ಕಂಪ್ಲಿ: ‘ಕಂಪ್ಲಿ ವಿಧಾನಸಭಾಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಅಧಿಕವಿರುವುದರಿಂದ ಮುಂದಿನ ಚುನಾವಣೆ ವೇಳೆಗೆ ಮಹಿಳಾ ಮೀಸಲು ಕ್ಷೇತ್ರವಾಗುವ ಸಾಧ್ಯತೆ ಇದೆ’ ಎಂದು ಶಾಸಕ ಜೆ.ಎನ್. ಗಣೇಶ್ ಅಭಿಪ್ರಾಯಪಟ್ಟರು.

ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ₹ 7ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ, ಒಂದು ವೇಳೆ ಮೊದಲಿನಂತೆ ಮೀಸಲು ಮುಂದುವರಿದರೆ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಆದ್ಯತೆ ನೀಡುವುದಾಗಿ ತಿಳಿಸಿದರು.

‘ಬಿಜೆಪಿಗೆ ಮತಬ್ಯಾಂಕ್ ಹೆಚ್ಚಳ ಇರುವಲ್ಲಿ ಮಾತ್ರ ಅಧಿಕ ಕ್ಷೇತ್ರಗಳು ಪುನರ್ವಿಂಗಡಣೆಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ’ ಎಂದು ದೂರಿದರು.

₹ 7 ಕೋಟಿ ವೆಚ್ಚದಲ್ಲಿ ಕಂಪ್ಲಿಯ ಅಂಬೇಡ್ಕರ್ ವೃತ್ತದಿಂದ ಕೊಟ್ಟಾಲ್ ರಸ್ತೆ, ಮಾವಿನಹಳ್ಳಿಯಿಂದ ಶ್ರೀರಾಮರಂಗಾಪುರದವರೆಗಿನ ರಸ್ತೆ, ಕೊಟ್ಟಾಲ್ ಕ್ರಾಸ್ನಿಂದ ದೇವಸಮುದ್ರ ಗ್ರಾಮದವರೆಗಿನ ರಸ್ತೆ, ರಾಮದೇವರಗುಡಿಯಿಂದ ಸಣಾಪುರ ರಸ್ತೆ ಅಭಿವೃದ್ಧಿಗೆ ಶಾಸಕರು ಚಾಲನೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಎಪಿಎಂಸಿ ಅಧ್ಯಕ್ಷ ಎನ್. ಹಬೀಬ್ ರೆಹಮಾನ್, ಪ್ರಮುಖರಾದ ಎಂ. ಸುಧೀರ್, ಕೆ.ಎಸ್. ಚಾಂದ್ಬಾಷ, ಕೆ. ಮಸ್ತಾನ್, ಬಿ. ಸಿದ್ದಪ್ಪ, ಜಿ. ರಾಮಣ್ಣ, ಬಿ. ನಾರಾಯಣಪ್ಪ, ಎಲ್. ರಾಮನಾಯ್ಡು, ಎಂ. ಗೋಪಾಲ, ಲಡ್ಡು ಹೊನ್ನೂರವಲಿ, ಹೊನ್ನೂರಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-25-1308533072

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.