ಎಳನೀರು ಮಾರಾಟದ ಮೊಬೈಲ್ ವಾಹನಕ್ಕೆ ಚಾಲನೆ

ಬುಧವಾರ, ಜೂನ್ 26, 2019
25 °C
ಕಲ್ಪಾಮೃತ ಬಾಹುಬಲಿ ತೆಂಗು ಬೆಳೆಗಾರರ ಸಂಘ

ಎಳನೀರು ಮಾರಾಟದ ಮೊಬೈಲ್ ವಾಹನಕ್ಕೆ ಚಾಲನೆ

Published:
Updated:
Prajavani

ಶ್ರವಣಬೆಳಗೊಳ: ತಾಜಾ ಎಳನೀರು ಮಾರಾಟ ಮಾಡುವ ಕಲ್ಪಾಮೃತ ಮೊಬೈಲ್‌ ವಾಹನಕ್ಕೆ, ಇಲ್ಲಿನ ಜೈನ ಮಠದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಭಾನುವಾರ ಚಾಲನೆ ನೀಡಿದರು.

ಗ್ರಾಮದ ಜೈನ ಮಠದ ಬಸದಿ ಮುಂಭಾಗದಲ್ಲಿ ಕಲ್ಪಾಮೃತ ಬಾಹುಬಲಿ ತೆಂಗು ಬೆಳೆಗಾರರ ಸಂಘ ಆಯೋಜಿಸಿದ್ದ ಮೊಬೈಲ್‌ ವಾಹನ ಚಾಲನೆಯ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, 'ಬಹುಪಯೋಗಿ ತಾಜಾ ಎಳನೀರು ಸೇವನೆ ಆರೋಗ್ಯಕ್ಕೆ ಉತ್ತಮ' ಎಂದರು.

ಕಲ್ಪಾಮೃತ ಬಾಹುಬಲಿ ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ, ಸಾವಯವ ಕೃಷಿಕ ಬೆಕ್ಕದ ಬಿ.ರಾಘವೇಂದ್ರ ಮಾತನಾಡಿ ‘ಎಳನೀರನ್ನು ನೇರವಾಗಿ ರೈತರಿಂದ ಖರೀದಿಸಿ ಮಾರಾಟ ಮಾಡುವುದರಿಂದ, ರೈತರಿಗೆ ಹೆಚ್ಚಿನ ಲಾಭವಾಗುತ್ತದೆ. ಮಧ್ಯವರ್ತಿಗಳ ಹಾವಳಿ ತಪ್ಪಿದಂತಾಗಿದ್ದು, ಗ್ರಾಹಕರಿಗೂ ತಾಜಾ ಎಳನೀರನ್ನು ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಅನುಕೂಲ ಕಲ್ಪಸಲಾಗಿದೆ’ ಎಂದು ತಿಳಿಸಿದರು.

‘ಸ್ವದೇಶಿತನ ಉಳಿಯಬೇಕು. ತೆಂಗಿನ ಇತರೆ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ನೇರವಾಗಿ ರೈತರಿಗೆ ಹೆಚ್ಚಿನ ಉಪಯೋಗವಾಗುತ್ತದೆ. ರಾಜ್ಯದಾದ್ಯಂತ ಮೊಬೈಲ್‌ ವಾಹನ ವಿಸ್ತರಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಕಲ್ಪಾಮೃತದ ನಿರ್ದೇಶಕ ರಾಮಕೃಷ್ಣೇಗೌಡ ಮಾತನಾಡಿ ’ಮೊಬೈಲ್ ವಾಹನದಲ್ಲಿ ಪ್ರತ್ಯೇಕ ಎಳನೀರು ಮತ್ತು ನೀರನ್ನು ಹಾಕದೇ ಎಳನೀರನ್ನು ಉಪಯೋಗಿಸಿ, ತಾಜಾ ಹಣ್ಣುಗಳ ತಂಪು ಪಾನೀಯಗಳನ್ನು ತಯಾರಿಸಿ ಮಾರಾಟ ಮಾಡುವ ಸುಸಜ್ಜಿತ ವ್ಯವಸ್ಥೆ ಅಳವಡಿಸಲಾಗಿದೆ. ಈ ಮೊಬೈಲ್‌ ವಾಹನಕ್ಕೆ ಸೌರಶಕ್ತಿ ಅಳವಡಿಸಿದ್ದು, ಒಟ್ಟು ವೆಚ್ಚ ₹ 7.5 ಲಕ್ಷ ತಗುಲಿದೆ’ ಎಂದು ತಿಳಿಸಿದರು.

ಯಡಿಯೂರು ಗುರುಶ್ರೀ ಫಾರ್ಮರ್‌ ಉತ್ಪಾದನಾ ಕಂಪನಿಯ ಸಿಇಒ ಹುಲಿವಾನ್‌ ಗಂಗಾಧರ್‌, ಕಲ್ಪಾಮೃತ ಪದಾಧಿಕಾರಿಗಳಾದ ಜಗದೀಶ್‌, ದೇವರಾಜ್‌, ಪ್ರದೀಪ್‌ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !