ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಗೇಮ್‌ ಪ್ಲಾನರ್‌: ಆಸಕ್ತಿ ಮುಖ್ಯ

Last Updated 26 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಆನ್‌ಲೈನ್ಹಾಗೂ ಆ್ಯಪ್‌ಗಳ ಮೂಲಕ ವಿಡಿಯೊ ಗೇಮ್‌ ಆಡುವುದುಹೆಚ್ಚು ಜನಪ್ರಿಯವಾಗಿದೆ. ಮಕ್ಕಳು, ಯುವಕರು ಎಲ್ಲರೂ ವಿಡಿಯೊ ಗೇಮ್ ಆಡುವುದರಲ್ಲಿಯೇ ಮುಳುಗಿರುತ್ತಾರೆ. ವಿವಿಧ ಗೇಮ್‌ಗಳನ್ನು ಆಡುವುದು ಅವರ ದಿನನಿತ್ಯದ ಅಭ್ಯಾಸವಾಗಿರುತ್ತದೆ. ಇನ್ನೂ ಕೆಲವರು ಯಾವ ಗೇಮ್ ಚೆನ್ನಾಗಿದೆ, ಹೇಗೆ ಆಡಬೇಕು ಎಂಬ ವಿವರಗಳನ್ನು ಇತರರಿಗೆ ಹೇಳುತ್ತಾರೆ. ಅಂತಹ ಆಸಕ್ತಿ ಇರುವವರು ಗೇಮ್ ಪ್ಲಾನರ್‌ ಆಗಬಹುದು. ಹೊಸದಾಗಿ ತಯಾರಾಗುವ ವಿಡಿಯೊ ಗೇಮ್‌ಗಳನ್ನು ಆಡಿ ಪರೀಕ್ಷಿಸಿ ಆ ಗೇಮ್‌ಗಳ ಬಗ್ಗೆ ಪ್ರತಿಕ್ರಿಯೆನೀಡಿ ಹಣ ಪಡೆಯಬಹುದು.

ವಿಡಿಯೊ ಗೇಮ್ ಪರೀಕ್ಷಿಸುವ ಮುನ್ನ ನೀವು ತಪ್ಪುಗಳನ್ನು ಹಾಗೂ ಗೇಮ್‌ನ ಪರೀಕ್ಷಕನಾಗಿ ವಿಡಿಯೊ ಗೇಮ್ ಆಡಬಾರದು. ಒಬ್ಬ ಸಾಮಾನ್ಯ ವಿಡಿಯೊ ಗೇಮ್ ಆಡುವವನಂತೆ ಆಡಬೇಕು. ಹಾಗೆ ಆಡುವುದರಿಂದ ಆ ಗೇಮ್ ಹೇಗೆ ಆಡುವವರನ್ನು ಹಿಡಿದಿಡುತ್ತದೆ ಮತ್ತು ಹೇಗೆ ಆಕರ್ಷಿಸುತ್ತದೆ, ಯಾವ ರೀತಿ ಸವಾಲು ನೀಡುತ್ತದೆ ಎಂಬುದು ತಿಳಿಯುತ್ತದೆ. ಜತೆಗೆ ಗೇಮ್‌ನ ಕೊರತೆಗಳು ಕೂಡ ನಿಮ್ಮ ಗಮನಕ್ಕೆ ಬರುತ್ತವೆ. ಗೇಮ್‌ನ ಗುಣಮಟ್ಟ ಕೂಡ ತಿಳಿಯುತ್ತದೆ. ಇವುಗಳ ಜತೆಗೆ ಗೇಮ್‌ಗಳನ್ನು ಹೇಗೆ ಮುಂದುವರಿಸಬೇಕು, ಏನನ್ನು ಬದಲಾಯಿಸಬೇಕು ಎಂಬುದನ್ನು ಅರ್ಥೈಸಿಕೊಳ್ಳಬಹದು.

ಅರ್ಹತೆ

ವಿಡಿಯೊ ಗೇಮ್‌ ಪರೀಕ್ಷಕರಾಗಲು ಪದವಿ ಪಡೆಯಲೇಬೇಕು ಎಂಬ ನಿಯಮವಿಲ್ಲ. ಗೇಮ್‌ಗಳಿಗೆ ಸಂಬಂಧಿಸಿದ ಕೌಶಲಗಳಲ್ಲಿ ಪರಿಣತಿ ಪಡೆದಿದ್ದರೆ ಸಾಕು. ಹೆಚ್ಚಾಗಿ ಗೇಮ್‌ಗಳ ಬಗ್ಗೆ ತಿಳಿಯಲು, ತಂತ್ರಜ್ಞಾನ ಬಳಕೆಯ ಜತೆಗೆ ಗೇಮ್‌ಗಳ ಆರಂಭಿಕ ಕಲಿಕೆಗೆ ಪ್ರತ್ಯೇಕವಾದ ತರಬೇತಿ ಕೇಂದ್ರಗಳು ಹಾಗೂ ಪದವಿಗಳಿವೆ. ಇವುಗಳ ಮೂಲಕ ಕಲಿತು ವೃತ್ತಿ ಮುಂದುವರೆಸುವುದು ಉತ್ತಮ. ಇದರಲ್ಲಿ ಮುಖ್ಯವಾಗಿ ಆಟದ ವಿನ್ಯಾಸ, ಸಾಫ್ಟ್‌ವೇರ್ ಅಭಿವೃದ್ಧಿ, ಸಾಫ್ಟ್‌ವೇರ್ ಎಂಜಿನಿಯರಿಂಗ್, ಕಂಪ್ಯೂಟರ್ ಪ್ರೋಗ್ರಾಮಿಂಗ್, ಗ್ರಾಫಿಕ್ಸ್‌ ಗುಣಮಟ್ಟ ಹಾಗೂ ಸಾಫ್ಟ್‌ವೇರ್ ಪರೀಕ್ಷಿಸುವ ತಂತ್ರಗಳ ಹಾಗೂ ಗೇಮ್‌ಗಳಿಗೆ ಸಂಬಂಧಿಸಿದವುಗಳ ಬಗ್ಗೆ ಹೆಚ್ಚು ಪರಿಣತಿ ಪಡೆದಿರಬೇಕು.

ಗೇಮ್‌ನಲ್ಲಿರುವ ದೋಷಗಳನ್ನು ಹುಡುಕುವ ಹಾಗೂ ಅದರ ಗುಣಮಟ್ಟ ಪರೀಕ್ಷಿಸುವ ಕೆಲಸ ಬಹಳ ಮುಖ್ಯ. ಗೇಮ್‌ನ ಒಂದು ಮುಂದುವರಿದ ಆಟದ ಭಾಗದ ಮೂಲಕ ಯಾವ ರೀತಿ ಮುಂದುವರೆಯಬೇಕು ಎಂಬುದರ ಮೇಲೆ ಗೇಮ್‌ಗಳನ್ನು ಡೆವಲಪ್‌ ಮಾಡಬಹುದು ಅಥವಾ ನೀವು ಪರಿಣತಿ ಪಡೆದಿದ್ದರೆ ಹೊಸ ಹೊಸ ಗೇಮ್‌ಗಳನ್ನು ತಯಾರಿಸಬಹುದು. ಗೇಮ್ ಕ್ರಿಯೇಟರ್, ಗೇಮ್ ಪರೀಕ್ಷಕ ಅಥವಾ ಗೇಮ್ ಡೆವಲಪ್ ಮಾಡುವ ವೃತ್ತಿಗಳನ್ನು ಮಾಡಬಹುದು. ನಿಮ್ಮ ಆಸಕ್ತಿ ಯಾವುದರಲ್ಲಿ ಹೆಚ್ಚಿರುತ್ತದೆಯೊ ಅದರಲ್ಲಿ ಮುಂದುವರೆಯಬಹುದು ಅಥವಾ ನಿಮ್ಮ ಕೌಶಲ ಹೆಚ್ಚಿದ್ದರೆ ಎಲ್ಲವನ್ನೂ ನಿರ್ವಹಿಸಬಹುದು.

ಕೌಶಲಗಳು

  • ಸೃಜನಶೀಲರಾಗಿರಬೇಕು
  • ಸೂಕ್ಷ್ಮವಾಗಿ ಗಮನಿಸುವ ಕೌಶಲ
  • ಸಂವಹನ
  • ಬರವಣಿಗೆ
  • ತಂತ್ರಜ್ಞಾನ ಬಳಕೆ
  • ದೋಷ ಹುಡುಕುವ ಜಾಣ್ಮೆ ಇರಬೇಕು
  • ಸಾಫ್ಟ್‌ವೇರ್‌ಗಳ ಬಳಕೆ

ಗೇಮ್‌ ಪರೀಕ್ಷಕನ ವೇತನವು ಹಲವಾರು ಅಂಶಗಳ ಮೇಲೆ ಅವಲಂಬನೆಯಾಗಿರುತ್ತದೆ. ನೀವು ವೈಯಕ್ತಿಕವಾಗಿ ಕೆಲಸ ಮಾಡುತ್ತಿದ್ದರೆ ಗಂಟೆಗೆ ಇಂತಿಷ್ಟು ಅಥವಾ ಕಂಪನಿಯಲ್ಲಿದ್ದರೆ ಅನುಭವದ ಮೇಲೆ.. ಹೀಗೆ ನಿಮ್ಮ ಕೆಲಸಕ್ಕೆ ತಕ್ಕಂತೆ ವೇತನ ದೊರೆಯುತ್ತದೆ. ಹೊಸ ಗೇಮ್‌ಗಳನ್ನು ತಯಾರಿಸುವುದರಿಂದ ಹೆಚ್ಚು ಸಂಭಾವನೆ ಪಡೆಯಬಹುದು.

ಗೇಮ್‌ ಪರೀಕ್ಷಕರಾಗಲು ನೀವು ಬೇರೆ ಬೇರೆ ಗೇಮ್‌ಗಳನ್ನು ತಯಾರಿಸುವ ಕೇಂದ್ರಗಳಿಗೆ ಹಾಗೂ ಸಂಸ್ಥೆಗಳಿಗೆ ಭೇಟಿ ನೀಡಬೇಕು. ಬೇರೆ ರಾಜ್ಯ ಮತ್ತು ದೇಶಗಳಿಗೂ ಹೋಗುವುದು ಅನಿವಾರ್ಯ ಕೂಡ. ನೀವು ಒಂದೇ ಸ್ಟುಡಿಯೊದಲ್ಲಿ ಕೆಲಸ ಮಾಡುವುದು ಕೂಡ ನಿಮ್ಮ ವೃತ್ತಿ ಬೆಳವಣಿಗೆಗೆ ಸೂಕ್ತವಲ್ಲ. ಹೊಸ ತಂತ್ರಜ್ಞಾನಗಳ ಬಗ್ಗೆ ತಿಳಿದಷ್ಟೂ ಉನ್ನತ ಸ್ಥಾನಕ್ಕೆ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT