ಬೆಂಗಳೂರು: ರಾಜ್ಯದಲ್ಲಿ ಎಸ್ಐಆರ್ಗೆ ಪೂರ್ವತಯಾರಿಯಾಗಿ ಮ್ಯಾಪಿಂಗ್ ಕಾರ್ಯ ಮುಗಿದಿದ್ದು, 75 ಲಕ್ಷ ಮತದಾರರನ್ನು ಈಗಾಗಲೇ ಕೈಬಿಡಲಾಗಿದೆ. ಕೈಬಿಟ್ಟಿರುವ ಮತದಾರರ ವಿವರ ನೀಡಿ ಎಂದು ಕೇಳಿದರೆ ಚುನಾವಣಾ ಆಯೋಗದ ಅಧಿಕಾರಿಗಳು ವಿವರ ನೀಡುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮ್ಯಾಪಿಂಗ್ ಕಾರ್ಯವನ್ನು ಯಾರಿಗೂ ಮಾಹಿತಿ ನೀಡದೇ ಸದ್ದಿಲ್ಲದೇ ಮುಗಿಸಿದ್ದಾರೆ. 2025ರಲ್ಲಿ ರಾಜ್ಯದಲ್ಲಿ 5.55 ಕೋಟಿ ಮತದಾರರಿದ್ದರು. ಮ್ಯಾಪಿಂಗ್, ಅಂದರೆ ಮ್ಯಾಚಿಂಗ್ ಆದವರ ಸಂಖ್ಯೆ 4.80 ಕೋಟಿ. ಪಶ್ಚಿಮ ಬಂಗಾಳದಲ್ಲಿ ಮ್ಯಾಪಿಂಗ್ ಸಮಯದಲ್ಲಿಯೇ ಎಚ್ಚೆತ್ತುಕೊಳ್ಳದೇ, ಎಸ್ಐಆರ್ ನಂತರ ಎಚ್ಚೆತ್ತುಕೊಂಡಿದ್ದರಿಂದ ಸಮಸ್ಯೆ ಆಗಿರುವುದನ್ನು ಮಮತಾ ಬ್ಯಾನರ್ಜಿಯವರೇ ಒಪ್ಪಿಕೊಂಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಇನ್ನೂ ಎಚ್ಚೆತ್ತುಕೊಂಡಿಲ್ಲ’ ಎಂದು ತಮ್ಮ ಪಕ್ಷವನ್ನೇ ದೂರಿದರು.

ಮ್ಯಾಪಿಂಗ್ ಆಗದವರ ಮನೆಗೆ ಹೋಗುವಾಗ ಬಿಎಲ್ಒಗಳೊಂದಿಗೆ ರಾಜಕೀಯ ಪಕ್ಷಗಳ ಏಜೆಂಟರೂ (ಬಿಎಲ್ಎ) ಹೋಗಲು ಅವಕಾಶವಿದೆ. ರಾಜ್ಯದಲ್ಲಿ 60 ಸಾವಿರ ಬೂತ್ಗಳಿದ್ದು, 60 ಸಾವಿರ ಬಿಎಲ್ಎಗಳ ಹೆಸರನ್ನು ಕಳುಹಿಸಿದರೆ ಚುನಾವಣಾ ಆಯೋಗವು ಕೇವಲ 28 ಸಾವಿರ ಹೆಸರನ್ನು ಅನುಮೋದನೆ ಮಾಡಿ 32 ಸಾವಿರ ಹೆಸರನ್ನು ಕೈಬಿಟ್ಟಿದೆ. ಇದು ಕೂಡ ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.

ವಿರೋಧ ಏಕೆ?: ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬಿಡದಿ ಟೌನ್ಶಿಪ್ಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಕುಮಾರಸ್ವಾಮಿ, ಅವರ ಮಗ ನಿಖಿಲ್ ಕುಮಾರಸ್ವಾಮಿ ಯಾಕೆ ವಿರೋಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-14-26338214

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.