ಗುರುವಾರ , ಡಿಸೆಂಬರ್ 5, 2019
19 °C
ಗಿಜಾ ಬಸ್‌ ಮೇಲೆ ಉಗ್ರರ ದಾಳಿ

ಈಜಿಪ್ಟ್‌ ಪೊಲೀಸರಿಂದ 40 ಭಯೋತ್ಪಾದಕರ ಹತ್ಯೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕೈರೊ: ‌ಈಜಿಪ್ಟ್‌ ಪೊಲೀಸರು ನಗರದ ಎರಡು ಕಡೆ ಶನಿವಾರ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 40 ಮಂದಿ ಭಯೋತ್ಪಾದಕರನ್ನು ಹತ್ಯೆಗೈದಿದ್ದಾರೆ.

ಶುಕ್ರವಾರ ಗಿಜಾ ಪಿರಮಿಡ್‌ನಲ್ಲಿ ರಸ್ತೆ ಬದಿಯಲ್ಲಿ ಬಾಂಬ್‌ ಸ್ಫೋಟಗೊಂಡು ವಿಯೆಟ್ನಾಂನ ಮೂವರು ಪ್ರವಾಸಿಗರು ಮತ್ತು ಗೈಡ್‌ ಒಬ್ಬರು ಸಾವನ್ನಪ್ಪಿದ್ದರು. ಈ ದಾಳಿ ಹಿಂದೆ ಇದೇ ಭಯೋತ್ಪಾದಕರ ಕೈವಾಡವಿತ್ತು ಎಂದು ಆಂತರಿಕ ಭದ್ರತಾ ಸಚಿವಾಲಯ ತಿಳಿಸಿದೆ.

‘ಗಿಜಾ ಪ್ರಾಂತ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 30 ಮಂದಿ ಹತರಾಗಿದ್ದು, ಉತ್ತರ ಸಿನಾಯ್‌ನಲ್ಲಿ ನಡೆದ 10 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ. ದೇಶದ ಪ್ರಮುಖ ಪ್ರವಾಸಿಸ್ಥಳ, ಚರ್ಚ್‌ಗಳ ಮೇಲೆ ಸರಣಿ ಬಾಂಬ್‌ ಸ್ಫೋಟ ನಡೆಸಲು ಈ ಭಯೋತ್ಪಾದಕರು ಸಂಚು ರೂಪಿಸಿದ್ದ ಬಗ್ಗೆ ಖಚಿತ ಮಾಹಿತಿ ದೊರಕಿದ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆಸಲಾಯಿತು’ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

 ಘಟನಾ ಸ್ಥಳದಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಬಾಂಬ್‌ ತಯಾರಿಕಾ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು