ಚಿಕ್ಕಮಗಳೂರು: ಹೈಕೋರ್ಟ್ ನಿರ್ದೇಶನದಂತೆ ಶನಿವಾರ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಎಣಿಕೆ ಕಾರ್ಯ ಪೂರ್ಣಗೊಳ್ಳದೆ ತಡರಾತ್ರಿವರೆಗೂ ಕಗ್ಗಂಟಾಗಿ ಉಳಿದಿತ್ತು.

2023ರ ಚುನಾವಣೆಯಲ್ಲಿ ಕಾಂಗ್ರೆಸ್ನ ಟಿ.ಡಿ.ರಾಜೇಗೌಡ 201 ಮತಗಳಿಂದ ಜಯ ಸಾಧಿಸಿದ್ದರು. 1,822 ಅಂಚೆ ಮತಗಳಲ್ಲಿ 279 ಮತಗಳು ತಿರಸ್ಕೃತಗೊಂಡಿದ್ದವು. ಇದರ ವಿರುದ್ಧ ಬಿಜೆಪಿ ಪರಾಜಿತ ಅಭ್ಯರ್ಥಿ ಡಿ.ಎನ್.ಜೀವರಾಜ್ ಹೈಕೋರ್ಟ್ ಮೊರೆ ಹೋಗಿದ್ದರು.

ಜೆಡಿಎಸ್ ಅಭ್ಯರ್ಥಿಯಾಗಿದ್ದ ಸುಧಾಕರಶೆಟ್ಟಿ ಅವರು ಮಧ್ಯಾಹ್ನ ಮತ ಎಣಿಕೆ ಕೇಂದ್ರದಿಂದ ಹೊರ ಬಂದು, ‘ತಿರಸ್ಕೃತ ಮತಗಳ ಪರಿಶೀಲನೆ ಶೇ 70ರಷ್ಟು ಮುಗಿದಿದೆ. ಯಾವುದೇ ಮತಪತ್ರ ಪುರಸ್ಕೃತವಾಗಿಲ್ಲ. ಈ ಮರು ಎಣಿಕೆಯಿಂದ ಫಲಿತಾಂಶದಲ್ಲಿ ವ್ಯತ್ಯಾಸ ಆಗುವುದಿಲ್ಲ’ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.

ಆರಂಭದ 350 ಮತಗಳ ಎಣಿಕೆಯ ವೇಳೆಗೆ ಟಿ.ಡಿ.ರಾಜೇಗೌಡ ಮತ್ತು ಡಿ.ಎನ್.ಜೀವರಾಜ್ ಇಬ್ಬರಿಗೂ ಗುರುತು ಹಾಕಿರುವ 50 ಮತ ಪತ್ರ ದೊರಕಿದವು. ‘2023ರಲ್ಲಿ ನಡೆದ ಎಣಿಕೆ ವೇಳೆ ಮಾನ್ಯವಾಗಿದ್ದ ಮತಪತ್ರಗಳಲ್ಲಿ ಈಗ ಇಬ್ಬರ ಹೆಸರಿಗೂ ಗುರುತು ಹಾಕಲಾಗಿದೆ ಎಂದರೆ ಮತಪತ್ರಗಳನ್ನು ವಿರೂಪಗೊಳಿಸಲಾಗಿದೆ. ಮತ ಎಣಿಕೆ ಮಾಡಲು ಅವಕಾಶ ನೀಡುವುದಿಲ್ಲ’ ಎಂದು ರಾಜೇಗೌಡ ಪಟ್ಟು ಹಿಡಿದರು ಎಂದು ಮೂಲಗಳು ತಿಳಿಸಿವೆ.

ರಾಜೇಗೌಡ ಅವರು ಎಣಿಕೆಗೆ ಅಡ್ಡಿಪಡಿಸು ತ್ತಿದ್ದು, ಅವರನ್ನು ಹೊರಗೆ ಕಳುಹಿಸಿ ಎಣಿಕೆ ಮಾಡಬೇಕು ಎಂದು ಬಿಜೆಪಿಯವರು ಪ್ರತಿಭಟನೆ ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-51-1900477840

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.