ಅಭ್ಯರ್ಥಿಗಳ ಚುನಾವಣಾ ವೆಚ್ಚ ವಿವರ ಪರಿಶೀಲನೆ

ಬುಧವಾರ, ಏಪ್ರಿಲ್ 24, 2019
33 °C

ಅಭ್ಯರ್ಥಿಗಳ ಚುನಾವಣಾ ವೆಚ್ಚ ವಿವರ ಪರಿಶೀಲನೆ

Published:
Updated:
Prajavani

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಮೊದಲನೇ ಹಂತದ ವೆಚ್ಚ ಪರಿಶೀಲನೆ ಕಾರ್ಯ ಬುಧವಾರ ಹಾಗೂ ಗುರುವಾರ ನಡೆಯಿತು.

ನಗರದ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಚುನಾವಣಾ ವೆಚ್ಚ ವೀಕ್ಷಕ ರಾಜೆನ್ ಎಂ.ವಸವಡ ಅವರ ನೇತೃತ್ವದಲ್ಲಿ ಅಭ್ಯರ್ಥಿಗಳು ಮಾಡಲಾಗಿರುವ ವೆಚ್ಚ ಕುರಿತ ಲೆಕ್ಕ ಪರಿವೀಕ್ಷಣೆ ಕಾರ್ಯ ನಡೆಯಿತು.

ಬುಧವಾರ ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಪರಿಶೀಲಿಸಲಾಯಿತು. ಅಭ್ಯರ್ಥಿಗಳು ವೆಚ್ಚವನ್ನು ಭರಿಸಿರುವ ಬಗ್ಗೆ ಪೂರ್ಣ ಮಾಹಿತಿ ನೀಡಲು ತಿಳಿಸಲಾಯಿತು. ಗುರುವಾರ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಚುನಾವಣೆ ಸಂಬಂಧ ಮಾಡಲಾಗಿರುವ ವೆಚ್ಚಗಳನ್ನು ಪರಿಶೀಲಿಸಲಾಯಿತು.

ಚುನಾವಣಾ ವೆಚ್ಚ ವೀಕ್ಷಕ ರಾಜೆನ್ ವಸವಡ ಮಾತನಾಡಿ, ‘ಚುನಾವಣೆಗೆ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳ ಎರಡನೇ ಹಂತದ ವೆಚ್ಚ ವಿವರ ಪರಿಶೀಲನೆ ಕಾರ್ಯವನ್ನು ಏಪ್ರಿಲ್ 10ರಂದು ಮಾಡಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ವೆಚ್ಚ ನೋಡಲ್ ಅಧಿಕಾರಿ ಮಿಲನ್ ಎಸ್. ಮರಗೋಡು, ಸಹಾಯಕ ವೆಚ್ಚ ನೋಡಲ್ ಅಧಿಕಾರಿಗಳಾದ ಎಚ್.ಎಸ್. ಗಂಗಾಧರ್, ಸಿ. ಬಸವರಾಜು, ಜಿಲ್ಲಾ ಲೆಕ್ಕ ತಂಡದ ಅಧೀಕ್ಷಕರಾದ ಮಹದೇವು, ಸಿದ್ದರಾಜು, ಲೋಕಸಭಾ ಕ್ಷೇತ್ರವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರದ ಸಹಾಯಕ ವೆಚ್ಚ ವೀಕ್ಷಕರು, ಲೆಕ್ಕ ತಂಡದ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !