ಸುಮಿತ್ ಪಾಂಡೆ

ಕುರ್ಸಿಯಂಗ್: ಪಶ್ಚಿಮ ಬಂಗಾಳದಲ್ಲಿ ಸತತ ಮೂರು ಬಾರಿ ಆಡಳಿತ ಕುರ್ಚಿ ಅಲಂಕರಿಸುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ ಬಾರಿಯೂ ಅಧಿಕಾರ ಉಳಿಸಿಕೊಳ್ಳಲು ‘ನೇರ ನಗದು ಯೋಜನೆ’ಯನ್ನೇ ಪ್ರಮುಖ ಅಸ್ತ್ರವಾಗಿ ನೆಚ್ಚಿಕೊಂಡಿದೆ.

ಹಿಮಾಲಯ ತಪ್ಪಲಿನ ದಾರ್ಜಿಲಿಂಗ್ನಲ್ಲಿ ಅನಿತ್ ಥಾಪಾ ನೇತೃತ್ವದ ಭಾರತೀಯ ಗೊರ್ಖಾ ಪ್ರಜಾತಾಂತ್ರಿಕ ಮೋರ್ಚಾಗೆ (ಬಿಜಿಪಿಎಂ) ಮಮತಾ ಬ್ಯಾನರ್ಜಿ ಮೂರು ಸ್ಥಾನಗಳನ್ನು (ದಾರ್ಜಿಲಿಂಗ್, ಕುರ್ಸಿಯಂಗ್ ಮತ್ತು ಕಾಲಿಂಪಾಂಗ್) ಬಿಟ್ಟುಕೊಟ್ಟಿದ್ದಾರೆ. ಬಿಜಿಪಿಎಂ, ಟಿಎಂಸಿಯ ಏಕೈಕ ಮಿತ್ರಪಕ್ಷವಾಗಿದೆ.

ಅನಿತ್ ಥಾಪಾ ಅವರ ಎದುರಾಳಿ ಬಿಮಲ್ ಗುರೂಂಗ್ ಅವರ ಗೊರ್ಖಾ ಜನಮುಕ್ತಿ ಮೊರ್ಚಾ (ಜಿಜೆಎಂ) ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು, ಬಿಜೆಪಿ ಚಿಹ್ನೆಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಜಿಜೆಎಂನ ಯುವ ಘಟಕದ ಮುಖಂಡ ನೊಮನ್ ರೈ ಅವರು ದಾರ್ಜಿಲಿಂಗ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.

ಗೊರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತದ (ಜಿಟಿಎ) ಮುಖ್ಯಸ್ಥರೂ ಆಗಿರುವ ಥಾಪಾ ಅವರು, ಸ್ಥಳೀಯ ವಕೀಲ, ಉದ್ಯಮಿ ಬಿಜೆಪಿ ಅಭ್ಯರ್ಥಿ ಅಮರ್ ಲಾಮಾ ಅವರ ವಿರುದ್ಧ ಕುರ್ಸಿಯಂಗ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಭಾರತದ ಹಾಕಿ ತಂಡದ ಮಾಜಿ ನಾಯಕ ಭರತ್ ಚೆಟ್ರಿ ಅವರು ಕಾಲಿಂಪೋಂಗ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಬಿಜೆಪಿ ವಿರೋಧಿ ಮತಗಳ ಏಕೈಕ ಭಂಡಾರ ತಾನು ಎಂದು ಹೇಳಿಕೊಳ್ಳುವ ಟಿಎಂಸಿ, ದಾರ್ಜಿಲಿಂಗ್ನ ಮೂರೂ ಕ್ಷೇತ್ರಗಳಲ್ಲಿ ಒಂದೇ ಒಂದು ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟುಕೊಡುವುದಿಲ್ಲ ಎಂದು ಹೇಳಿದೆ.

ಕಳೆದ ಎರಡು ಚುನಾವಣೆಗಳಲ್ಲಿ ದಾರ್ಜಿಲಿಂಗ್ ಕ್ಷೇತ್ರದಿಂದ ಸ್ಥಳೀಯ ಯುವ ಮುಖಂಡ ರಾಜು ಬಿಷ್ಟ ಗೆಲುವು ಸಾಧಿಸಿದ್ದಾರೆ.

‘ಬಿಜಿಪಿಎಂ’ ಎನ್ನುವುದು ಟಿಎಂಸಿಯ ಇನ್ನೊಂದು ಮುಖವಷ್ಟೇ, ದಾರ್ಜಿಲಿಂಗ್ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಕಣಕ್ಕಿಳಿದರೆ ನಾನು ಅವರ ವಿರುದ್ಧ ಸ್ಪರ್ಧಿಸುತ್ತೇನೆ’ ಎಂದು ಬಿಷ್ಟ ಸವಾಲೊಡ್ಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-51-1141216905

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.