ಹೆಣ್ಣೂರು ರಸ್ತೆ ನಿಂತಿದ್ದ ಲಾರಿಗಳ ತೆರವು

ಭಾನುವಾರ, ಮಾರ್ಚ್ 24, 2019
34 °C

ಹೆಣ್ಣೂರು ರಸ್ತೆ ನಿಂತಿದ್ದ ಲಾರಿಗಳ ತೆರವು

Published:
Updated:
Prajavani

ಹೆಣ್ಣೂರು ವೃತ್ತದ ರಿಂಗ್‌ ರಸ್ತೆಯ ಮೇಲುಸೇತುವೆ ಕೆಳಭಾಗದ ರಸ್ತೆಯಲ್ಲಿ ಏಕವಾಗಿ ನಿಲ್ಲಿಸಲಾಗಿದ್ದ ಮರಳು ಮತ್ತು ಜಲ್ಲಿಕಲ್ಲು ತುಂಬಿದ್ದ ಲಾರಿಗಳನ್ನು ಸಂಚಾರ ಪೊಲೀಸರು ಮಂಗಳವಾರ ತೆರವುಗೊಳಿಸಿದ್ದಾರೆ.

ಬೆಳಿಗ್ಗೆಯಿಂದ ರಾತ್ರಿಯವರೆಗೆ ದಿನದ 24 ಗಂಟೆಯೂ ಈ ಜಾಗದಲ್ಲಿ ಲಾರಿಗಳು ನಿಂತುಕೊಳ್ಳುತ್ತಿದ್ದವು. ಇಲ್ಲಿಯೇ ಮರಳು, ಜಲ್ಲಿಕಲ್ಲು ವ್ಯಾಪಾರ ನಡೆಯುತ್ತಿತ್ತು. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಧಕ್ಕೆಯಾಗುತ್ತಿತ್ತು. ಇತರ ವಾಹನ ಸವಾರರಿಗೆ ಮತ್ತು ಸ್ಥಳೀಯರಿಗೆ ಕಿರಿ ಕಿರಿಯಾಗುತ್ತಿತ್ತು.

ಈ ಕುರಿತು ‘ಮೆಟ್ರೊ’ ಪುರವಣಿ ಮಾರ್ಚ್‌ 11ರಂದು ‘ಇದೇನು ಲಾರಿಗಳ ನಿಲ್ದಾಣವಾ?’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿರುವ ಬಾಣಸವಾಡಿ ಸಂಚಾರ ವಲಯದ ಪೊಲೀಸರು ಮೇಲುಸೇತುವೆ ಕೆಳಗೆ ಸರತಿಯಲ್ಲಿ ನಿಲ್ಲಿಸಿದ್ದ ಲಾರಿಗಳನ್ನು ಅಲ್ಲಿಂದ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !