ಹುಬ್ಬಳ್ಳಿ: ಪಶ್ಚಿಮ ಬಂಗಾಳ, ಪುದುಚೇರಿ ಮತ್ತು ಅಸ್ಸಾಂ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೈತ್ರಿಕೂಟ ಜಯಗಳಿಸಿದ ಹಿನ್ನೆಲೆಯಲ್ಲಿ ನಗರದ ದುರ್ಗದ ಬೈಲ್ ವೃತ್ತದಲ್ಲಿ ಸೋಮವಾರ ಹು–ಧಾ ಮಹಾನಗರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಿಸಿದರು. ಪರಸ್ಪರ ಸಿಹಿ ತಿನ್ನಿಸಿ, ಪಟಾಕಿ ಸಿಡಿಸಿದರು.

ದುರ್ಗದ ಬೈಲ್ ವೃತ್ತದ ಸುತ್ತಮುತ್ತ ಇರುವ ವ್ಯಾಪಾರಸ್ಥರಿಗೆ ಸಿಹಿ ವಿತರಿಸಿ, ಸೆಲ್ಫಿ ತೆಗೆದುಕೊಂಡರು. ಬಿಜೆಪಿ ಪರ ಘೋಷಣೆ ಕೂಗಿ, ಪಕ್ಷದ ಬಾವುಟಕ್ಕೆ ಪುಷ್ಪವೃಷ್ಟಿ ಮಾಡಿದರು.

‘ಪಶ್ಚಿಮ ಬಂಗಾಲದಲ್ಲಿ ಗೆಲುವು ಸಾಧಿಸುವುದು ಸವಾಲಾಗಿತ್ತು. 15 ವರ್ಷ ಆಡಳಿತ ನಡೆಸಿದ ಮಮತಾಬ್ಯಾನರ್ಜಿ ಅವರ ಟಿಎಂಸಿ ಪಕ್ಷವನ್ನು ಮತದಾರರು ಸೋಲಿಸಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ತಮಿಳುನಾಡಿನಲ್ಲಿ ಬಹುಮತ ಸಿಗದಿದ್ದರೂ ಉತ್ತಮ ಫಲಿತಾಂಶ ದೊರಕಿದೆ’ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

‘ರಾಜ್ಯದಲ್ಲಿ ನಡೆದ ಉಪ ಚುನಾವಣೆ ಫಲಿತಾಂಶ ನಿರಸವಾಗಿದೆ. ಎರಡರಲ್ಲಿ ಒಂದು ಕ್ಷೇತ್ರದಲ್ಲಾದರೂ ಗೆಲ್ಲುವ ನಿರೀಕ್ಷೆಯಿತ್ತು. ಸೋಲಿಗೆ ಕಾರಣವೇನು ಎನ್ನುವ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ’ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳಿಂದ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಈ ಬಾರಿಯ ಚುನಾವಣೆಯಲ್ಲಿ ಶೇ 92ರಷ್ಟು ಮತದಾನವಾಗಿದ್ದು, ಬಿಜೆಪಿ ಗೆಲುವಿಗೆ ಕಾರಣವಾಗಿದೆ. 5 ರಾಜ್ಯಗಳಲ್ಲಿ ಮೂರು ರಾಜ್ಯಗಳನ್ನು ಗೆದ್ದಿದ್ದು, ತಮಿಳುನಾಡಿನಲ್ಲಿ ಎನ್ಡಿಎ ಒಕ್ಕೂಟದ ಪಕ್ಷ ಗೆಲುವು ಸಾಧಿಸಿದೆ. ರಾಜ್ಯದ ಉಪ ಚುನಾವಣೆಯಲ್ಲಿ ಹಿನ್ನಡೆಯಾಗಿದೆ’ ಎಂದು ಹೇಳಿದರು.

ಮುಖಂಡರಾದ ತಿಪ್ಪಣ್ಣ ಮಜ್ಜಗಿ,ಅಶೋಕ ಕಾಟವೆ, ಜ್ಯೋತಿ ಪಾಟೀಲ, ಸಂತೋಷ ಚವ್ಹಾಣ್, ಪ್ರವೀಣ ಪವಾರ, ರಾಮನಗೌಡ ಶೆಟ್ಟಿನಗೌಡ್ರ, ಅಕ್ಕಮ್ಮ ಹೆಗಡೆ, ಅರ್ಚನಾ ಕೆ.,ಉಮಾ ಮುಕುಂದ, ಶಿವು ಮೆಣಸಿನಕಾಯಿ, ಬೀರಪ್ಪ ಖಂಡೆಕರ, ಪ್ರಭು ನವಲಗುಂದಮಠ, ರಾಜು ಕೋರ್ಯಾಣಮಠ, ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-24-992859080

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.