ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಗೆ ಶಂಕರಮೂರ್ತಿ ಆಯ್ಕೆ

7

ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಗೆ ಶಂಕರಮೂರ್ತಿ ಆಯ್ಕೆ

Published:
Updated:
Prajavani

ಚಾಮರಾಜನಗರ: ಜಿಲ್ಲೆಯಿಂದ ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಗರದ ಎಪಿಎಂಸಿ ಅಧ್ಯಕ್ಷ ಬಿ.ಎಸ್.ಶಂಕರಮೂರ್ತಿ ಅವರು ನಿರ್ದೇಶಕರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ನಗರದ ಎಪಿಎಂಸಿ ಆವರಣದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಜಿಲ್ಲೆಯ ಮೂರು ಎಪಿಎಂಸಿಯ ಅಧ್ಯಕ್ಷರಲ್ಲಿ ಒಬ್ಬರು ಆಯ್ಕೆಯಾಗಬೇಕಿತ್ತು. ಹೀಗಾಗಿ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಗರದ ಎಪಿಎಂಸಿ ಅಧ್ಯಕ್ಷ ಶಂಕರಮೂರ್ತಿ, ಗುಂಡ್ಲುಪೇಟೆ ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ ಮಾತ್ರವೇ ನಾಮಪತ್ರ ಸಲ್ಲಿಸಿದ್ದರು.

ಕೊಳ್ಳೇಗಾಲ ಎಪಿಎಂಸಿ ಅಧ್ಯಕ್ಷ ಗೋವಿಂದರಾಜು ಶಂಕರಮೂರ್ತಿ ಬೆಂಬಲಿಸಿ ಮತ ಚಲಾಯಿಸಿದ್ದರಿಂದ ಶಂಕರಮೂರ್ತಿ ಅವರು 2 ಮತಗಳನ್ನು ಪಡೆದು ಕೃಷಿ ಮಾರುಕಟ್ಟೆ ಮಂಡಳಿಗೆ ಆಯ್ಕೆಯಾದರು (ಪ್ರಭುಸ್ವಾಮಿ ತಮ್ಮ ಒಂದು ಮತ ಹಾಕಿಕೊಂಡರು) ಎಂದು ಚುನಾವಣಾಧಿಕಾರಿಯಾಗಿದ್ದ ಎಪಿಎಂಸಿ ಕಾರ್ಯದರ್ಶಿ ಪ್ರಕಾಶ್ ಘೋಷಿಸಿದರು.

ಕೊಳ್ಳೇಗಾಲ ಎಪಿಎಂಸಿ ಅಧ್ಯಕ್ಷ ಗೋವಿಂದರಾಜು, ಎಪಿಎಂಸಿ ಉಪಾಧ್ಯಕ್ಷ ನಂಜುಂಡಸ್ವಾಮಿ, ನಿರ್ದೇಶಕರಾದ ಕೊಳ್ಳೇಗಾಲದ ಎಂ. ಸೋಮಣ್ಣ, ಜಯರಾಜ್, ಚಂದ್ರಶೇಖರ್, ನಾಗೇಂದ್ರ, ಮುಖಂಡರಾದ ಕೆಂಪನಪುರ ಶಿವಶಂಕರ್, ಪ್ರಕಾಶ್, ಚನ್ನಪ್ಪನಪುರ ಪ್ರಸಾದ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !