ತಿರುವನಂತಪುರ: ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಗಮನಾರ್ಹ ಸಾಧನೆ ಮಾಡಿದೆ.

ಕೇರಳದ ಮೂರು ಕ್ಷೇತ್ರಗಳಲ್ಲಿ ಕಮಲ ಅರಳಿದೆ. ನೇಮಮ್ ಕ್ಷೇತ್ರದಲ್ಲಿ ರಾಜೀವ್ ಚಂದ್ರಶೇಖರ್, ಕಳಕೂಟ್ಟಂ ಕ್ಷೇತ್ರದಲ್ಲಿ ಬಿ.ಬಿ. ಗೋಪಕುಮಾರ್ ಮತ್ತು ಚಾಥನೂರ್ ಕ್ಷೇತ್ರದಲ್ಲಿ ವಿ. ಮುರಳೀಧರನ್ ಗೆಲುವು ಸಾಧಿಸಿದ್ದಾರೆ. ಈ ಪೈಕಿ ಎರಡು ಕಡೆಗಳಲ್ಲಿ ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.

ನೇಮಮ್ ಕ್ಷೇತ್ರದಲ್ಲಿ ತಮ್ಮ ನಿಕಟ ಸ್ಪರ್ಧಿ ವಿ.ಶಿವನ್ಕುಟ್ಟಿ ವಿರುದ್ಧ ಚಂದ್ರಶೇಖರ್ 3,500ಕ್ಕೂ ಅಧಿಕ ಮತಗಳ ಗೆಲುವು ಸಾಧಿಸಿದ್ದಾರೆ.

ಕಳಕೂಟ್ಟಂ ಕ್ಷೇತ್ರದಲ್ಲಿ ನಿಕಟ ಸ್ಪರ್ಧೆ ಏರ್ಪಟ್ಟಿತ್ತು. ಕೊನೆಯ ಸುತ್ತಿನ ವರೆಗೂ ಸಾಗಿದ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಕಡಕಂಪಳ್ಳಿ ಸುರೇಂದ್ರನ್ ವಿರುದ್ದ ಮುರಳೀಧರನ್ ಅಲ್ಪ ಮತಗಳ ಅಂತರದ ಜಯ (428 ಮತ) ಸಾಧಿಸಿದ್ದಾರೆ.

ಇನ್ನು ಚಾಥನೂರ್ ಕ್ಷೇತ್ರದಲ್ಲಿ ಗೋಪಕುಮಾರ್, ಎಲ್ಡಿಎಫ್ನ ಆರ್. ರಾಜೇಂದ್ರನ್ ಅವರನ್ನು 4,398 ಮತಗಳ ಅಂತರದಿಂದ ಸೋಲಿಸಿದ್ದಾರೆ.

2016ರಲ್ಲಿ ನೇಮಮ್ ಕ್ಷೇತ್ರದಿಂದಲೇ ಎನ್ಡಿಎದ ಒ.ರಾಜಗೋಪಾಲ್ ಐತಿಹಾಸಿಕ ಗೆಲುವು ದಾಖಲಿಸಿದ್ದರು. ಆದರೆ 2021ರಲ್ಲಿ ಯಾವುದೇ ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈಗ ನೇಮಮ್ ಕ್ಷೇತ್ರವನ್ನು ಮರಳಿ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
.Kerala Results: ಸೋಲಿನ ಭೀತಿಯಿಂದ ಸಿಎಂ ಪಾರು, ನೆಲಕಚ್ಚಿದ ಸಚಿವರು.Kerala Results: ಕೇರಳದಲ್ಲಿ ಆಡಳಿತ ವಿರೋಧಿ ಅಲೆ, UDFಗೆ ವರದಾನವಾಗಿದ್ದೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.