ಗಂಗಾವತಿ: ‘ಮುಂಬರುವ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಬಿಎಲ್ಎ-2 ಕಾರ್ಯಾಗಾರ ಯುದ್ಧದ ತರಬೇತಿ ಇದ್ದಂತೆ. ಬಿಎಲ್ಎಗಳು ಬೂತ್ ಮಟ್ಟದಲ್ಲಿ ಮತದಾರಪಟ್ಟಿ ಪರಿಷ್ಕರಣೆ ಅಚ್ಚುಕಟ್ಟಾಗಿ ಮಾಡಿಸಬೇಕು. ಬಿಜೆಪಿ ಪಕ್ಷದ ಕಣ್ಣು, ಕಿವಿಯಾಗಿ ಕೆಲಸ ಮಾಡಿದರೆ, ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ’ ಎಂದು ಶಾಸಕ ಜಿ.ಜನಾರ್ದನರೆಡ್ಡಿ ಹೇಳಿದರು.

ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಖಾಸಗಿ ಹೋಟೆಲ್ನಲ್ಲಿ ಶನಿವಾರ ಬಿಜೆಪಿಯಿಂದ ನಡೆದ ಬಿಎಲ್ಎ-2 ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

‘ಬಿಎಲ್ಎ-2ಗಳು ಬಿಜೆಪಿ ಪಕ್ಷದ ಅಧಿಕೃತ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಭಾವಿಸಿದರೆ, ತಪ್ಪು ತಡೆಯಲು ಸಾಧ್ಯ. ಮತದಾರಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿ, ನ್ಯಾಯಾಲಯದ ಮೊರೆ ಹೋಗಿದ್ದು, ಅವರಿಂದಲೂ ತಡೆಯಲು ಸಾಧ್ಯವಾಗಲಿಲ್ಲ’ ಎಂದರು.

‘ಮುಸ್ಲಿಂ ಸಮುದಾಯ ಒಂದೇ ಪಕ್ಷಕ್ಕೆ ಮತದಾನ ಮಾಡಿದರೆ, ಅಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ. ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಬೇಸತ್ತು ಬೇರೆ, ಬೇರೆ ಪಕ್ಷಗಳಿಗೆ ಮತದಾನ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಮುಸ್ಲಿಮರು ಬದಲಾಗುತ್ತಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಅದು ಆಂಜನೇಯನಿಗೆ ಗೊತ್ತು’ ಎಂದು ಹೇಳಿದರು.

ಬಳ್ಳಾರಿ ವಿಭಾಗದ ಸಹ ಪ್ರಭಾರಿ ಚನ್ನಬಸವನಗೌಡ ಮಾತನಾಡಿ, ‘2002ರಲ್ಲಿ ಎಸ್ಐಆರ್ ನಡೆದಿತ್ತು. ಈಗ 23 ವರ್ಷಗಳ ನಂತರ ಮತ್ತೆ ನಡೆಯುತ್ತಿದೆ. ನಿಜವಾದ ಭಾರತೀಯ ಪ್ರಜೆ ಮತದಾನದಿಂದ ಹೊರಗುಳಿಯಬಾರದೆಂದು ಮತದಾರ ಪಟ್ಟಿ ಪರಿಷ್ಕರಣೆ ನಡೆಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ನೋಟಿಫಿಕೇಷನ್ ಹೊರಡಿಸಲಾಗುತ್ತದೆ’ ಎಂದು ಹೇಳಿದರು.

ಬಿಎಲ್ಎಗಳ ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿರುವ ಎಲ್ಲ ಬೀದಿಗಳು, ಮನೆಗಳು, ಮತದಾರರನ್ನು ಮ್ಯಾಪಿಂಗ್ ಮಾಡಬೇಕು. ಮತದಾರರ ಹೆಸರು ಸೇರ್ಪಡೆ, ತೆಗೆಸುವಿಕೆಗೆ, ತಿದ್ದುಪಡಿ ಕೆಲಸ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಮತದಾರ ಪರಿಷ್ಕರಣೆ ಅಷ್ಟೊಂದು ಕಷ್ಟವಿರಲ್ಲ. ನಗರ ಭಾಗದಲ್ಲಿ ತುಸು ಕಷ್ಟವಾಗಲಿದೆ’ ಎಂದರು.

ಇದಕ್ಕೂ ಮುನ್ನ ಬಿಜೆಪಿ ನಾಯಕರು ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಹಾಗೂ ಪಂಡಿತ ದೀನದಯಾಳ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಾಜಿ ಶಾಸಕ ಜಿ.ವೀರಪ್ಪ, ಕಾಡಾ ಮಾಜಿ ಅಧ್ಯಕ್ಷರಾದ ಗಿರೇಗೌಡ, ತಿಪ್ಪೆರುದ್ರೇಸ್ವಾಮಿ, ವಿರೂಪಾಕ್ಷಪ್ಪ ಸಿಂಗನಾಳ, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ.ಆಗೋಲಿ, ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ ಹೀರೂರು, ಮನೋಹರಗೌಡ, ಚೆನ್ನಪ್ಪ ಮಳಗಿ, ಯಮನೂರಚೌಡ್ಕಿ, ರಮೇಶ ಹೊಸಮಲಿ ಸೇರಿ ಬಿಎಲ್ಎ-2ಗಳು ಸೇರಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-35-1191935886

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.