ಬೆಂಗಳೂರು: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದಕ್ಕೆ ಮುನ್ನುಡಿ ಹಾಡಲು ಜನರಿಗೆ ಸುವರ್ಣ ಅವಕಾಶ ಸಿಕ್ಕಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಾವಣಗೆರೆಯಲ್ಲಿ ಸಾಮಾನ್ಯ ವ್ಯಕ್ತಿಗೆ ಟಿಕೆಟ್ ನೀಡಿದ್ದೇವೆ. ಕಾಂಗ್ರೆಸ್ ಬಲಾಢ್ಯರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಎರಡೂ ಕಡೆ ವಂಶಾಡಳಿತಕ್ಕೆ ಅವಕಾಶ ನೀಡಿದೆ. ಆದ್ದರಿಂದ ಎರಡೂ ಕಡೆ ಬಿಜೆಪಿಗೆ ಗೆಲ್ಲುವ ಅವಕಾಶವಿದೆ. ಸರ್ಕಾರದ ಭ್ರಷ್ಟಾಚಾರ ಮತ್ತು ಗ್ಯಾರಂಟಿಗಳ ಅಸಮರ್ಪಕ ಜಾರಿಯಿಂದಾಗಿ ಜನವಿರೋಧಿ ಅಲೆ ಉಂಟಾಗಿದೆ. ಬಜೆಟ್ ಮಂಡನೆ ಬಳಿಕ ಎಲ್ಲದಕ್ಕೂ ತೆರಿಗೆ ಹೇರುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಯುವ ಜನರು ಉದ್ಯೋಗವಿಲ್ಲದೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಸಿದ್ದರಾಮಯ್ಯ ಈಗ ಹಿಂದುಳಿದ ನಾಯಕ ಅಲ್ಲ. ಅವರ ಬಟ್ಟೆ, ಶಾಲು, ಪೆನ್ನು ಮತ್ತು ಜೀವನ ಶೈಲಿ ಮುಂದುವರಿದವರಂತೆ ಇದೆ. ಆದರೆ, ಓಟಿಗೆ ಮಾತ್ರ ಹಿಂದುಳಿದವರುಬೇಕು. ಆದ್ದರಿಂದ ಇವರು ಹಿಂದುಳಿದ ವರ್ಗದ ಮುಂದುವರಿದ ನಾಯಕ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ಟೀಕಿಸಿದ್ದಾರೆ. ಬಾಂಬ್ ಇಡುವ ಭಯೋತ್ಪಾದಕರು ಇವರಿಗೆ ದೇವದೂತರಂತೆ ಕಾಣುತ್ತಾರೆ. ಈಗ ಎಲ್ಲ ರಾಜ್ಯಗಳಿಂದ ವಿಷದ ಹಾವುಗಳು ಮುಕ್ತವಾಗುತ್ತಿವೆ. ಇನ್ನು ಮೂರು ರಾಜ್ಯಗಳಲ್ಲಿರುವ ಹಾವುಗಳನ್ನು ಓಡಿಸಬೇಕಿದೆ. ಮಗನಿಂದ ಪ್ರೇರಣೆ ಪಡೆದ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-4-618139929

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.