ಖಗೋಳ ವಿಜ್ಞಾನ ಕಾರ್ಯಾಗಾರ

7

ಖಗೋಳ ವಿಜ್ಞಾನ ಕಾರ್ಯಾಗಾರ

Published:
Updated:
Deccan Herald

ಜವಾಹರ ಲಾಲ್‌ ನೆಹರು ತಾರಾಲಯ ಖಗೋಳ ವಿಜ್ಞಾನ ಕುರಿತು 10 ದಿನಗಳ ಪರಿಚಯಾತ್ಮಕ ಕಾರ್ಯಾಗಾರ ಆಯೋಜಿಸಿದೆ. ಇದೇ ಶನಿವಾರದಿಂದ ಆರಂಭವಾಗಲಿರುವ ಕಾರ್ಯಾಗಾರ ನವೆಂಬರ್‌ 4ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ನಡೆಯಲಿದೆ.

ಈಗಾಗಲೇ ಸಾಕಷ್ಟು ಜನಮೆಚ್ಚುಗೆಗೆ ಪಾತ್ರವಾಗಿದ್ದ ‘ಪ್ರಾಯೋಗಿಕ ಖಗೋಳ ವಿಜ್ಞಾನ’ ಕಾರ್ಯಾಗಾರ ಸರಣಿಯ ಪರಿಷ್ಕೃತ ಆವೃತಿ ಇದಾಗಿದ್ದು, ಖಗೋಳ ವಿಜ್ಞಾನದ ಮೂಲಭೂತ ಪರಿಕಲ್ಪನೆಗಳ ಸಮಗ್ರ ಚಿತ್ರಣ ಒದಗಿಸುವ ಧ್ಯೇಯ ಹೊಂದಿದೆ. ರಾತ್ರಿಯ ಆಕಾಶದ ವೀಕ್ಷಣೆ, ಖಗೋಳೀಯ ನಿರ್ದೇಶಾಂಕಗಳು, ನಮ್ಮ ಸೌರವ್ಯೂಹದ ಕಾಯಗಳು, ಇತರ ಖಗೋಳ ಕಾಯಗಳು ಮತ್ತು ಅವುಗಳ ಚಲನೆ, ಆಕಾಶದ ನಕ್ಷೆಗಳು ಸೇರಿದಂತೆ ವಿವಿಧ ವಿಚಾರಗಳು ಕಾರ್ಯಾಗಾರದಲ್ಲಿ ಚರ್ಚೆಯಾಗಲಿವೆ.

ಖಗೋಳ ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಐದು ದಶಕಕ್ಕೂ ಹೆಚ್ಚು ಕಾಲದಿಂದ ತೊಡಗಿಸಿಕೊಂಡಿರುವ ಹವ್ಯಾಸಿ ಖಗೋಳಶಾಶ್ತ್ರಜ್ಞ
ಬಿ.ಎಸ್‌. ಚಂದ್ರಶೇಖರ್‌ ರಾವ್‌ ಅವರು ಈ ಕಾರ್ಯಾಗಾರ ನಡೆಸಿಕೊಡುವರು. 

ಕಾರ್ಯಾಗಾರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಮೇಲ್ಪಟ್ಟವರು ಭಾಗವಹಿಸಲು ಅರ್ಹರು. ಸ್ಥಳ: ಜವಾಹರ ಲಾಲ್‌ ನೆಹರು ತಾರಾಲಯ, ಟಿ. ಚೌಡಯ್ಯ ರಸ್ತೆ, ಹೈಗ್ರೌಂಡ್ಸ್‌.

ಮಾಹಿತಿಗೆ: 080–2237 9725/ 2226 6084.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !