ಹಿರಿಯೂರು: ನಗರದಲ್ಲಿ ಸಚಿವ ಡಿ. ಸುಧಾಕರ್ ಅವರಿಗೆ ನುಡಿ–ನಮನ ಹಾಗೂ ಶ್ರದ್ಧಾಂಜಲಿ ಸಭೆ ನಡೆಸುವ ಕುರಿತು ಬುಧವಾರ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯು ಹಿರಿಯೂರು ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಸುಧಾಕರ್ ಪುತ್ರ ಸುಹಾಸ್ ಅವರ ರಾಜಕೀಯ ಪ್ರವೇಶಕ್ಕೆ ಮುನ್ನುಡಿ ಬರೆಯಿತು.

ನೂರಾರು ಸಂಖ್ಯೆಯಲ್ಲಿ ಸಭೆಗೆ ಬಂದಿದ್ದ ಮುಖಂಡರು, ಕಾರ್ಯಕರ್ತರು ನುಡಿ–ನಮನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಯ ನಿಗದಿಪಡಿಸಬೇಕು. ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಮುಖಂಡರನ್ನು ಸಭೆಗೆ ಆಹ್ವಾನಿಸಬೇಕು ಎಂಬ ಸಲಹೆ ನೀಡಿದರು.

ಸುಹಾಸ್ ಕೇಂದ್ರ ವ್ಯಕ್ತಿ: ಸಭೆಗೆ ಸುಧಾಕರ್ ಸಹೋದರರಾದ ಡಿ.ಕುಮಾರ್, ಡಿ. ಸುರೇಶ್, ಅಳಿಯ ನಿತೀಶ್ ಆಗಮಿಸಿದ್ದರೂ ಎಲ್ಲರ ಕೇಂದ್ರ ಬಿಂದು ಸುಧಾಕರ್ ಪುತ್ರ ಸುಹಾಸ್ ಆಗಿದ್ದರು.

ಸಭೆಯಲ್ಲಿ ಮಾತನಾಡಿದ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ, ಐನಹಳ್ಳಿ ಅಮೃತೇಶ್ವರ್, ಗೀತಾ ನಾಗಕುಮಾರ್, ಈ. ಮಂಜುನಾಥ್, ದಿಂಡಾವರ ಶ್ರೀನಿವಾಸ್, ಹರ್ತಿಕೋಟೆ ಮಹಾಂತೇಶ್, ಅಂಬಿಕಾ ಆರಾಧ್ಯ, ರಮ್ಯಾ ಮೊದಲಾದವರು ಸುಧಾಕರ್ ಹೆಸರು ಉಳಿಸಲು ಉಪ ಚುನಾವಣೆಯಲ್ಲಿ ಸುಹಾಸ್ ಕಣಕ್ಕೆ ಇಳಿಯಲೇಬೇಕು ಎಂದು ಆಗ್ರಹಿಸಿದರು.

‘ಕ್ಷೇತ್ರದ ಜನರ ಮೇಲೆ ಸುಧಾಕರ್ ಋಣ ಸಾಕಷ್ಟಿದೆ. ಅವರಿಂದ ಸಹಾಯ ಪಡೆಯದವರೇ ವಿರಳ. ಶಿಕ್ಷಣ, ಆರೋಗ್ಯ, ಕಲ್ಯಾಣ ಕಾರ್ಯಕ್ರಮ, ಮನೆ ನಿರ್ಮಾಣ ಸೇರಿ ಹತ್ತು ಹಲವು ಕಾರ್ಯಕ್ರಮಗಳಿಗೆ ಕೈತುಂಬ ದಾನ ನೀಡಿದ್ದಾರೆ. ಹೀಗಾಗಿ ಅವರ ಪುತ್ರನನ್ನು ಉಪಚುನಾವಣೆಯಲ್ಲಿ ಗೆಲ್ಲಿಸುವ ಹೊಣೆ ಎಲ್ಲರ ಮೇಲಿದೆ’ ಎಂದು ಮುಖಂಡರು ಸ್ಪಷ್ಟಪಡಿಸಿದರು.

‘ಮೃತರ ಕುಟುಂಬದವರಿಗೆ ಟಿಕೆಟ್ ನೀಡುವ ಸಂಪ್ರದಾಯ ನಮ್ಮ ಪಕ್ಷದಲ್ಲಿದೆ. ಸುಹಾಸ್ ಅವರಿಗೇ ಟಿಕೆಟ್ ನೀಡುವಂತೆ ಒಕ್ಕೊರಲಿನಿಂದ ಪಕ್ಷದ ವರಿಷ್ಠರಿಗೆ ಮನವಿ ಮಾಡೋಣ. ಎಲ್ಲಾ ಲಾಬಿಗಳನ್ನು ಒಗ್ಗಟ್ಟಿನಿಂದ ಎದುರಿಸಿ, ಕೈಯಿಂದ ಸ್ವಂತ ಹಣ ಹಾಕಿ ಉಪಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಅಭೂತಪೂರ್ವ ಗೆಲುವು ತಂದು ಕೊಡಬೇಕು. ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸೋಣ’ ಎಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಮನವಿ ಮಾಡಿದರು.

‘ಬೆಂಗಳೂರಿಗೆ ಹೋಗಿ ಸಿ.ಎಂ, ಡಿಸಿಎಂ ಹಾಗೂ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ನುಡಿ–ನಮನಕ್ಕೆ ದಿನಾಂಕ ನಿಗದಿ ಪಡಿಸಲಾಗುವುದು. ಮೇ 24ರಂದು ಚಳ್ಳಕೆರೆಯಲ್ಲಿ ನಮ್ಮ ಕುಟುಂಬದಿಂದ ಹಮ್ಮಿಕೊಂಡಿರುವ ತಂದೆಯವರ ಶಾಂತಿಪೂಜೆ, ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ನಮ್ಮ ತಂದೆಯವರ ಆತ್ಮಕ್ಕೆ ಶಾಂತಿ ಕೋರಬೇಕು’ ಎಂದು ಸುಹಾಸ್ ಸುಧಾಕರ್ ಮನವಿ ಮಾಡಿದರು.

ಕಾಂಗ್ರೆಸ್ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳು, ಹಾಲಿ, ಮಾಜಿ ಚುನಾಯಿತ ಪ್ರತಿನಿಧಿಗಳು, ಕೆಪಿಸಿಸಿ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು, ಕೃಷಿಕ ಸಮಾಜದ ಪದಾಧಿಕಾರಿಗಳು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರು ಸದಸ್ಯರು ಹಾಜರಿದ್ದರು.

ಸಭೆಗೆ ಮೊದಲು ಡಿ. ಸುಧಾಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-44-49196514

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.