ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಫಲಿತಾಂಶ ಮೇ 4ರಂದು ಪ್ರಕಟವಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎನ್ನಲಾಗುತ್ತಿದೆ.

ತಮಿಳುನಾಡಿನಲ್ಲಿ 2.93 ಕೋಟಿ ಮಹಿಳೆಯರು, 7,728 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 5.73 ಕೋಟಿ ಮತದಾರರಿದ್ದಾರೆ ಎಂಬುದಾಗಿ ಚುನಾವಣಾ ಆಯೋಗವು ನಾಮಪತ್ರ ಸಲ್ಲಿಕೆಯ ಕೊನೇ ದಿನ ಮಾಹಿತಿ ನೀಡಿತ್ತು.

18ರಿಂದ 29 ವರ್ಷದೊಳಗಿನ ಸುಮಾರು 1.22 ಕೋಟಿ ಮತದಾರರಿದ್ದಾರೆ. ಅದರಲ್ಲೂ ಮೊದಲ ಬಾರಿಗೆ ಮತ ಚಲಾಯಿಸುವವರು 14.59 ಲಕ್ಷ ಮಂದಿ ಇದ್ದಾರೆ ಎಂಬುದಾಗಿಯೂ ತಿಳಿಸಿತ್ತು. ಇಷ್ಟು ದೊಡ್ಡ ಸಂಖ್ಯೆಯ ಯುವ ಮತದಾರರು ಚುನಾವಣಾ ಫಲಿತಾಂಶದ ಮೇಲೆ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎನ್ನಲಾಗುತ್ತಿದೆ.

ಮೊದಲ ಸಲ ಮತದಾನ ಮಾಡುವ ಅರ್ಹತೆಯುಳ್ಳ ಹಲವರನ್ನು ಚುನಾವಣಾ ಪೂರ್ವದಲ್ಲಿ ಸಂದರ್ಶಿಸಿದ್ದ ಮಾಧ್ಯಮಗಳು, ಸಾಮಾಜಿಕ ವಿಚಾರಗಳಿಗೆ ಈ ವರ್ಗದವರ ಆದ್ಯತೆ ಎಂಬುದಾಗಿ ವರದಿ ಮಾಡಿದ್ದವು.

ಮಹಿಳಾ ಸಬಲೀಕರಣ, ಹೆಣ್ಣು ಮಕ್ಕಳಿಗೆ ಸುರಕ್ಷತೆ, ಗುಣಮಟ್ಟದ ಆರೋಗ್ಯ, ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಒತ್ತು ನೀಡುವುದಾಗಿ ಹಲವರು ಹೇಳಿದ್ದರು. ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಬೇಕು ಎಂಬುದಾಗಿ ಸಾಕಷ್ಟು ಯುವಕರು ಅಭಿಪ್ರಾಯ ಹಂಚಿಕೊಂಡಿದ್ದರು. ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು. ದ್ರಾವಿಡ ಪಕ್ಷಗಳಿಗೆ ಪರ್ಯಾಯವಾಗಬಲ್ಲ ಆಯ್ಕೆಯೊಂದನ್ನು ಎದುರು ನೋಡುತ್ತಿದ್ದೇವೆ ಎಂಬುದಾಗಿಯೂ ಹಲವರು ಹೇಳಿದ್ದರು.
.ಕಾಂಗ್ರೆಸ್, ಎಡ ಪಕ್ಷಗಳೊಂದಿಗೆ ಮಾತುಕತೆಗೆ ವಿಜಯ್ 'ಟಿವಿಕೆ' ಸಿದ್ಧತೆ!.Tamil Nadu Election: ಡಿಎಂಕೆ ಭದ್ರಕೋಟೆಗೆ ನುಗ್ಗುವ ಧೈರ್ಯ ಮಾಡಿದ್ದೇಕೆ ವಿಜಯ್?.
ಅದಕ್ಕೆ ತಕ್ಕಂತೆ, ಚುನಾವಣಾ ಪೂರ್ವ ಸಮಾವೇಶಗಳಲ್ಲಿ ವಿಜಯ್ ಅವರೂ ಈ ವಿಚಾರಗಳನ್ನೇ ಪ್ರತಿಪಾದಿಸಿ ಯುವಕರನ್ನು, ಮಹಿಳೆಯರನ್ನು ಸೆಳೆಯುವ ಪ್ರಯತ್ನ ಮಾಡಿದ್ದರು. ಈ ಅಂಶಗಳನ್ನು ಮುಖ್ಯವಾಗಿಸಿಕೊಂಡೇ ಪಕ್ಷದ ಪ್ರಣಾಳಿಕೆಯನ್ನೂ ಸಿದ್ಧಪಡಿಸಿದ್ದರು.

ಎಐ ವಿಶ್ವವಿದ್ಯಾಲಯ, ಎಐ ನಗರ ನಿರ್ಮಾಣ, ವಿಜ್ಞಾನ – ತಂತ್ರಜ್ಞಾನಕ್ಕೆ ಒತ್ತು ನೀಡುವುದೂ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸುವುದಾಗಿ ವಿಜಯ್ ಘೋಷಿಸಿದ್ದರು. ಇವಷ್ಟೇ ಅಲ್ಲದೆ, ಟಿವಿಕೆ ಪಕ್ಷದ ಕಾರ್ಯಸೂಚಿ, ಪ್ರಣಾಳಿಕೆ, ಭವಿಷ್ಯದ ಯೋಜನೆಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿಯೂ ವ್ಯವಸ್ಥಿತವಾಗಿ ಪ್ರಚಾರ ಮಾಡಲಾಯಿತು.ಯುವಕರನ್ನು ಸೆಳೆಯುವಲ್ಲಿ ಇವು ನಿರ್ಣಾಯಕ ಪಾತ್ರ ವಹಿಸಿದವು ಎನ್ನಲಾಗುತ್ತಿದೆ.

ಹೀಗಾಗಿ, ಜೆನ್–ಝೀ ವರ್ಗದ ಮತದಾರರು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿದ್ದಾರೆ. ಜನರು ದ್ರಾವಿಡ ಪಕ್ಷಗಳಿಗೆ ಪರ್ಯಾಯವೊಂದನ್ನು ಎದುರು ನೋಡುತ್ತಿದ್ದಾಗಲೇ ರಾಜಕೀಯ ಪ್ರವೇಶಿಸಿದ್ದೂ ವಿಜಯ್ಗೆ ವರದಾನವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.
.ಬಂಗಾಳದಲ್ಲಿ ಕೇವಲ ಶೇ 5 ಮತಗಳಿಂದ 125 ಸ್ಥಾನಗಳ ಅಂತರ: ತಮಿಳುನಾಡಿನ ಕಥೆಯೇನು?.ಪೆರಂಬೂರು ಉಳಿಸಿಕೊಂಡು ತಿರುಚಿ ಕ್ಷೇತ್ರಕ್ಕೆ ವಿಜಯ್ ರಾಜೀನಾಮೆ ಸಾಧ್ಯತೆ; ವರದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.