ಶೃಂಗೇರಿ: ‘2013ರ ವಿಧಾನ ಸಭಾ ಚುನಾವಣೆಯಲ್ಲಿ ಡಿ.ಎನ್.ಜೀವರಾಜ್ ಅವರ ಅಂಚೆ ಮತವನ್ನು ಟಿ.ಡಿ.ರಾಜೇಗೌಡರ ಮತಪೆಟ್ಟಿಗೆಗೆ ಹಾಕಿ ರಾಜೇಗೌಡ ಅವರು ಶಾಸಕ ಎಂದು ಅಧಿಕಾರಿಗಳು ಘೋಷಿಸಿದರು. 2023ರ ಮೇ 13ರಂದೇ ಡಿ.ಎನ್ ಜೀವರಾಜ್ ಅವರು ಜಯಶಾಲಿಯಾಗಿದ್ದರು. ಈಗ ಮರು ಎಣಿಕೆಯಲ್ಲಿ ಈ ಸತ್ಯ ಗೋತ್ತಾಗಿದೆ’ ಎಂದು ಬಿಜೆಪಿಯ ರಾಜ್ಯ ಪರಿಶಿಷ್ಟ ಜಾತಿ ಮೋರ್ಚಾದ ವಕ್ತಾರ ಬಿ.ಶಿವಶಂಕರ್ ಹೇಳಿದರು.

ಶೃಂಗೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ‘ಜೀವರಾಜ್ ಅವರು ಸ್ಟ್ರಾಂಗ್ ರೂಂ ಒಡೆದು ಅಂಚೆ ಮತಗಳನ್ನು ತೆಗೆದು ತಿದ್ದಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಷಯ. ಪ್ರಸ್ತುತ ಆಡಳಿತ ವ್ಯವಸ್ಥೆ ಕಾಂಗ್ರೆಸ್ ಪಕ್ಷದವರದೇ ಆಗಿದ್ದರಿಂದ ಈ ರೀತಿ ಮತಗಳನ್ನು ತಿದ್ದಲು ಸಾಧ್ಯವೇ. ಸತ್ಯ ಹೊರ ಬಂದ ಕಾರಣ ಈ ರೀತಿ ಆರೋಪಿಸುತ್ತಿದ್ದಾರೆ. ಕಾಂಗ್ರೆಸ್ನವರು ಟಿ.ಡಿ ರಾಜೇಗೌಡ ಗೆದ್ದಾಗ ಸತ್ಯಮೇವ ಜಯತೇ, ಸಂವಿಧಾನ ಜಯ ಎಂದು ಹೇಳುತ್ತಾರೆ. ಆದರೆ, ಜೀವರಾಜ್ ಗೆದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ ಡಕಾಯಿತಿ ಎಂದು ಆರೋಪ ಮಾಡುತ್ತಾರೆ. ಇದು ಯಾವ ರೀತಿಯ ನ್ಯಾಯ ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡಿ ಕ್ಷೇತ್ರ ಅಭಿವೃದ್ಧಿಗೆ ಸಹಕರಿಸಿ’ ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.

ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರವಿದ್ದಾಗ ಶಾಸಕರಾಗಿದ್ದ ಟಿ.ಡಿ.ರಾಜೇಗೌಡ ಅವರು, ಜೀವರಾಜ್ ಅಭಿವೃದ್ಧಿ ಕೆಲಸ ಮಾಡಲು ಬೀಡುವುದಿಲ್ಲ ಎಂದು ಆರೋಪಿಸುತ್ತೀದ್ದರು. ಪ್ರಸ್ತುತ ಜೀವರಾಜ್ ಶಾಸಕರಾಗಿದ್ದು, ಕಾಂಗ್ರೆಸ್ ಸರ್ಕಾರವಿರುವಾಗ ರಾಜೇಗೌಡ ಅವರು ಅಭಿವೃದ್ಧಿ ಮಾಡಲು ಬೀಡುವುದಿಲ್ಲ ಎಂಬ ಆರೋಪ ಬಾರದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಬಿಜೆಪಿಯ ತಾಲ್ಲೂಕು ಎಸ್ಸಿ ಮೋರ್ಚಾದ ಕಾರ್ಯದರ್ಶಿ ರಮೇಶ್, ಮಾಜಿ ಅಧ್ಯಕ್ಷ ಕೃಷ್ಣ, ತಾಲ್ಲೂಕು ಬಿಜೆಪಿ ವಕ್ತಾರ ಅಂಗುರ್ಡಿ ದಿನೇಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-126-1878305116

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.