ಚೆನ್ನೈ: ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ಅಂಗಳದಲ್ಲೇ ಸುಳಿದಾಡುತ್ತಿದ್ದ 'ಅಧಿಕಾರ' ಇದೀಗ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮನೆಯಂಗಳ ಪ್ರವೇಶಿಸುವ ಸುಳಿವು ಲಭ್ಯವಾಗಿದೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಮತ ಎಣಿಕೆ ಪ್ರಗತಿಯಲ್ಲಿದ್ದು ಟಿವಿಕೆ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಚುನಾವಣೋತ್ತರ ಸಮೀಕ್ಷೆಗಳು, ವಿಜಯ್ ಅವರ ಪಕ್ಷ 'ಕಿಂಗ್ ಮೇಕರ್' ಆಗಬಹುದು ಎಂದು ಭವಿಷ್ಯ ನುಡಿದಿದ್ದವು. ಆದರೆ, ಆ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿರುವ ವಿಜಯ್, ತಾವೇ 'ಕಿಂಗ್' ಆಗಲು ಹೊರಟಿದ್ದಾರೆ. ಇದರೊಂದಿಗೆ, ಎಂ.ಜಿ. ರಾಮಚಂದ್ರನ್ ಮತ್ತು ಜೆ.ಜಯಲಲಿತಾ ನಂತರ ಇದೀಗ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಅವಕಾಶ ವಿಜಯ್ ಅವರದ್ದಾಗುವ ಸಾಧ್ಯತೆ ಇದೆ.

ಟಿವಿಕೆ ಕೈ ಹಿಡಿದ ಅಂಶಗಳೇನು?

* ಸರಿಯಾದ ಸಮಯದಲ್ಲಿ ರಾಜಕೀಯ ಪ್ರವೇಶ
ಡಿಎಂಕೆ ಬಿಟ್ಟರೆ ಎಐಡಿಎಂಕೆ; ಎಐಡಿಎಂಕೆ ಬಿಟ್ಟರೆ ಡಿಎಂಕೆ – ಬಹುತೇಕ ಆರು ದಶಕಗಳಿಂದಲೂ ತಮಿಳುನಾಡಿನಲ್ಲಿ ಅಧಿಕಾರ ಹಂಚಿಕೆಯಾಗುತ್ತಾ ಬಂದಿರುವುದು ಇದೇ ರೀತಿ.

ಈ ಬಾರಿ ಡಿಎಂಕೆಗೆ ಆಡಳಿತ ವಿರೋಧಿ ಅಲೆ ಎದುರಾಗಿದೆ. ಆದರೆ, ಅದರ ಲಾಭ ಪಡೆಯುವಲ್ಲಿ ಎಐಎಡಿಎಂಕೆ ವಿಫಲವಾಗಿದೆ. ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿಧನದ ನಂತರ ಉಂಟಾದ ಆಂತರಿಕ ಬಿಕ್ಕಟ್ಟಿನಿಂದ ಎಐಎಡಿಎಂಕೆ ಬಲ ಕುಸಿದಿರುವುದು ಅದಕ್ಕೆ ಕಾರಣ.

ಇಂತಹ ಹೊತ್ತಿನಲ್ಲೇ ವಿಜಯ್ ರಾಜಕೀಯ ಪ್ರವೇಶಿಸಿ, ಟಿವಿಕೆ ಸ್ಥಾಪಿಸಿದ್ದು ಕೆಲಸ ಮಾಡಿದೆ. ಪರ್ಯಾಯ ನಾಯಕತ್ವ, ಸರ್ಕಾರವನ್ನು ಎದುರು ನೋಡುತ್ತಿದ್ದ ರಾಜ್ಯದ ಜನತೆ ಕೈ ಹಿಡಿದಿದ್ದಾರೆ.

* ರೈತರ ಅಸಮಾಧಾನ
ತಮಿಳುನಾಡಿನ 'ಅನ್ನದ ಬಟ್ಟಲು' ಎನ್ನಲಾಗುವ ಕಾವೇರಿ ನದಿ ಮುಖಜಭೂಮಿ ಅಥವಾ ಕೇಂದ್ರ ಭಾಗದಲ್ಲಿ ರೈತರ ಅಸಮಾಧಾನ ಬಲಗೊಂಡಿತ್ತು. ಇದು, ಡಿಎಂಕೆಗೆ ಹಿನ್ನಡೆಯಾಗಿ ಪರಿಣಮಿಸಿದೆ. 2021ರ ವಿಧಾನಸಭಾ ಚುನಾವಣೆ ವೇಳೆ ಈ ಭಾಗದ 46 ಸ್ಥಾನಗಳ ಪೈಕಿ 40ರಲ್ಲಿ ಜಯ ಕಂಡಿದ್ದ ಡಿಎಂಕೆ, ಈ ಬಾರಿ ನೀರಸ ಪ್ರದರ್ಶನ ತೋರಿದೆ.

‘ಸರ್ಕಾರ ನಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ನಮ್ಮ ಬಗ್ಗೆ ಕಾಳಜಿ ತೋರುತ್ತಿಲ್ಲ. ಪ್ರವಾಹದಿಂದ ಆಗಿರುವ ಬೆಳೆ ಹಾನಿಗೆ ನೀಡುತ್ತಿರುವ ಪರಿಹಾರ ಯಾವುದಕ್ಕೂ ಸಾಲುತ್ತಿಲ್ಲ. ರಸಗೊಬ್ಬರ ಕೊರತೆ ಹಾಗೆಯೇ ಇದೆ’ ಎಂದು ಈ ಭಾಗದ ರೈತರು ಚುನಾವಣಾ ಪೂರ್ವದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಲಾಭವನ್ನು ಟಿವಿಕೆ ಮಾಡಿಕೊಂಡಿದೆ.
.ತಮಿಳುನಾಡು ಫಲಿತಾಂಶ: ಮತ್ತೊಬ್ಬ ಎಂಜಿಆರ್ ಆಗುವರೇ ವಿಜಯ್?.Tamil Nadu Election: ಡಿಎಂಕೆ ಭದ್ರಕೋಟೆಗೆ ನುಗ್ಗುವ ಧೈರ್ಯ ಮಾಡಿದ್ದೇಕೆ ವಿಜಯ್?.
* ಎಐಎಡಿಎಂಕೆ–ಬಿಜೆಪಿ ಮೈತ್ರಿ
ರಾಜ್ಯದಲ್ಲಿ ಡಿಎಂಕೆ ಆಡಳಿತದ ವಿರುದ್ಧ ವ್ಯಕ್ತವಾಗಿದ್ದ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಎಐಎಡಿಎಂಕೆ ವಿಫಲವಾಗಿದೆ. ಇದೇ ಕಾರಣಕ್ಕೆ ಜನರು, ಎಐಎಡಿಎಂಕೆಯತ್ತ ಒಲವು ಹೊಂದಿದ್ದರೂ, ಆ ಪಕ್ಷ ಬಿಜೆಪಿಯೊಂದಿಗೆ ಕೈ ಜೋಡಿಸಿರುವುದು ಅಸಮಾಧಾನ ಮೂಡಿಸಿತ್ತು. ಅದೇ ಕಾರಣಕ್ಕೆ ದ್ರಾವಿಡ ನೆಲೆಯ ರಾಜ್ಯದ ಜನರ ಚಿತ್ತ ಮೂರನೇ ಪಕ್ಷದತ್ತ ಹೊರಳಿದೆ. ಅದು ಫಲಿತಾಂಶದಲ್ಲಿ ಪ್ರತಿಫಲಿಸಿದೆ.

* 'ಇಮೇಜ್' ಬಳಸಿಕೊಂಡ ವಿಜಯ್!
ಸಿನಿರಂಗದಲ್ಲಿ ʼದಳಪತಿʼ (ತಲಪತಿ) ಎಂದೇ ಖ್ಯಾತರಾಗಿರುವ 51ರ ವಿಜಯ್, ತಮ್ಮ ಅಪಾರ ಅಭಿಮಾನಿಗಳ ಬೆಂʼಬಲʼದೊಂದಿಗೆ 2024ರಲ್ಲೇ ಟಿವಿಕೆ ಸ್ಥಾಪಿಸಿದರು. ಬೇರೆ ಪಕ್ಷಗಳೊಂದಿಗೆ ಕೈ ಜೋಡಿಸುವ ಸಾಧ್ಯತೆಗಳಿವೆ ಎಂಬ ಊಹಾಪೋಹಗಳ ನಡುವೆ, ಏಕಾಂಗಿಯಾಗಿ 'ಮೊದಲ' ಪರೀಕ್ಷೆ ಎದುರಿಸಿದರು.

ಸಿನಿಮಾಗಳಲ್ಲಿ ಬಡವರಿಗಾಗಿ ಹೋರಾಡುವ, ಭ್ರಷ್ಟರನ್ನು ಹಣಿಯುವ, ನ್ಯಾಯಕ್ಕಾಗಿ ಕೆಲಸ ಮಾಡುವ ನಾಯಕನ ಪಾತ್ರಗಳಲ್ಲಿ ತೆರೆಯ ಮೇಲೆ ಮಿಂಚಿರುವ ವಿಜಯ್ಗೆ, ಯುವಕರ ಕಣ್ಮಣಿ, ಜನನಾಯಕನ ಇಮೇಜ್ ದೊರೆತಿತ್ತು. ಅದನ್ನು, ಚೆನ್ನಾಗಿಯೇ ಬಳಸಿಕೊಂಡಿದ್ದಾರೆ ವಿಜಯ್.

* ಮತ ತಂದುಕೊಟ್ಟ ಜನಪ್ರಿಯತೆ
2025ರ ಸೆಪ್ಟೆಂಬರ್ 27ರಂದು ಕರೂರಿನಲ್ಲಿ ನಡೆದ ಪಕ್ಷದ ಸಮಾವೇಶದ ವೇಳೆ ಕಾಲ್ತುಳಿತ ಸಂಭವಿಸಿ, 41 ಜನರು ಮೃತಪಟ್ಟಿದ್ದರು. 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದು, ರಾಜ್ಯದಲ್ಲಿ ಮಾತ್ರವಲ್ಲದೆ ರಾಷ್ಟ್ರದಾದ್ಯಂತ ಸುದ್ದಿಯಾಗಿತ್ತು.

ಅದೊಂದು ಕಡೆಯಷ್ಟೇ ಅಲ್ಲ. ವಿಜಯ್ ಎಲ್ಲೆಲ್ಲಿ ರ್ಯಾಲಿ, ಸಮಾವೇಶಗಳನ್ನು ಆಯೋಜಿಸಿದ್ದರೋ ಅಲ್ಲೆಲ್ಲಾ ಅಭೂತಪೂರ್ವ ಯಶಸ್ಸು ಸಿಕ್ಕಿತ್ತು. ಅದರಲ್ಲೂ ಮಹಿಳೆಯರು ಮತ್ತು ಯುವಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇವು, ವಿಜಯ್ ಜನಪ್ರಿಯತೆಗೆ ಸಾಕ್ಷಿಯಾಗಿದ್ದವು. ಇಷ್ಟು ಜನಪ್ರಿಯತೆಯು ಮತವಾಗಿ ಬದಲಾಗಿದೆ.

* 'ನಕಲಿ' ವಿಜಯ್ ಪ್ರಚಾರ
ಹೋದಲ್ಲೆಲ್ಲ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದ ಕಾರಣ, ಅಂದುಕೊಂಡಷ್ಟು ಬೇಗನೆ ಪ್ರಚಾರಕ್ಕೆ ನಿಗದಿಯಾಗಿದ್ದ ಸ್ಥಳಗಳನ್ನು ತಲುಪಲು ವಿಜಯ್ಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಹಲವು ಸ್ಥಳಗಳಿಗೆ ಭೇಟಿಯನ್ನೇ ವಿಜಯ್ ರದ್ದು ಮಾಡಿಕೊಂಡಿದ್ದರು.

ಹೀಗಾಗಿ, ಕುಂಬಕೋಣ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಟಿವಿಕೆ ಅಭ್ಯರ್ಥಿ ವಿಜಯ್ ಅವರ '3D' ಪ್ರತಿಕೃತಿಯನ್ನು ಪ್ರಚಾರದಲ್ಲಿ ಬಳಸಿಕೊಂಡಿದ್ದರು. ವಿಜಯ್ ಅವರನ್ನೇ ಹೋಲುವ ಈ 3ಡಿ ಹಾಲೋಗ್ರಾಮ್ ಅನ್ನು ಬಳಸಿಕೊಳ್ಳಲು ಅವರ ಪಕ್ಷದ ಹಲವರು ಮುಂದಾದರು.

ವಿಜಯ್ ಅವರನ್ನೇ ಹೋಲುತ್ತಿದ್ದ ಈ 'ನಕಲಿ' ಪ್ರತಿಕೃತಿಯು, ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
.ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ '3D ದಳಪತಿ'ಯ ಸದ್ದು! ಟಿವಿಕೆಗೆ ವರ?.ತಮಿಳುನಾಡಿನ 'ಅಕ್ಕಿ ಪಾತ್ರೆ'ಯಲ್ಲಿ ಮತ ಲೆಕ್ಕಾಚಾರ: ಡಿಎಂಕೆಗೆ ರೈತರ ಚಾಟಿ ಏಟು?.
* ಡಿಎಂಕೆಗೆ ಮುಳುವಾದ ಉದಯನಿಧಿ
ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಹಾಗೂ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು, ಸನಾತನ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ಹಲವು ಬಾರಿ ನೀಡಿದ್ದರು. ಇದು, ಜನರ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿತ್ತು ಎನ್ನಲಾಗಿದೆ.

ಉದಯನಿಧಿ ಅವರನ್ನು 2024ರ ಸೆಪ್ಟೆಂಬರ್ನಲ್ಲಿ ರಾಜ್ಯದ ಉಪಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿತ್ತು. ಇದು, ಡಿಎಂಕೆ ಹಿರಿಯ ನಾಯಕರಲ್ಲಿ ಅಸಮಾಧಾ ಉಂಟು ಮಾಡಿತ್ತು. ಇದು ಪಕ್ಷ ಸಂಘಟನೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು ಎಂದು ಹೇಳಲಾಗುತ್ತಿದೆ.

* ಸಿನಿಮಾ ನಂಟು
ಸಿನಿಮಾ ಮಂದಿ ತಮಿಳುನಾಡು ರಾಜಕೀಯದಲ್ಲಿ ಯಶಸ್ಸು ಸಾಧಿಸಿರುವುದಕ್ಕೆ ದೀರ್ಘ ಇತಿಹಾಸವಿದೆ. ಮಾಜಿ ಮುಖ್ಯಮಂತ್ರಿಗಳಾದ ಸಿ.ಎನ್. ಅಣ್ಣಾದುರೈ, ಎಂ.ಕರುಣಾನಿಧಿ, ಎಂ.ಜಿ. ರಾಮಚಂದ್ರನ್, ಜೆ.ಜಯಲಲಿತಾ ಅವರು ಸಿನಿಮಾ ಹಿನ್ನೆಲೆಯವರೇ.

ಜಯಲಲಿತಾ, ಕರುಣಾನಿಧಿ ಬಳಿಕ ಅವರ ಪಕ್ಷಗಳನ್ನು ನೇರವಾಗಿ ಸಿನಿಮಾದೊಂದಿಗೆ ನಂಟು ಹೊಂದಿಲ್ಲದವರೇ ಮುನ್ನಡೆಸುತ್ತಾ ಬಂದಿದ್ದಾರೆ. ಆ ಸಂದರ್ಭದಲ್ಲಿ ರಾಜಕೀಯಕ್ಕೆ ಧುಮುಕಲು ಆಸಕ್ತಿ ತೋರಿದ್ದ, ರಜನಿಕಾಂತ್ ನಂತರ ಹಿಂದೇಟು ಹಾಕಿದ್ದರು. ರಾಜ್ಯದಲ್ಲಿ ಪ್ರಭಾಶಾಲಿಯಾಗಲು ಕಮಲ್ ಹಾಸನ್ ಅವರ ಪಕ್ಷಕ್ಕೂ ಸಾಧ್ಯವಾಗಿರಲಿಲ್ಲ.

ಇಂತಹ ಹೊತ್ತಲ್ಲಿ ವಿಜಯ್ ರಾಜಕೀಯಕ್ಕೆ ಎಂಟ್ರಿಕೊಟ್ಟರು. ಅವರು ಪಕ್ಷ ಸ್ಥಾಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಸಿನಿಮಾ–ರಾಜಕೀಯದ ಸಂಬಂಧದ ಕುರಿತ ಚರ್ಚೆ ತಮಿಳುನಾಡಿನಾದ್ಯಂತ ಮುನ್ನೆಲೆಗೆ ಬಂದಿತ್ತು.

ಹಾಗಾಗಿಯೇ, ಎಚ್ಚೆತ್ತುಕೊಳ್ಳುವ ಪ್ರಯತ್ನ ಹಾಗೂ ಲೆಕ್ಕಾಚಾರದ ಹೆಜ್ಜೆ ಇಟ್ಟಿದ್ದ ಸ್ಟಾಲಿನ್, ತಮ್ಮ ಪುತ್ರ ನಟ, ನಿರ್ಮಾಪಕ ಉದಯನಿಧಿ ಅವರಿಗೆ ಉಪಮುಖ್ಯಮಂತ್ರಿಯನ್ನಾಗಿಸಿದ್ದರು. ಈ 'ಬಡ್ತಿ'ಯ ಮೂಲಕ ವಿಜಯ್ ಓಟಕ್ಕೆ ತಡೆಯೊಡ್ಡುವ ಪ್ರಯತ್ನ ಮಾಡಿದ್ದರು. ಆದರೆ, ಅದು ಕೆಲಸ ಮಾಡಲಿಲ್ಲ.

* ಬುದ್ಧಿವಂತ ನಡೆ
ಹಿಂದಿನ ಎಲ್ಲಾ ಜನಪ್ರಿಯ ನಾಯಕರೂ ನಮ್ಮವರೇ ಎಂದು ವಿಜಯ್ ಅವರು ತಮ್ಮ ಚುನಾವಣಾ ಭಾಷಣಗಳಲ್ಲಿ ಹೇಳಿಕೊಂಡಿದ್ದರು. ಆ ಮೂಲಕ ಕಾಮರಾಜ್, ಎಂಜಿಆರ್, ಜಯಲಲಿತಾ, ವಿಜಯಕಾಂತ್ ಬೆಂಬಲಿಗರನ್ನೂ ಸೆಳೆಯುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ.

* ಕೈ ಹಿಡಿದ ಭರವಸೆಗಳು
ಚುನಾವಣಾ ಪೂರ್ವದಲ್ಲಿ ವಿಜಯ್ ಅವರು ನೀಡಿದ್ದ ಆಶ್ವಾಸನೆಗಳು ಟಿವಿಕೆಯನ್ನು ಜಯದ ಅಲೆಯಲ್ಲಿ ತೇಲಿಸಿವೆ. ಬಡ ಹೆಣ್ಣುಮಕ್ಕಳ ವಿವಾಹಕ್ಕೆ 8 ಗ್ರಾಂ. ಬಂಗಾರ, ಶಿಕ್ಷಣಕ್ಕೆ ಆದ್ಯತೆ, ರೈತರ ಸಾಲಮನ್ನಾ, ಬೆಂಬಲ ಬೆಲೆ, ಮಹಿಳೆಯರಿಗೆ ಮಾಸಿಕ ಸಹಾಯಧನ, ಎಐ ನಗರ ನಿರ್ಮಾಣ ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿದ್ದರು. ಇವೆಲ್ಲವೂ ಫಲಿತಾಂಶದ ಮೇಲೆ ಪರಿಣಾಮ ಬೀರಿವೆ.

* ಸಿದ್ಧಾಂತಕ್ಕೆ ಸೀಮಿತವಾಗಿಲ್ಲ
ಯಾವುದೇ ನಿರ್ದಿಷ್ಟ ಸಿದ್ದಾಂತಕ್ಕೆ ಅಂಟಿಕೊಳ್ಳದೆ, ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು ವಿಜಯ್ಗೆ ಅನುಕೂಲ ಮಾಡಿಕೊಟ್ಟಿತು. ಎಲ್ಲ ಸಮುದಾಯದ ಜನರೂ ವಿಜಯ್ಗೆ ಮತಹಾಕಿದ್ದಾರೆ ಎನ್ನಲಾಗಿದೆ.
.ದಳಪತಿ ವಿಜಯ್, ಟಿವಿಕೆಯನ್ನು ಪಟ್ಟಕ್ಕೇರಿಸಲಿವೆಯೇ ಅಭಿಮಾನಿ ಸಂಘಗಳು?.ರೈತರ ಸಾಲಮನ್ನಾ ಸೇರಿ ಹಲವು ಘೋಷಣೆ ಮಾಡಿದ ಟಿವಿಕೆ ಮುಖ್ಯಸ್ಥ, ನಟ ವಿಜಯ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.