ಎಲೆಕ್ಷನ್ ಟೈಂ ಶಾಪ!

ಗುರುವಾರ , ಮೇ 23, 2019
28 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಎಲೆಕ್ಷನ್ ಟೈಂ ಶಾಪ!

Published:
Updated:
Prajavani

ದೇವಲೋಕದಲ್ಲಿ ಋಷಿಮುನಿಗಳು, ಪವಾಡ ಪುರುಷರ ಮೀಟಿಂಗ್ ನಡೆಯುತ್ತಿತ್ತು. ಒಂದು ಆಸನವನ್ನು ಖಾಲಿ ಬಿಡಲಾಗಿತ್ತು.

‘ಇಲ್ಲಿ ಯಾರು ಬರುತ್ತಾರೆ’ ಕೇಳಿದರು ವಿಶ್ವಾಮಿತ್ರ ಮುನಿ.

‘ಭೂಲೋಕದಿಂದ ಸಾಧ್ವಿ ಅಪ್ರಜ್ಞಾ ಬರುತ್ತಾರೆ’ ಹೇಳಿದರು ಗೌತಮ ಋಷಿ.

‘ನಮ್ಮಂಥ ಮಹಾತಪಸ್ವಿಗಳ ಮಧ್ಯೆ ಆ ನರಮನುಷ್ಯರಿಗೇಕೆ ಸ್ಥಾನ’ ಕೋಪದಿಂದಲೇ ಪ್ರಶ್ನಿಸಿದರು ದೂರ್ವಾಸರು.

‘ಅಯ್ಯೋ! ಈ ರೀತಿ ಅಪದ್ಧ ನುಡಿಯಬೇಡಿ ಮುನಿವರ್ಯ. ಅವರು ಶಾಪಪ್ರವೀಣೆ. ನಿಮ್ಮ ವಿರುದ್ಧವೂ ಕೆಂಡ ಕಾರಿದರೆ ಕಷ್ಟ, ಕಷ್ಟ’ ನಡುಗುತ್ತಲೇ ಹೇಳಿದರು ಗೌತಮರು. ‘ಹೌದೇ, ಅವರು ಅಷ್ಟೊಂದು ಪ್ರಭಾವಿಯೇ?’ ಗಡ್ಡ ನೀವಿಕೊಳ್ಳುತ್ತ ಕೇಳಿದರು ದೂರ್ವಾಸರು.

‘ಹೌದು, ದೇಶಕ್ಕಾಗಿ ಹೋರಾಡಿದವರು ಅವರ ಶಾಪದಿಂದ ಸಾವಿಗೀಡಾಗಿದ್ದಾರೆ’.

‘ಅಬ್ಬಾ! ಸರಿ, ಏಕೆ ಅವರು ಬರುವುದು ತಡವಾಗುತ್ತಿದೆ’ ಕುತೂಹಲದಿಂದ ಕೇಳಿದರು ಮುನಿ.

‘ಅಪ್ರಜ್ಞಾರನ್ನು ಎಲೆಕ್ಷನ್‌ಗೆ ನಿಲ್ಲಿಸಿದ್ದಾರೆ. ಅವರು ಗೆಲ್ಲುವುದು ಖಚಿತ ಎಂದುಕೊಂಡು ಅಣು ಬಾಂಬ್‌ಗಳನ್ನು ದೀಪಾವಳಿ ಪಟಾಕಿಯಂತೆ ಹಾರಿಸಲು ಅವರ ನಾಯಕ ನಮೋ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ’ ಹೇಳಿದರು ಗೌತಮರು.

‘ಶಾಂತ ಭರತಖಂಡವು ಆಟಂ ಬಾಂಬ್ ಬಗ್ಗೆ ಇಷ್ಟು ಬಹಿರಂಗವಾಗಿ ಮಾತನಾಡುವಷ್ಟು ತೀವ್ರಗಾಮಿಯಾಯಿತೇ?’

‘ಎಲೆಕ್ಷನ್ ಟೈಂ ಮುನಿವರ್ಯ. ದೇಶಭಕ್ತಿ, ದೈವಶಕ್ತಿ ಎಲ್ಲ ನೆನಪಾಗುತ್ತವೆ’ ಹೇಳಿದರು ವಿಶ್ವಾಮಿತ್ರ.

‘ನೀವೆಲ್ಲಿ ಹೊರಟಿರಿ ಮುನಿಗಳೇ’ ದೂರ್ವಾಸರನ್ನು ಕೇಳಿದರು ದೇವತೆಗಳು.

‘ಭೋಪಾಲ್‌ನಲ್ಲಿ ನನ್ನ ವೋಟಿದೆ. ಮತ ಹಾಕದ ಕಾರಣ ಶಾಪ ಕೊಟ್ಟರೆ ಗತಿಯೇನು?’ ಪುಷ್ಪಕ ವಿಮಾನದಲ್ಲಿ ಕೆಳಗಿಳಿದು ಬಂದರು ದೂರ್ವಾಸರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !