ಸ್‌ ಇದಾಗಿದೆ.

ಪುಟ್ಟ ಸ್ಕ್ರೂನಿಂದ ಹಿಡಿದು, ಬಾಲ್‌ಬೇರಿಂಗ್‌, ಪ್ಲಾಸ್ಟಿಕ್‌ ಬುಷ್‌ ಇತ್ಯಾದಿಗಳು ಸಿದ್ಧಪಡಿಸಲು ಬೇಕಿರುವುದು ಇದೇ ಕೋರ್ಸ್‌. ಮೆಕ್ಯಾನಿಕಲ್ ವಿಭಾಗಕ್ಕೆ ಸೇರುವ ಈ ಕೋರ್ಸ್‌ನ ಸಹಾಯದಿಂದ ಸ್ವಂತ ಉದ್ಯಮ ತೆರೆಯುವವರಿಗೆ ಹೆಚ್ಚು ಅನುಕೂಲವಾಗಲಿದೆ. ಗೃಹೋಪಯೋಗಿ ಬಳಕೆಯ ಬಹಳಷ್ಟು ವಸ್ತುಗಳನ್ನು ಟೂಲ್ ಮತ್ತು ಡೈ ಮೂಲಕವೇ ಮಾಡಬಹುದು.

ಕೋರ್ಸ್‌ ಕುರಿತು ಮಾಹಿತಿ ನೀಡಿದ ಸ್ಕೈಟೆಕ್ ತಾಂತ್ರಿಕ ತರಬೇತಿ ಪ್ರತಿಷ್ಠಾನದ ಸಿ.ಬಿ.ಯೆಲಿಗಾರ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಆಸ್ಟಿನ್‌ ಕೊರಿಯಾ, ‘ಕ್ರಿಯಾತ್ಮಕವಾಗಿ ಕೆಲಸ ಮಾಡಲಿಚ್ಛಿಸುವವರು ಟೂಲ್ ಮತ್ತು ಡೈ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಪಾಠ ಹಾಗೂ ಪ್ರವಚನಕ್ಕಿಂಥಲೂ ಹೆಚ್ಚಾಗಿ ಪ್ರಯೋಗಾಲಯದಲ್ಲಿ ಯಂತ್ರಗಳ ಸಹಾಯದಿಂದ ಹಲವಾರು ಅತ್ಯುಪಯುಕ್ತ ವಸ್ತುಗಳನ್ನು ಸಿದ್ಧಪಡಿಸಬಹುದು’ ಎಂದು ವಿವರಿಸಿದರು.

‘ಮೂರು ವರ್ಷದ ಈ ಕೋರ್ಸ್‌ ಪೂರ್ಣಗೊಳಿಸಿದವರಿಗೆ ಹಲವಾರು ಕಂಪೆನಿಗಳಲ್ಲಿ ಉದ್ಯೋಗ ಅವಕಾಶ ಸಿಗಲಿದೆ. ಇಲ್ಲವೇ ತಮ್ಮ ಕೋರ್ಸ್‌ನಲ್ಲೇ ಹೆಚ್ಚಿನ ವ್ಯಾಸಂಗ ಕೈಗೊಳ್ಳುವವರು ಬಿ.ಇ., ಎಂ.ಟೆಕ್‌ ಕೋರ್ಸ್‌ಗೆ ದಾಖಲಾಗಬಹುದು. ಇಲ್ಲವೇ ನಮ್ಮದೇ ಆದ ಕೈಗಾರಿಕೆಗಳನ್ನೂ ಆರಂಭಿಸಬಹುದು. ಮಾರುಕಟ್ಟೆ ಪರಿಚಯವಿದ್ದು, ಉದ್ಯಮ ಆರಂಭಿಸುವವರಿಗೆ ಟೂಲ್ ಮತ್ತು ಡೈ ಕೋರ್ಸ್ ಹೆಚ್ಚು ಅನುಕೂಲಕರ’ ಎಂದು ತಿಳಿಸಿದರು.

‘ಟೂಲ್ ಮತ್ತು ಡೈ ಕೋರ್ಸ್‌ಗೆ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು. ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಪ್ರವೇಶ ಪರೀಕ್ಷೆಯಲ್ಲಿ ಶೇ 35ರಷ್ಟು ಸೀಟುಗಳು ಸಿ.ಬಿ.ಎಲಿಗಾರ್ ಪಾಲಿಟೆಕ್ನಿಕ್‌ನಲ್ಲಿ ಲಭ್ಯ. ಒಟ್ಟು 60 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶವಿದೆ. ಪ್ರವೇಶ ಪರೀಕ್ಷೆಯಲ್ಲಿ ಗಣಿತ, ವಿಜ್ಞಾನ, ಇಂಗ್ಲಿಷ್, ಆಪ್ಟಿಟ್ಯೂಡ್ ಪ್ರಶ್ನೆಗಳು ಇರುತ್ತವೆ. ಇದರಲ್ಲಿ ಹೆಚ್ಚಿನ ಸ್ಕೋರ್ ಮಾಡಬೇಕು’ ಎಂದರು.

‘ಸರ್ಕಾರದ ಮೀಸಲಾತಿ ಹಾಗೂ ಹಲವಾರು ಶಿಷ್ಯ ವೇತನ ಸೌಕರ್ಯ ಲಭ್ಯವಿದೆ. ಇಂಥ ಕೋರ್ಸ್ ಈ ಭಾಗದಲ್ಲಿ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಮಾನ್ಯತೆ ಪಡೆದ ಕಾಲೇಜು ಸಿ.ಬಿ.ಯಲಿಗಾರ್ ಮಾತ್ರ. ಹೀಗಾಗಿ ಇಲ್ಲಿ ಸುಸ್ಸಜಿತ ವಿದ್ಯಾರ್ಥಿ ನಿಲಯ, ಕ್ಯಾಂಟೀನ್‌, ಗ್ರಂಥಾಲಯ ಇತ್ಯಾದಿ ಸೌಕರ್ಯಗಳು ಇವೆ. ಶೈಕ್ಷಣಿಕ ಸಾಲ ಕೂಡಾ ಬ್ಯಾಂಕ್‌ಗಳಿಂದ ಸಿಗಲಿದೆ. ಶಿಕ್ಷಣದಲ್ಲೂ ಕೇವಲ ಪಾಠ ಪ್ರವಚನ ಅಲ್ಲದೆ, ಬೆಳಿಗ್ಗೆ 8ರಿಂದ ಯೋಗ ಮತ್ತು ಹಲವು ಕ್ರೀಡೆಗಳನ್ನೂ ಕಲಿಸಲಾಗುತ್ತಿದೆ’ ಎಂದು ಆಸ್ಟಿನ್ ತಿಳಿಸಿದರು.

‘ಇಲ್ಲಿನ ಕಲಿತ ವಿದ್ಯಾರ್ಥಿಗಳಿಗೆ ಸ್ಕೈಟೆಕ್ ಕಂಪೆನಿಯಲ್ಲಿ ಆರಂಭಿಕ ಕೈಗಾರಿಕಾ ಅನುಭವ ಸಿಗಲಿದೆ. ಜತೆಗೆ ಕಾಲೇಜಿನೊಂದಿಗೆ ಉತ್ತಮ ಸಂಬಂಧ ಹೊಂದಿರುವ ಹಲವಾರು ಸ್ಥಳೀಯ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡುವ ಅವಕಾಶವೂ ಸಿಗಲಿದೆ. ಮೂರು ವರ್ಷದ ಕೋರ್ಸ್ ಮುಗಿದ ನಂತರ ನಾಲ್ಕನೇ ವರ್ಷ ಇಂಪ್ಲಾಂಟ್ ತರಬೇತಿಗೂ ಸೇರಬಹುದು. ಒಂದು ವರ್ಷದ ಈ ಅವಧಿಯಲ್ಲಿ ಅನುಭವದ ಜತೆಗೆ ಮಾಸಿಕ ₹10ರಿಂದ 15 ಸಾವಿರ ಆರ್ಥಿಕ ಸಹಾಯವೂ ಸಿಗಲಿದೆ’ ಎಂದರು.

‘ಈ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಗೋವಾ, ಬೆಂಗಳೂರು, ನಾಸಿಕ್ ಮುಂತಾದ ಕಡೆದ ಉದ್ಯೋಗ ಪಡೆದಿದ್ದಾರೆ. ಈ ಕೋರ್ಸ್‌ಗೆ ಸರ್ಕಾರ ₹17400 ಶುಲ್ಕ ವಿಧಿಸಿದೆ. ಜತೆಗೆ ಕಾಲೇಜಿನಲ್ಲಿ ಕಾರ್ಖಾನೆಗಳಲ್ಲಿ ಬಳಸುತ್ತಿದ್ದ ನೈಜ ಯಂತ್ರಗಳನ್ನೇ ಪ್ರಯೋಗಾಲಯಗಳಲ್ಲಿ ಇಡಲಾಗಿದೆ. ಸಿಇಟಿ ಮೂಲಕ ಸೇರ ಬಯಸುವವರು ಕಾಲೇಜಿನ ಕೋಡ್‌ 600 ಮೂಲಕ ಕಾಲೇಜಿನ ಮಾಹಿತಿ ಪಡೆಯಬಹುದು’ ಎಂದು ಆಸ್ಟಿನ್ ಹೇಳಿದರು.

ಮಾಹಿತಿಗೆ– 9243214625/ 26

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT