ಹಾಸನ: ‘ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆ ವೇಳೆ ಅಂಚೆ ಮತಪತ್ರಗಳನ್ನು ತಿದ್ದಿ ಮತ ಕಳವು ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಳೆದ ಬಾರಿ ಮತ ಎಣಿಕೆ ಆದ ನಂತರ ಕೆಲವು ಅಂಚೆ ಮತಪತ್ರಗಳನ್ನು ತಿದ್ದಿದ್ದಾರೆ. ಎಣಿಸಿ ಎಲ್ಲ ಪಕ್ಷದ ಏಜೆಂಟರು ಒಪ್ಪಿ ಸಹಿ ಹಾಕಿದ್ದಾರೆ. ಆದರೆ ಈ ಬಾರಿ ರಾಜೇಗೌಡರಿಗೆ ಬಿದ್ದಿದ್ದ ಮತಪತ್ರಗಳಲ್ಲಿ ಕೆಳಭಾಗದಲ್ಲಿ ಬೇರೆ ಇಂಕ್ ಉಪಯೋಗಿಸಿ, ಬೇರೆ ಅಭ್ಯರ್ಥಿಗಳಿಗೂ ಟಿಕ್ ಮಾರ್ಕ್ ಮಾಡಿ, ವೋಟು ಹಾಕಿದಂತೆ ಮಾಡಿ ಆ ಓಟುಗಳನ್ನು ತಿರಸ್ಕೃತ ಮಾಡಿದ್ದಾರೆ’ ಎಂದು ದೂರಿದರು.

‘ಇದು ಸಂಪೂರ್ಣ ಕ್ರಿಮಿನಲ್ ಸಂಚು. ಯಾವುದೇ ಅನುಮಾನವಿಲ್ಲ. ಸತ್ಯ ಹೊರಗೆ ಬರಬೇಕಾದರೆ ತನಿಖೆಯಾಗಬೇಕು. ಎಫ್ಎಸ್ಎಲ್ಗೆ ಕಳುಹಿಸಿ, ಮೇಲ್ಭಾಗದಲ್ಲಿ ಟಿಕ್ ಮಾಡಿರುವ ಇಂಕ್ ಹಾಗೂ ಕೆಳಭಾಗದಲ್ಲಿ ಟಿಕ್ ಮಾಡಿ ರುವ ಇಂಕ್ ಸಾಮ್ಯತೆಯನ್ನು ಪರೀಕ್ಷಿ ಸಬೇಕು’ ಎಂದು ಕಿಡಿಕಾರಿದರು.

‘ಕೆಲವು ಅಧಿಕಾರಿಗಳು ರಾಜೇಗೌಡರಿಗೆ ಬಂದಿದ್ದ ಮತಪತ್ರಗಳನ್ನು ಒಂದೇ ಬಂಡಲ್ನಲ್ಲಿಟ್ಟು, ಅದರಲ್ಲಿ ಬೇರೆ ಅಭ್ಯರ್ಥಿಗಳಿಗೆ ಟಿಕ್ ಮಾರ್ಕ್ ಮಾಡಿದ್ದಾರೆ. ಆ ಬಂಡಲ್ ಎಣಿಕೆ ಆದಾಗ ತೆರೆದಿತ್ತು. ಅಲ್ಲಿಗೆ ಟ್ಯಾಂಪರಿಂಗ್ ಆಗಿದೆ. ತನಿಖೆಯಾಗಲೇಬೇಕು’ ಎಂದು ದೂರಿದರು.

‘ಪಶ್ಚಿಮ ಬಂಗಾಳದಲ್ಲಿ ಸಿಬಿಐ, ಇಡಿ, ಐಟಿ, ಚುನಾವಣಾ ಆಯೋಗ, ಎಸ್ಐಆರ್ ಎಲ್ಲವನ್ನೂ ದುರುಪಯೋಗಪಡಿಸಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮಮತಾ ಬ್ಯಾನರ್ಜಿ ಅವರಿಗೆ ಕೊಡಬಾರದ ಹಿಂಸೆ ಕೊಟ್ಟು, ಕೈ-ಕಾಲು ಕಟ್ಟಿ ಹಾಕಿ ಅಧಿಕಾರಕ್ಕೆ ಬಂದಿರಬಹುದು. ಜನರ ತೀರ್ಪನ್ನು ಸಮಚಿತ್ತದಿಂದ ಸ್ವೀಕರಿಸುತ್ತೇವೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-126-478005464

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.