ಬೆಳಗಾವಿ: ‘ಬಾಗಲಕೋಟೆ ಹಾಗೂ ದಾವಣಗೆರೆ ಉಪ ಚುನಾವಣೆಗಳ ಫಲಿತಾಂಶವು ನಮ್ಮ ಸರ್ಕಾರದ ಕೆಲಸಕ್ಕೆ ಸಿಕ್ಕಿರುವ ಜನರ ಪ್ರಮಾಣಪತ್ರ. ಮುಂದೆಯೂ ಇದೇ ರೀತಿ ಜನಪರ ಯೋಜನೆಗಳನ್ನು ಇನ್ನಷ್ಟು ಬಲಪಡಿಸಿ, ಜನರ ವಿಶ್ವಾಸ ಉಳಿಸಿಕೊಂಡು ಸಾಗುವುದು ನಮ್ಮ ಬದ್ಧತೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ‘ರಾಜ್ಯದಲ್ಲಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಕೇವಲ ಘೋಷಣೆಗಳಲ್ಲ. ಜನರ ನಿತ್ಯದ ಬದುಕಿಗೆ ನಿಜವಾದ ಬೆಂಬಲವಾಗಿ ಪರಿಣಮಿಸಿವೆ. ಜನರ ಕಷ್ಟ, ನೋವು, ಅಗತ್ಯಗಳಿಗೆ ಸ್ಪಂದಿಸಿದ ನಮ್ಮ ಸರ್ಕಾರಕ್ಕೆ ಜನರು ಇದೀಗ ಉಪಚುನಾವಣೆ ಫಲಿತಾಂಶಗಳ ಮೂಲಕ ಸ್ಪಷ್ಟವಾದ ಮನ್ನಣೆ ನೀಡಿದ್ದಾರೆ’ ಎಂದರು.

‘ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಜನರು ನಮ್ಮ ಜನಪರ ಆಡಳಿತವನ್ನು ಸ್ವೀಕರಿಸಿರುವುದಕ್ಕೆ ಸ್ಪಷ್ಟ ಉದಾಹರಣೆ. ಇದು ಕೇವಲ ರಾಜಕೀಯ ಗೆಲುವಲ್ಲ, ಜನರ ವಿಶ್ವಾಸದ ಗೆಲುವಾಗಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಮನೆಮನೆಗೂ ತಲುಪಿ, ಮಹಿಳೆಯರು, ಯುವಕರು, ಬಡವರು, ರೈತರು ಸೇರಿದಂತೆ ಪ್ರತಿಯೊಂದು ವರ್ಗದ ಜನರಿಗೆ ಸಹಾಯವಾಗಿವೆ. ಇದೇ ಕಾರಣಕ್ಕೆ ಜನರು ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿದ್ದಾರೆ. ಬಿಜೆಪಿಯ ವಿರುದ್ಧ ಜನರು ಸ್ಪಷ್ಟ ಸಂದೇಶ ನೀಡಿದ್ದಾರೆ. ಸುಳ್ಳು ಪ್ರಚಾರ ಮತ್ತು ಜನವಿರೋಧಿ ನೀತಿಗಳಿಗೆ ಕರ್ನಾಟಕದ ಜನರು ತಕ್ಕ ಉತ್ತರ ನೀಡಿದ್ದಾರೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-21-1770726358

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.