ಕೊಪ್ಪ: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎಂಟು ವರ್ಷಗಳಿಂದ ಬಿಜೆಪಿಗೆ ಇದ್ದ ರಾಜಕೀಯ ವನವಾಸ ಅಂತ್ಯವಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಕೆ. ದಿನೇಶ್ ಹೊಸೂರು ತಿಳಿಸಿದರು.

ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ‘ಮೂರು ವರ್ಷದ ಹಿಂದೆ ಜೀವರಾಜ್ ಅವರಿಗೆ ಗೆಲುವಾಗಬೇಕಿತ್ತು. ಅಂದು ಕಾಂಗ್ರೆಸ್ ಕುತಂತ್ರ ಮಾಡಿ ಗೆಲುವು ತಪ್ಪಿಸಿತ್ತು. ಮೂರು ವರ್ಷಗಳ ನಿರಂತರ ಹೋರಾಟದ ಫಲವಾಗಿ ಜೀವರಾಜ್ ಗೆಲುವು ದಾಖಲಿಸಿದ್ದಾರೆ’ ಎಂದು ಹೇಳಿದರು.

ಮರು ಮತ ಎಣಿಕೆಯ ವೇಳೆ ಕಾಂಗ್ರೆಸ್ ಮುಖಂಡರು ಟ್ಯಾಂಪರಿಂಗ್ ಆಗಿದೆ ಎನ್ನುವ ಮೂಲಕ ಗೊಂದಲ ಸೃಷ್ಟಿ ಮಾಡಿದ್ದರು. ಕಾಂಗ್ರೆಸ್ ಸೋತರೆ ಇವಿಎಂ ಸರಿ ಇರಲ್ಲ, ಟ್ಯಾಂಪರಿಂಗ್ ಆಗಿರುತ್ತದೆ. ಇವರು ಗೆದ್ದರೆ ಎಲ್ಲ ಸರಿಯಾಗಿರುತ್ತದೆ ಎಂದು ಅವರು ದೂರಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪುಣ್ಯಪಾಲ್ ಮಾತನಾಡಿ, ಕಳೆದ ಚುನಾವಣೆಯ ಫಲಿತಾಂಶ ಬಂದಾಗ ಸೋಲಿನ ಬಗ್ಗೆ ನೋವಾಗಿತ್ತು. ನಮಗೆ ಸಿಗಬೇಕಿದ್ದ ಅಧಿಕಾರವನ್ನು ಕಿತ್ತುಕೊಂಡು ಅಧಿಕಾರ ಅನುಭವಿಸಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ನೀಡಿದ್ದಾರೆ. ರಾಜೇಗೌಡ ಅವರು ಜನರ ಬಳಿ ಕ್ಷಮೆ ಕೇಳಬೇಕು. ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಪುಕ್ಕಟೆ ಅಧಿಕಾರಿ ಅನುಭವಿಸಿದರು ಎಂದು ಆರೋಪಿಸಿದರು.

ಬಿಜೆಪಿ ಹಿರಿಯ ನಾಯಕ ಬಿ.ಕೆ. ಗಣೇಶ್ ರಾವ್ ಮಾತನಾಡಿ, ‘ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಸಿಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದು ಹೇಳಿದರು.

ಮಂಡಲ ಪ್ರಧಾನ ಕಾರ್ಯದರ್ಶಿ ಅರುಣ್ ಶಿವಪುರ, ಬಿಷೇಜ್ ಭಟ್, ಕಸಬಾ ಹೋಬಳಿ ಅಧ್ಯಕ್ಷ ಸಂದೇಶ್ ಶೆಟ್ಟಿ, ಹರಿಹರಪುರ ಹೋಬಳಿ ಅಧ್ಯಕ್ಷ ಶತಾನಿಕ್, ವಕ್ತಾರ ಎಚ್.ಆರ್. ಜಗದೀಶ್, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರುತಿ ರೋಹಿತ್, ಮುಖಂಡರಾದ ರೇವಂತ್ ಗೌಡ, ಉದಯ್ ಕುಮಾರ್ ಜೈನ್, ನವೀನ್ ಆಚಾರ್ಯ, ಸುರೇಶ್ ಕಣಗಲ್, ಎಚ್.ಆರ್. ರೇಖಾ, ಸುಧಾ ಮೋಹನ್ ಇದ್ದರು.

ಆವತಿ: ಬಿಜೆಪಿ ಘಟಕದಿಂದ ಸಂಭ್ರಮಾಚರಣೆ

ಆಲ್ದೂರು: ಪಂಚರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಸಾಧನೆಯನ್ನು ಸಂಭ್ರಮಿಸಿ ತಾಲ್ಲೂಕಿನ ಆವತಿ ಹೋಬಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಆವತಿ ಹೋಬಳಿ ಅಧ್ಯಕ್ಷ ಕೆರೆಮಕ್ಕಿ ಮಹೇಶ್, ಎಚ್.ಬಿ. ಮಹೇಂದ್ರ, ನಾಗೇಶ್ ಬೈಗೂರ್, ಕೆ.ಎಂ.ಶಾಂತೇಗೌಡ್ರು, ಎಚ್.ಎಂ.ಶ್ಯಾಮ್, ಗಿರೀಶ್ ಕಸಿಗೆ, ರಮೇಶ್ ಬೆಟ್ಟದ ಮಳಲಿ, ಎಚ್.ಟಿ.ಉಮೇಶ್, ಮಲ್ಲೇಶ್, ರವಿಪ್ರಸಾದ್, ಗೋಕುಲ್ ಎನ್.ಜೆ., ನಾಗೇಶ್ ಸಿರಗೂರು, ಶಶಿಧರ್, ಚೇತನ್, ಇಂದ್ರೇಶ್, ರುದ್ರೇಶ್, ರಾಜು ನರಿಗುಡ್ಡೆ, ರಮೇಶ್, ಕೃಷ್ಣೇಗೌಡ, ಸುರೇಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-126-1532881838

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.