ದಾಂಡೇಲಿ: ದೇಶವಾಸಿಗಳು ಅತಿಹೆಚ್ಚು ಬಳಸುತ್ತಿರುವ ಆಧಾರ್, ರೇಷನ್ ಹಾಗೂ ಮತದಾರರ ಕಾರ್ಡ್ ಗಳನ್ನು ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆಯಲ್ಲಿ (ಎಸ್.ಐ.ಆರ್) ದಾಖಲೆಯಾಗಿ ಪರಿಗಣಿಸಿಲ್ಲ. ಆದ್ದರಿಂದ ಸಂಕಷ್ಟಗಳು ಆರಂಭವಾಗಿವೆ. ಜನತೆಯ ಹಕ್ಕು ರಕ್ಷಿಸಲು ಎಸ್.ಐ.ಆರ್ ರದ್ದುಪಡಿಸಲು ಆಗ್ರಹಿಸುವ ಹೋರಾಟಗಳು ರೂಪಗೊಳ್ಳಬೇಕಿದೆ ಎಂದು ಬೆಂಗಳೂರಿನ ರಾಜಕೀಯ ಚಿಂತಕ ಕೆ. ಪ್ರಕಾಶ ಹೇಳಿದರು.

ಮತದಾರರ ಪಟ್ಟಿ ಪರಿಷ್ಕರಣೆ (ಎಸ್.ಐ.ಆರ್)ಯಿಂದ ಜನರ ಮೇಲಿನ ಪರಿಣಾಮ ಕುರಿತು ಸಮಾನ ಮನಸ್ಸಿನ ಪ್ರಗತಿಪರ ಸಂಘಟನೆಗಳು ವತಿಯಿಂದ ಇತ್ತೀಚೆಗೆ ನಡೆದ ಸಂವಾದ ಸಭೆಯಲ್ಲಿ ಹೇಳಿದರು.

ಐದು ವರ್ಷಗಳ ಹಿಂದೆ ಕೇಂದ್ರ ಬಿಜೆಪಿ ನೇತೃತ್ವದ ಎನ್.ಡಿಎ ಸರ್ಕಾರವು ಸಿಎಎ ಮತ್ತು ಎನ್.ಆರ್.ಸಿ ಮೂಲಕ ಹೇರಲು ಹೊರಟಿದ್ದ ಕಾಯ್ದೆಯನ್ನು ಈಗ ಭಯದ ವಾತಾವರಣ ಸೃಷ್ಟಿಸಿ ಚುನಾವಣಾ ಆಯೋಗದ ಮೂಲಕ ಜಾರಿ ಮಾಡಲಾಗುತ್ತಿದೆ. ನ್ಯಾಯಾಂಗದಲ್ಲೇ ಅನ್ಯಾಯವಾದರೆ ಯಾರಿಗೆ ದೂರು ಕೊಡುವುದು. ಜನತೆಯ ಹಕ್ಕು ರಕ್ಷಿಸಲು ಎಸ್.ಐ.ಆರ್ ರದ್ದುಪಡಿಸಲು ಆಗ್ರಹಿಸುವ ಹೋರಾಟಗಳನ್ನು ಸಂಘಟಿಸಬೇಕು ಮತ್ತು ಮತದಾರರ ಪಟ್ಟಿಯಿಂದ ತಪ್ಪಿಹೋಗದಂತೆ ಪ್ರಾಯೋಗಿಕ ಆಯಾಮವನ್ನು ತಿಳಿಸುವ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ದಾಂಡೇಲಿಯ ರಾಜಕೀಯ ಮುಖಂಡ ಮೋಹನ ಹಲವಾಯಿ, ನ್ಯಾಯವಾದಿ ಎಸ್.ಎನ್. ದಬ್ಗಾರ, ಆಪ್ರಿನ್ ಕಿತ್ತೂರ, ರತ್ನದಿಪಾ ಎನ್.ಎಂ., ಪ್ರಮುಖರಾದ ಸತೀಶ ನಾಯ್ಕ, ರಸಜೇಸಾಬ ಕೇಸನೂರ, ಡಿ. ಸ್ಯಾಮಸನ್, ರಾಮಲಿಂಗ್ ಜಾಧವ್, ಎಸ್.ವಿ. ಸಾವಂತ, ಸಲಿಂ ಸಯ್ಯದ್ , ಪದ್ಮಾ ಕಾಳೆ ಮಾತನಾಡಿದರು.

ಹೋರಾಟಗಾರ್ತಿ ಯಮುನಾ ಗಾಂವಕರ ಮಾತನಾಡಿ ದರು. ಸಾಹಿತಿಗಳಾದ ಮುರ್ತುಜಾ ಹುಸೇನ ಆನೆಹೊಸೂರ, ಭೀಮಾಶಂಕರ ಅಜನಾಳ, ಶ್ರೀಮಂತ ಮದರಿ, ಪ್ರಮುಖರಾದ ಯಾಸ್ಮಿನ್ ಕಿತ್ತೂರ, ಅಷ್ಪಾಕ್ ಶೇಕಜ್, ಸರಸ್ವತಿ ರಜಪೂತ, ಮೌಲಾಲಿ ಮುಲ್ಲಾ, ದಿವಾಕರ ನಾಯ್ಕ, ರವಿ ಚೌಹಾಣ, ನೀಲಾ ಮಾದರ, ಇಮ್ರಾನ್ ಖಾನ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-20-1916224816

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.