ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವಸಂಸ್ಥೆ’ಗೆ ಗೀತೆ ಇದೆಯೇ?

Last Updated 23 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

‘ವಿಶ್ವಸಂಸ್ಥೆ’ ಎಂದರೇನು ನಿಮಗೆ ಗೊತ್ತೇ? ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಮಾಡಿ ಜನರ ಜೀವನವನ್ನು ಉತ್ತಮ
ಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಜಾಗತಿಕ ಮಟ್ಟದ ಸಂಸ್ಥೆ ಇದು. ಈ ಸಂಸ್ಥೆಯಲ್ಲಿ 193 ಸದಸ್ಯ ರಾಷ್ಟ್ರಗಳಿವೆ.

1945ರಲ್ಲಿ ವಿಶ್ವಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ಇದರ ಮುಖ್ಯ ಕಚೇರಿ ಇದೆ. ಪ್ರತಿ ರಾಷ್ಟ್ರಕ್ಕೂ ಒಂದು ‘ರಾಷ್ಟ್ರಗೀತೆ’ ಇರುತ್ತದೆ. ವಿಶ್ವಸಂಸ್ಥೆಗೆ ಅಂಥ ಯಾವುದೇ ಗೀತೆ ಇಲ್ಲ. ಆದರೆ ವಿಶ್ವಸಂಸ್ಥೆಯ ಬಗ್ಗೆ ಅನೇಕ ಗೀತೆಗಳನ್ನು ರಚಿಸಲಾಗಿದೆ. ಇಂಥ ಕೆಲವು ಗೀತೆಗಳನ್ನು ಶ್ರೇಷ್ಠ ಗಾಯಕರು ಹಾಡಿದ್ದೂ ಇದೆ. ವಿಶ್ವಸಂಸ್ಥೆಯ ಬೆಳ್ಳಿ ಹಬ್ಬದ ಅಂಗವಾಗಿ 1971ರ ಅಕ್ಟೋಬರ್‌ 24ರಂದು ಗಾಯಕ ಪಾಬ್ಲೋ ನೇತೃತ್ವದ ತಂಡ ವಿಶ್ವಸಂಸ್ಥೆಯನ್ನು ಕುರಿತ ಒಂದು ಹಾಡನ್ನು ಪ್ರಸ್ತುತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT